ಪುಟ:ದಕ್ಷಕನ್ಯಾ .djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೨೩೯ ಣವೂ ಇದೇ ಆಗಿದ್ದಿತು. ಆದರೆ, ದೈವಗತಿಯೇ ಬೇರೆಯಾಯಿತು. ಸುನಂದಾದೇವಿಯ ಮಗನೊಡನೆ ಸುಖವಾಗಿ ಬಂದು ಸೇರಿದಳು. ರಾಧಾನಾಧ-ಹೋಗಲಿ ; ಗೋಪಾಲನೊಡನೆ ಸುನಂದಾದೇವಿಯನ್ನು ಕಳುಹಿದಾಗ-ನೀನು ಮಾಡಿದ ಹೂಟವೇನಾದರೂ ಫಲಕಾರಿಯಾ ಯಿತೋ, ಹೇಗಾಯಿತು ? ಯಶವಂತ-ನಮ್ಮ ಹೂಟವು ನಮ್ಮ ಮೇಲೆಯೆ ತಿರುಗಿತು. ಹೇಗೆ ದರೆ-ಸುನಂದಾದೇವಿಯು ಬಂದ ಬಳಿಕ, ಮೋಹನಕುಮಾರನ ವರ್ಧಂತಿಯುತ್ಸವದ ದಿನದಲ್ಲಿಯೇ ಇವರನ್ನ ಮುಗಿಸಿಬಿಡುವಂತೆ ನಾನೂ, ವಾಸುದೇವರಾಯರೂ ಸೇರಿ, ಏರ್ಪಾಟುಮಾಡಿದ್ದೆವು. ಆದರೆ, ಅಷ್ಟರಲ್ಲಿಯೇ ಸುನಂದಾದೇವಿಯ ತಂದೆಯೇ ಬರೆದಂತೆ ಅವರನ್ನು ಕಳುಹಬೇಕೆಂಬ ಪತ್ರವು ಬಂದಿತು. ಅದರಂತೆ ಉತ್ಸವ ಕಾರವನ್ನು ನಿಲ್ಲಿಸಿ, ಅವರನ್ನು ದುರ್ಗಾಪುರಕ್ಕೆ ಕಳುಹುವುದಾಗಿ ನಿಶ್ಚಯಿಸಿದರು, ಇದನ್ನು ತಿಳಿದ ನಾನು, ಈ ಮೂಲಕವಾಗಿಯೇ ಉದ್ದೇಶವನ್ನು ನೆರವೇರಿಸಿಕೊಳ್ಳಬೇಕೆಂದು ಮತ್ತೆ ಪಾಳ್ಯಕ್ಕೆ ಒರೆ ದೆನು. ಆದರೆ, ಆಗಲೂ ದೈವವಿಲಾಸವು ಬೇರೆಯಾಗಿಯೇ ಇದ್ದು , ಅದೇ ನಮ್ಮ ಸರ್ವನಾಶಕ್ಕೆ ಮೂಲವಾಗಿ ತಿರುಗಿತು. ಆಗಲೇ - ಗೋಪಾಲನೂ ಇವರ ಕೈವಶನಾದನು. ರಾಧಾನಾಧ-ವಿಷಕಂರನ ಅಂಗಿಯಲ್ಲಿ ಸೀಸೆಯನ್ನು ಇರಿಸಿದ್ದವರಾರು ? ಯಶವಂತ- ಸೀಸೆಯನ್ನಿರಿಸಿದ್ದು ದೂ, ಅಮ್ಮಾಯಿಯವರನ್ನು ಕಟ್ಟಿ * ಹಾಕಿ, ಅಲ್ಲಿದ್ದುದನ್ನು ಹೊತ್ತು ಹಾಕಿದುದೂ, ವಿಷಕಂಠನನ್ನು ಚರಂಡಿಯಲ್ಲಿ ಮಲಗಿಸಿದುದೂ ನನ್ನ ಕೆಲಸವೇ ಸರಿ. ರಾಧಾನಾಧ-ಜಮೀನ್ದಾರರ ವಧೆಗೆಂದು ಮಾಡಿದ ಹೂಟವಾರದು ? ಏತಕ್ಕಾಗಿ ಮಾಡಲ್ಪಟ್ಟಿತು ? ಯಶವಂತ-ಸುನಂದಾದೇವಿಯು ತಪ್ಪಿಸಿಕೊಂಡ ಬಳಿಕ, ನಮ್ಮ ತಂದೆ, ತಮ್ಮಂದಿರೇ ಯೋಚಿಸಿ, ಜಮಾನ್ದಾರರನ್ನು ಬರಮಾಡಿಕೊಳ್ಳಲಿ