ಪುಟ:ದಕ್ಷಕನ್ಯಾ .djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೩ ದ ಕ ಕ ನ್ಯಾ ಹೀಗೂ ೩-೪ ವರ್ಷಗಳಾದುವು. ಕಡೆಗೆ ಈಗ ೧೦ ತಿಂಗಳ ಮೊದಲು, ನಮ್ಮ ತಂದೆಯ ಹಸ್ತಾಕ್ಷರ, ಮೊಹರು ಮುದ್ರೆಗಳಿಂದ ಕ್ರಮ ವಾಗಿ ನಮ್ಮ ತಾಯಿಯ ಹೆಸರಿಗೆ ಮಕ್ಕಳೊಡನೆ ಹೊರಟುಬರಬೇಕೆಂಬ ಅರ್ಧದಿಂದ ಬರೆಯಲ್ಪಟ್ಟ ಪತ್ರವು ನಮ್ಮ ಕೈಸೇರಿತು, ಅದರಿಂದ ಆವ ರೆಗೂ ನಮಗೆ ಬರುತ್ತಿದ್ದ ಪತ್ರಗಳು ಇತರರ ಕೈಬರೆಹವೆಂಬುದೇ ದೃಢಪ ಟ್ವಿತಲ್ಲದೆ, ಹೀಗಾಗಲು ಕಾರಣವೇನೆಂಬ ಶಂಕೆಯೂ ಉಂಟಾಯಿತು. ಹೇಗಾದರೂ ಆಗಲಿ, ಮತ್ತೆ ಸತಿಸಾಮಿಾಪ್ಯವನ್ನು ಸೇರಿದರೆ ಸಾ ಕೆಂಬ ಒಂದೇಹಟದಿಂದ ನಮ್ಮ ತಾಯಿಯು, ನಮ್ಮೊಡನೆ-ತಂದೆಯ ಮನೆ ಯಾಳುಗಳ ಸಹಾಯದಿಂದ ಹೊರಟಳು. ಬರುವ ದಾರಿಯಲ್ಲಿ, ಗೊಲ್ಲರಪಾ ಗ್ಯದ ಸತ್ರಾಧಿಪತಿಯು ಕಾದಿದ್ದು, ನಮ್ಮನ್ನು ಬಹುವಿಧವಾಗಿ ಪ್ರಾರ್ಥಿಸಿ, ಆಹಾರವನ್ನು ತೆಗೆದುಕೊಂಡು ಹೋಗಲು, ನಮ್ಮನ್ನು ಬಿಡದೆ ಕರೆದೊ ಯು, ನಮ್ಮನ್ನು ಪಚರಿಸಿದ ಬಳಿಕ ಮತ್ತೆ ಬೀಳ್ಕೊಟ್ಟನು. ಅಲ್ಲಿ ತೆಗೆದು ಕೊಂಡ ಮಾದಕ ದ್ರವ್ಯ ಸೇವನೆಯಿಂದ ಎಲ್ಲರೂ ಮೈಮರೆತು ಬಂಡಿಯಲ್ಲಿ ಒರಗಿದ್ದೆವು. ಬಾಲ್ಯ ಚಾಪಲ್ಯದಿಂದ ನನಗೆ ಮಾತ್ರ ನಿದ್ದೆ ಹತ್ತಲಾರದಿ ದ್ದಿತು. ನಾಲ್ಕಾರು ಮೈಲಿಗಳನ್ನು ದಾಟಿ ಬರುವುದರೊಳಗಾಗಿಯೇ ಬಂಡಿಯನ್ನೇ ಅನುಸರಿಸಿ ಬಂದ ಸುಸಂಧನು, ಸದ್ದು ಮಾಡದೆ ನನ್ನನ್ನು ಎತ್ತಿ ಹೆಗಲಮೇಲೇರಿಸಿ, ಒಂದೇ ಓಟದಿಂದ ಓಡಿದನು. ಅವನ ಹಿಂದೆ ಬಲವಂತನೂ ಓಡಿಬಂದನು, ಬಂಡಿಯಿದ್ದಲ್ಲಿಗೆ-ಮೆಳೆಗಳಲ್ಲಿ ಅಡಗಿದ್ದ ಕಳ್ಳರು ಓಡಿಹೋದರು. ಅಲ್ಲಿ ನಡೆದುದನ್ನು ನಾನು ಕಣ್ಣಾರೆ ನೋಡ ಲಾಗಲಿಲ್ಲ ಬಲವಂತ-ಸುಸಂಧರು ನನ್ನನ್ನು ಹೊತ್ತು ಕೊಂಡುಹೋಗಿ, ಒಂದು ಪಾಳುಮನೆಯಲ್ಲಿ ಕೂಡಿ, ಆಹಾರವನ್ನು ಕೊಡುವ ನೆಪವಿಟ್ಟು, ದಿನಕ್ಕೆ ರಡುಬಾರಿಯಾದರೂ ತಪ್ಪದೆ ಬಂದು, ನಾನು ಸುಸಂಧನನ್ನು ಮದುವೆ ಯಾಗಲೊಪ್ಪಬೇಕೆಂದು ನನ್ನನ್ನು ನಿರ್ಬಂಧ ಮಾಡುತ್ತಿದ್ದರು, ನಾನು