ಪುಟ:ದಕ್ಷಕನ್ಯಾ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

X ನಮ್ಮ ಮಿದುಳನ್ನು ಚದರಿಸಿ, ಕುತೂಹಲದಲ್ಲಿ ಕೆಡಹಬೇಕೆಂಬುದೇ ಒತ್ಯೆ ಪಿಣಿಯ ಸಂಕಲ್ಪವೊ ? ಮೊದಲು ಅದನ್ನು ವಿವರಿಸಿ, ಸಮಾಧಾನವನ್ನು ಕಲ್ಪಿಸುವುದಕ್ಕೇನಾದರೂ ಅಭ್ಯಂತರವುಂಟೋ ? ' ಹೀಗೆಂದು ಆಗ್ರಹಿಸಿದ ನಮ್ಮ ಧಮ್ಮ ಭಗಿನಿಯರಲ್ಲಿ ವಿನಯಪೂರ್ವಕವಾಗಿ ಕ್ಷಮೆಯನ್ನು ಕೋರಿ, ಸರ್ವಪ್ರಯತ್ನದಿಂದಲೂ, ಜಾಗ್ರತೆಯಾಗಿ ಮಾತೃನಂದಿನಿಯನ್ನೂ ಪ್ರಕಟ ಪಡಿಸುವುದಲ್ಲದೆ, ಇನ್ನೆರಡು ಗ್ರಂಧಗಳನ್ನೂ ಈ ವರ್ಷಾಂತ್ಯದೊಳಗಾಗಿ ಪ್ರಚಾರಕ್ಕೆ ತಂದು, ಮುಂದಿನ ವರ್ಷದ ಆದಿಯಲ್ಲಿಯೇ ವಿದ್ಯುಲ್ಲತೆಯ ವಿವರವನ್ನು ಪ್ರಕಟಪಡಿಸುವೆವೆಂದೂ, ಆ ವರೆಗೂ ತಾಳ್ಮೆಯಿಂದ ಅವಕಾಶ ವನ್ನು ಕೊಟ್ಟು, ಹಿತೈಷಿಣಿಯನ್ನು ಬಿಡದೆ ಪ್ರೋತ್ಸಾಹಿಸುತ್ತಿರಬೇಕೆಂದೂ ಪ್ರಾರ್ಧಿಸುವೆವು, ಮತ್ತು ಕರ್ಣಾಟಕ ನಂದಿನಿಯನ್ನು ಹೊರಡಿಸುವುದ ಕ್ಯಾಗಿ ಅದರಲ್ಲಿ ಪ್ರಕಟಿಸಬೇಕೆಂದು ಅತ್ಯುಪಯುಕ್ತ ಲೇಖನಗಳನ್ನು ಕಳು ಹಿಸಿರುವ ಶ್ರೀ|| ಸೌ|| ರಂಗನಾಯಕಮ್ಮನ (ಅಮಲ್ದಾರ್ ರ್ಎ, ಗೋಪಾ ಲಯ್ಯಂಗಾರರು, ಬಿ.ಎ., ಇವರ ಧರ್ಮಪತ್ನಿ ಯ) ವರೇ ಮೊದಲಾದ ನಮ್ಮ ಪ್ರಿಯಭಗಿನಿಯರಿಗೂ, ಮತ್ತು ಹಿತೈಷಿಣಿಯ ಕಾರಭಾಗವನ್ನು ಸ್ವಯಂಸಾಕ್ಷಾತ್ಕಾರದಿಂದ ಕಟಾಕ್ಷಿಸಿ, ಬಹು ವಿಧದಿಂದ ತಮ್ಮ ಸಹೃದ ಯವನ್ನು ಸೂಚಿಸಿ ಪ್ರೋತ್ಸಾಹಿಸಿರುವ, ನಮ್ಮ ಸನ್ಮಾನಿತಭಗಿನಿಯರಾದ ಶಿ॥1 ಸೌ|| ಪಾರ್ವತಾಂಬಾ (ಶ್ರೀ (ಜಸ್ಟೀಸ್.” ಚಂದ್ರಶೇಖರಯ್ಯರ್‌, ಬಿ.ಎ.,ಬಿ. ಎಲ್., ಇವರ ಧರ್ಮಪತ್ನಿ) ಯಮಗೂ ಮತ್ತು ಅವರ ಸಮೀ ವರ್ಗದವರಿಗೂ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸು ವುದಲ್ಲದೆ, ಕರ್ಣಾಟಕ ನಂದಿನಿಯ ಆವಿರ್ಭಾವಕ್ಕೆ ಹಿತೈಷಿಣಿಯ ಸಂಪದ ಭ್ಯುದಯಗಳೇ ಆಧಾರವಾಗಿರುವುದರಿಂದ, ಹಿತೈಷಿಣಿಯನ್ನು ಉನ್ನತ ಸ್ಥಿತಿಗೆ ತರುವ ಭಾಗದಲ್ಲಿ, ತಮ್ಮ ಸಹೃದಯಬಾಂಧವ್ಯವನ್ನೇ ಆದಶವಾಗಿ ತೋರಿಸಿ, ಇತರ ನಮ್ಮ ಧರಭಗಿನಿಯರೂ ಇದರಲ್ಲಿ ಸಾಮರಸ್ಯ ವನ್ನು ತೋರಿಸುವಂತೆ ಮಾಡಲು ನಮಗೆ ಅವಕಾಶವನ್ನು ಕಲ್ಪಿಸಿಕೊಟ್ಟಿ