ಪುಟ:ದಕ್ಷಕನ್ಯಾ .djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಸJ ಹಿತ್ಯ ಷಿ ಣಿ ಇಬ್ಬರು ಮುಸಲ್ಮಾನರು ಪ್ರಾಕಾರದ ಬಾಗಿಲನ್ನು ಹತ್ತಿ ಕೆಳಗೆ ಧುಮ್ಮಿಕ್ಕಿ ನನ್ನ ಬಳಿಗೆ ಬಂದುದನ್ನು ನೋಡಿ, ನಾನು ಊಟಕ್ಕೆ ಹೋಗಿದ್ದ ನಮ್ಮವರೇ ಬರುತ್ತಿರುವರೆಂದು ಸುಮ್ಮನಿದ್ದೆನು. ಆದರೆ, ಆ ನನ್ನ ಊಹೆಯು ತಪ್ಪಾಗಿ, ಅವರು ಹಾರಿಬಂದು ನನ್ನ ಮೇಲೆ ಬಿದ್ದು, ಬಾಯಿಗೆ ಬಟ್ಟೆಯನ್ನು ತುರುಕಿ, ಕೈಕಾಲುಗೆ ಇನ್ನು ಕಟ್ಟಿ, ತಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವುದಕ್ಕೆ ದಾರಿ ಯಾಯಿತು. ರಾಧಾನಾಧ-ಅವರಿಗೆ ಬಾಗಿಲನ್ನು ತೆರೆದವರಾರು ? ಅವರು ಒಳಗೆ ಹೋದುದು ಹೇಗೆ ? ಬಂದುದೆಲ್ಲಿಂದ ? ವಿಷಕಂಠ-ಒಳಗಿದ್ದು ಬಾಗಿಲನ್ನು ತೆರೆದವನೇ ಈ ಯಶವಂತನಾಗಿರ ಬೇಕು, ಆದರೆ, ನಿರ್ಧರವಾಗಿ ಹೇಳಲಾರೆನು. ಇವರು ಒಳಬಾಗಿ ಲಿಂದಲೇ ಮನೆಯೊಳ ಹೊಕ್ಕು ಬಾಗಿಲನ್ನು ಮುಚ್ಚಿದರು ; ಮತ್ತೆ ಹೊರಗೆ ಹೋದುದು ಯಾವಾಗಲೋ, ಎಲ್ಲಿಂದಲೋ, ಒಳಗೆ ಏನುಮಾಡಿದರೋ ನನಗೊಂದೂ ತಿಳಿಯದು, ಹೇಗೂ ರಾತ್ರಿ ಎಷ್ಟೋ ಹೊತ್ತಿನ ಮೇಲೆ, ನಮ್ಮ ಜಮೀನ್ದಾರರೇ ಶ್ರೀದತ್ತ ಕುಮಾರರೊಡನೆ ಬಂದು ನೋಡಿ, ನನ್ನ ಕಟ್ಟನ್ನು ಬಿಚ್ಚಿದರು. ಮರುದಿನವೇ ಕಿರಿಯ ಯಜಮಾನಿಯವರ-ಒಡವೆ ವಸ್ತುಗಳೆಲ್ಲವೂ ಕಳುವಾದುವೆಂಬ ವದಂತಿ ಹುಟ್ಟಿತು. ರಾಧಾನಾಧ-.ಹೋಗಲಿ ; ನೀನು ಯಾವ ಅಪರಾಧಕ್ಕಾಗಿ, ಸರ್ಕಾರ ದವರ ವಶಪಡಿಸಲ್ಪಟ್ಟಿ ? ವಿಷಕಂಠ-ಮಹಾಸ್ವಾಮಿ ! ನಾನು ಯಾವ ತಪ್ಪನ್ನೂ ಮಾಡಿದವನಲ್ಲ. ರಾಧಾನಾಥ-- ತಪ್ಪಿಲ್ಲದಿದ್ದರೆ, ನಿನ್ನನ್ನು ಹಿಡಿಯುತ್ತಿದ್ದವರಾರು ? ವಿಷಕಂಠ-ನಾನು ಯಾವ ಪಾಪವನ್ನೂ ಕಂಡವನಲ್ಲ, ನನ್ನ ಅಂಗಿಯ ಕಿಸೆಯಲ್ಲಿ ಸೀಸೆಯೊಂದಿದ್ದು, ಅದೇ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಿತು.