ಪುಟ:ದಕ್ಷಕನ್ಯಾ .djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ೨೨೧ ದ ಕ ಕ ನ್ಯಾ ವರುಗಳೂ ನನ್ನನ್ನು ವಿಚಾರಿಸಿ, ಶೋಧಿಸಬೇಕೆಂದರು. ನಾನು ಹಿಂದುಮುಂದು ನೋಡದೆ, ಶೋಧನೆಗೆ ಸಮ್ಮತಿಸಿದೆನು. ಆಗ ನನಗೆ ತಿಳಿಯದಂತೆ ನನ್ನ ಸೀರೆ ಸೆರಗಿನ ಕೊನೆಗೆ ಸಿಕ್ಕಿದ್ದ ಬಟ್ಟೆಯ ಗಂಟು ಕೆಳಗೆ ಬಿದ್ದಿತು, ಅದರೊಳಗೆ ಅಮ್ಮಾಯಿಯವರ ಪೆಟ್ಟಿ ಗೆಯ ಬೀಗದಕೈಗಳಿದ್ದುವು. ಅದು ನನ್ನಲ್ಲಿಗೆ ಹೇಗೆ ಬಂದಿತೋ ಇರಿಸಿದವರಾರೋ ನಾನದನ್ನು ಕಣ್ಣಾರೆ ನೋಡಲಿಲ್ಲವಾದರೂ, ಇಂತಹವರ ಕೆಲಸವೇ ಸರಿಯೆಂದು ಭಾವಿಸಿ ತಿಳಿಯಬಲ್ಲೆನು. ಆದರೆ ಅದನ್ನಿಲ್ಲಿ ನಾನೇ ಬಾಯ್ದೆರೆದು ಹೇಳುವುದು ಸರಿಯಲ್ಲವೆಂ ದಿರುವೆನು. ಹೇಗೂ ಇರಲಿ, ಆ ಅಪರಾಧವು ನನ್ನ ಮೇಲೆ ಬಿದ್ದು, ನನ್ನನ್ನು ಪೊಲೀಸಿಗೆ ಕಳುಹುವಂತೆ ಮಾಡಿದರೂ, ಶ್ರೀದತ್ತ ಕುಮಾ ರರೇ ಬಂದು ನನ್ನನ್ನು ಬಿಡಿಸಿ ಕರೆದೊಯ್ದು, ತಮ್ಮ ಮನೆಯಲ್ಲಿ ಸುನಂದಾದೇವಿಯ ಮತ್ತು ಅವರ ಸೋದರತ್ತೆಯ ಸಹಾಯಕ್ಕೆ ನಿಯಮಿಸಿದರು, ನಾನು ಈವರೆಗೂ ಅಲ್ಲಿಯೇ ಇದ್ದೆನು. ರಾಧಾನಾಧ-ಯಶವಂತನ ಕಡೆ ತಿರುಗಿ'ಏನಯ್ಯಾ ! ನಿಮ್ಮ ಕಡೆಯ ಆಕ್ಷೇಪವೇನಾದರೂ ಉಂಟೆ ?' ಯಶವಂತ -ಇವಳನ್ನು ಕೇಳಬೇಕಾಗಿಲ್ಲ ; ಮುಂದೆ ಇದೆ. (ಯಮುನೆಯು ಮೊದಲಿದ್ದೆಡೆಗೆ ಕಳುಹಲ್ಪಟ್ಟಳು.)