ಪುಟ:ದಕ್ಷಕನ್ಯಾ .djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ود ಸ ತಿ ಹಿ ತ್ಯ ಣಿ ಹೀಗೆ ಒಂದು ವರ್ಷಕಾಲ ನಡೆದ ಬಳಿಕ, ಸುನಂದಾದೇವಿಯು ಕಾಲವಾ ದಳೆಂಬ ವದಂತಿ ಹುಟ್ಟಿತು. ಅದರ ಮೇಲೆ ನನ್ನನ್ನು ಕರೆಯಿಸಿ ನೋಡಿ, ಜಮೀನ್ದಾರರ ತಾಯಿಯವರು ಮಗನನ್ನು ಬಲಾತ್ಕರಿಸಿ, ಮತ್ತೆ ಮದು ವೆಗೆ ಒಪ್ಪುವಂತೆ ಮಾಡಿದರು. ನನ್ನ ಸುಕೃತವೂ ಚೆನ್ನಾಗಿದ್ದುದರಿಂದ, ನಾನು ಅವರ ಪತ್ನಿ ಸ್ಥಾನದಲ್ಲಿ ಸೇರುವಂತಾದೆನು. ಆದರೆ, ವಿವಾಹವಾಗಿ ಪತಿಗೃಹವನ್ನು ಸೇರಿದ ನಾನು, ಪತಿಸನ್ನಿಧಿ ಯಲ್ಲಿ ಸರಸ-ವಿನೋದ-ಪ್ರಸಂಗಗಳಾವುದಕ್ಕೂ ಭಾಗಿನಿಯಾಗಿರಲಿಲ್ಲ. ನನ್ನ ವಿಷಯದಲ್ಲಿ, ಜಮೀನ್ದಾರರು ಅನಾದರವನ್ನಾಗಲೀ, ಅಧವಾ ತಿರ ಸ್ನಾರವನ್ನಾಗಲೀ ತೋರುತ್ತಿರಲಿಲ್ಲವಾದರೂ ಪ್ರಸನ್ನ ರಾಗಿರಲಿಲ್ಲ. ಅದು ನನಗೆ ಸಹನಾತೀತವಾಗಿಯೇ ಇದ್ದಿತು. ಅಲ್ಲದೆ ಅವರು ಅಡಿ ಗಡಿಗೆ ಜನರಮುಂದೆ ಹೇಳುತ್ತಿದ್ದ ಸುನಂದೆಯ ಹೊಗಳಿಕೆಯೂ ನನ್ನ ಅಸೂಯೆಯನ್ನು ಹೆಚ್ಚಿಸುತ್ತಲೇ ಬರುತ್ತಿದ್ದಿತು, ಹೀಗೆ ನನ್ನ ಸ್ವಾಮಿ ಯು ನನ್ನ ವಿಷಯದಲ್ಲಿ ಪರಾಲ್ಮುಖರಾಗುವುದಕ್ಕೆ ಕಾರಣವು ಅವರ ನಡೆ ಯಲ್ಲಿ ಕಲಂಕವಿರಬೇಕೆಂದೂ, ಹಾಗಿಲ್ಲದೇ ಇದ್ದ ಪಕ್ಷದಲ್ಲಿ ಇವರು ನನ್ನ ಇಯ, ಮನೆಯ ವಿಚಾರದಲ್ಲಿಯೂ ಇಷ್ಟು ಬೇಸರಪಡುತ್ತಿರಲಿಲ್ಲವೆಂದೂ ಯೋಚಿಸಿದೆನು, ಪತಿಯ ಅಪ್ರಸನ್ನ ತೆಗೆ ನನ್ನಲ್ಲಿ ಅನುವರ್ತನಗುಣವಿಲ್ಲದಿ ದ್ದು ದೂ, ಅಭಿಮಾನ ಸ್ವಪ್ರತಿಷ್ಠೆಗಳು ನನ್ನಲ್ಲಿ ಮಿತಿಮೀಾರಿಹೋಗಿದ್ದುದೂ ಕಾರಣವೆಂಬುದನ್ನು ಅಸೂಯಾಗ್ರಸ್ತಳಾದ ನಾನು ತಿಳಿಯದವಳಾಗಿ ದೈನು. ಇದೇ ಗುಣವೇ ನಮ್ಮ ಪ್ರೀಜಾತಿಯ ಸುಖ-ಸಂತೋಷಗಳಿಗೆ ವಿಪ್ಪವಾಗಿರಬೇಕೆಂದು ನನಗೆ ಈಗ ಹೊಳೆಯುತ್ತಿರುವುದು, ಅದೂ ಹಾಗಿರಲಿ. ಮೊದಲನೆಯ ಕಳುವಾದ ದಿನದ ಸಾಯಂಕಾಲದಲ್ಲಿ, ನಾನು ಬೇಸ ರವನ್ನು ಕಳೆದುಕೊಳ್ಳಬೇಕೆಂದು, ಮಾಳಿಗೆಯ ಮೇಲೆ ತಿರುಗಾಡುತ್ತಿ ದೈನು, ಆದರೆ, ನನ್ನ ದುರದೃಷ್ಟವಶದಿಂದ ತಲೆಯಲ್ಲಿ ಮುಡಿದಿದ್ದ ಗುಲಾ