ಪುಟ:ದಕ್ಷಕನ್ಯಾ .djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಸ ತಿ ಹಿ ತೈ ಷಿ ಣಿ ಉದ್ದೇಶವಾದರೂ ಇದೆಂಬುದನ್ನೂ ನನ್ನಲ್ಲಿ ಹೇಳಿದನು. ಇವನು ಹೇಳುವವರೆಗೂ, ನನಗೆ ಜಮೀನ್ದಾರರ ಜೇಷ್ಠ ಪತ್ನಿ ಪುತ್ರರ ಜೀವಿತವೃತ್ತಾಂತವು ತಿಳಿದಿರಲಿಲ್ಲ. ಮೂರ್ಖರೋಗದಿಂದ ಯುಕ್ತಾಯುಕ್ತ ವಿಚಾರಶೂನ್ಯನಾದ ನಾನು ಇವರಿಗೆ ಅನುಸಾರವಾಗಿ ನಡೆಯಲು ಒಪ್ಪಿ, ಅದರಂತೆಯೇ ಮೊದಲನೆಯ ಕಳುವಾದ ದಿನದ ಮೊದಲು, ಈ ವರೆಗೂ ನನ್ನ ಕೈಕೆಳಗಿದ್ದವರೊಡನೆ ಇವರಿಗೆ ಸಹಾಯಕನಾಗಿದ್ದೆನು. ಇನ್ನು ಇದಕ್ಕೂ ಹೆಚ್ಚಾಗಿ ಹೇಳಲಾರೆನು, ಮುಖ್ಯವಾಗಿ ಯಾವ ಕಾರವು ನನ್ನಿಂದ ಅವಶ್ಯವಾಗಿ ಖಂಡಿಸಲ್ಪಡಬೇಕಾಗಿದ್ದಿತೋ, ಅಂತಹ ಹೇಯಕಾರವೇ ನನ್ನಿಂದ ಮಾಡಲ್ಪಟ್ಟಿತೆಂದೂ, ಇದ ರಿಂದ ಸ್ವಾಮಿದ್ರೋಹಾದಿ ಪಾತಕಕ್ಕೆ ಗುರಿಯಾದ ನನಗೆ, ಈಗ ರಾಜಾಗ್ರಹದ ಕಠಿಣ ಶಿಕ್ಷೆಯೇ ಹಿತಕಾರಿಯಾಗಿದೆಯೆಂದೂ ತೋ ರುತ್ತಿದೆ. ರಾಧಾನಾಧ-ತಲೆದೂಗಿ- ಅದೇನೂ ತಪ್ಪಿದುದಲ್ಲ. ಆದರೆ, ಈಗಲಾ ದರೂ ನೀನು ನಿನ್ನ ಅಪರಾಧವನ್ನು ಮನಸ್ಸಾಕ್ಷಿಯಾಗಿ ಒಪ್ಪಿ ಕೊಂಡುದಕ್ಕಾಗಿ ಸಂತೋಷ, ಅದಿರಲಿ, ಜಾನ್ದಾರರ ವಧೆ ಗೆಂದು ಮಾಡಿದ ಮಾಟಕ್ಕೆ ನೀನೇ ಪ್ರೇರಕನೋ ' ಹೇಗೆ ? ವಾಸುದೇವ-ನಾನು ಯಾವುದನ್ನೂ ಮುಂದಾಗಿ ಹೇಳುತ್ತಿರಲಿಲ್ಲ. ಆದರೆ ಯಶವಂತನು ಹೇಳಿದುದೆಲ್ಲಕ್ಕೂ ಸಮ್ಮತಿಸಿ, ಆ ರೀತಿ ಅನುವರ್ತಿ ಸುತ್ತಿದ್ದುದು ನಿಜವು, ಸುನಂದಾದೇವಿಯನ್ನು ಪುತ್ರನೊಡನೆ ವಧಿ ಸಿದಲ್ಲದೆ, ತಮಗೆ ಉದ್ದೇಶಸಿದ್ದಿ ಯಾಗವೆಂದೂ, ಅದು ಹೇಗಾ ದರೂ ನಡದೇತೀರಬೇಕೆಂದೂ ಹೇಳಿ, ಅದಕ್ಕಾಗಿ ನನ್ನಿಂದ ನಾಲ್ಕಾರುಮಂದಿಗಳ ಸಹಾಯವನ್ನು ತೆಗೆದುಕೊಂಡಿದ್ದನು. ಆದರೆ, ಅದು ದೈವಸೆ-ಧರ್ಮಪಾಲರ ದಕ್ಷತೆಗಳಿಂದ ಸಾಗ