ಪುಟ:ದಕ್ಷಕನ್ಯಾ .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೪ ಸ ತಿ ಹಿ ತ್ಯ ಷಿ ಣಿ ಆ ವೇಳೆಯಲ್ಲಿ, ಉಸಿರೆತ್ತದೆ ಅಳುವೊಂದರಿಂದಲೇ ಪರವಸಾನ ಮಾಡುತ್ತಿ ದ್ದುದರಿಂದ, ಅವರ ದೆಸೆಯಿಂದುಂಟಾದ ಅನೇಕ ವಿಧವಾದ ಹಿಂಸೆಗಳಿಗೂ ಸಿಕ್ಕಿ ಪರಿತಪಿಸುತ್ತಿದ್ದೆನು. ಹೆಚ್ಚು ದಿನಗಳು ಹಾಗೆ ನಡೆಯಲಿಲ್ಲ. ಒಂದುವಾರಾವಧಿ ಮಾತ್ರ ವೇ, ಅಷ್ಟರಲ್ಲಿಯೇ ಧರ್ಮಸಂಸ್ಥಾಪಕರಾದ ಧರ್ಮಪಾಲರು, ವಿದ್ರೋಹಿ ಗಳ ಕಡೆಯ ನರಸಿಂಗನೆಂಬ ದೂತನನ್ನು ಕೈವಶಪಡಿಸಿಕೊಂಡು, ಅವನಿಂದ ಅಲ್ಲಿಯ ರಹಸ್ಯವೆಲ್ಲವನ್ನೂ ತಿಳಿದು, ಅದೇ ವೇಷವನ್ನು ಧರಿಸಿ, ವಿದ್ರೋಹಿ ಗಳನ್ನು ವಂಚಿಸಿ ಬಂದು, ಮೊದಲುದಿನದಲ್ಲಿ ನನ್ನನ್ನು ಪತ್ರಮುಖದಿಂದೆ ಜ್ಞರಿಸಿ ಹೋದರು. ಮರುದಿನದ ರಾತ್ರಿಯಲ್ಲಿ ಮತ್ತೆ ಬಂದು ನಿಜಸರಿ ಚಯವನ್ನುಂಟುಮಾಡಿ, ನನ್ನ ಆತ್ಮರಕ್ಷಣೆಗಾಗಿ ಸಣ್ಣ ತುಬಾಕಿಯೊಂ ದನ್ನು ಪ್ರಯೋಗೋಪಸಂಹಾರ ಕ್ರಮಗಳೊಡನೆ ನನ್ನ ಕೈಗಿತ್ತು, ನನ್ನ ಬಿಡುಗಡೆಗೆ ಬೇಕಾದ ಉಪಾಯಗಳನ್ನು ಸೂಚಿಸಿ, ಸಲಕರಣೆಗಳನ್ನೂ ಕೊಟ್ಟು, ಅಭಯವಿತ್ತು ತೆರಳಿದರು. ಇದಾದ ಮರುದಿನ ಮಧ್ಯಾಹ್ನ ದಲ್ಲಿ ಆಹಾರವನ್ನು ತಂದ ಬಲವಂತನನ್ನು ನಾನು, ಧರ್ಮಪಾಲರ ಸೂಚನೆ ಯಂತೆ ವೇಷಾಂತರದಿಂದ ವಂಚಿಸಿ, ಅವನನ್ನು ಬಂದಿಯಾಗಿ ಮಾಡಿ ಹೊರಟು, ನನ್ನ ತಿಳಿವಿಗಾಗಿ ಅಲ್ಲಲ್ಲಿ ದಾರಿಯುದ್ದಕ್ಕೂ ಚೆಲ್ಲಿದ್ದ ಕಾಡು ಸೌದೆಗಳನ್ನು ಆರಿಸುತ್ತ, ನೋಡುವವರಿಗೆ ಅನುಮಾನವಾಗದಂತೆ ಹಾಗೆಯೇ ಚೌಕದ ಬಳಿಗೆ ಬಂದೆನು. ಅಷ್ಟರಲ್ಲಿಯೇ ಒಂದು, ತಡೆಗಟ್ಟಿದ ಚೌಕದ ಕಳ್ಳರನ್ನು ಪ್ರತಿಭಟಿಸಿ ತುಬಾಕಿ ಮದ್ದಿನಿಂದ ಅವರಲ್ಲಿ ಒಬ್ಬಿಬ್ಬರನ್ನು ಕೆಳಗೆ ಬೀಳಸಿದೆನು. ಅಷ್ಟರಲ್ಲಿಯೇ ನನ್ನ ಸಹಾಯಕ್ಕಾಗಿ ಪೊಲೀಸು ಆಳಿನ ವೇಷದಲ್ಲಿ ಬಂದ ಧರ್ಮಪಾಲರು, ನನ್ನನ್ನು ತಮ್ಮೊಡನೆ ಇಲ್ಲಿಗೆ ಕರೆತಂದರು. ನನ್ನನ್ನು ಕರೆತಂದುದು ಮೊದಲು ಧರ್ಮಪಾಲರು ನನಗೆ ಈ ವೇಷವನ್ನೂ, ಈ ಕೃತಾಂತನಾಮಕರಣವನ್ನೂ ವಿಧಿಸಿದುದಲ್ಲದೆ ಅಹೋ