ಪುಟ:ದಕ್ಷಕನ್ಯಾ .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀ || ಪ್ರಸ್ತಾವನೆ. ಸೋದರಿಯರೇ ! ಸರ್ವಮಂಗಳೆಯ ವರಪ್ರಸಾದದಿಂದಲೂ, ಆರಾಧ್ಯದೇವನ ಅಂತ ರಂಗ ಸಾಯದಿಂದಲೂ, ಗುರುವಿನನುಗ್ರಹ ಬಲದಿಂದಲೂ, ಮತ್ತು ದೇಶೋದ್ಧಾರಕರಾದ ಧರ ಬಾಂಧವರ ಹಿತಾಸಿತಸೂಚನಾಪ್ರೋತ್ಸಾಹಗ ೪ಂದಲೂ ಕೈಕೊಂಡ ಕಾಠ್ಯವು, ಎಂದರೆ- ಈ ದಕ್ಷ ಕನ್ಯಾಭಿಧಾನ ಗ್ರಂಧ ರಚನಾಕೃತಿಯು ಇಂದಿಗೆ ಕೊನೆಮುಟ್ಟಿದಂತಾಯಿತು. ಆದರೆ, ಈ ಗ್ರಂಧಕಲ್ಪನೆಯಲ್ಲಿ, ಕೇವಲ ಭಗವತಿಯೊಲ್ಕೆಯೊಂದ ಲ್ಲದೆ, ಇತರ ಸಹಾಯಸಂಪತ್ತಿಯಾಗಲೀ, ದೇಶಭಾಷೆಯೊಂದಲ್ಲದೆ,-ಮತ್ತಾ ವ ಭಾಷಾಪರಿಜ್ಞಾನವಾಗಲೀ ಸೇರಿರುವುದಿಲ್ಲ. ಆದುದರಿಂದ, ಈ ಕ್ಷುದ್ರ ಗ್ರಂಧವು ಪಂಡಿತಂಮನ್ಯರಿಗೆ ನೀರಸವಾಗಿಯೂ, ಅಬದ್ದ ಕಲ್ಪನೆಯಾಗಿ ಯೂ, ಅಸಮಂಜಸವಾಗಿಯ ಕಂಡುಬರಬಹುದು, ಆದರೂ ಸಹಜವಾಗಿ ಕ್ಷಮಾವಲಂಬಿಗಳಾಗಿರುವವರಲ್ಲಿ ನಮ್ಮ ಪ್ರಾರ್ಥನೆಯಾದರೂ ಬೇರೆಯಾ ಗಿರುವುದೇನು ? ಎಳೆಮಕ್ಕಳಾಡುವ ತೊದಲ್ನುಡಿಯ ಆರೆಮಾತುಗಳನ್ನೇ ಅಕ್ಕರೆಯಿಂದ ಕೇಳುವಂತೆ, ದೇಶಭಾಷಾ ಮಾತೃಸೇವೆಗಾಗಿಯೇ ಹುಟ್ಟಿ ರುವೆನೆಂದು ನಂಬಿರುವ, ಓರ್ವ ಬಾಲಿಶವಿದ್ಯಾರ್ಥಿನಿಯ ಅಲ್ಪಮತಿಗೊಳ ಪಟ್ಟ ಇದೊಂದು ಸೇವೆಯ ಉಪಕರಣಮಾತ್ರವೆಂದಾದರೂ ಭಾವಿಸಿ, ಸಾದರದಿಂದ ಸಮಾಲೋಚಿಸಿ, ಉಚಿತಾನುಚಿತ ವಿಚಾರಗಳನ್ನು ಕಾಲೋ ಚಿತವಾಗಿ ಸೂಚಿಸಿ ಪ್ರೋತ್ಸಾಹಿಸುವುದಾದರೆ, ಮಹೋಪಕಾರವಾದಂ ತೆಯೇ ಆನಂದಿಸುವೆನು. ಮತ್ತೇನು ಹೇಳಲಿ ? ನಮ್ಮ ಸ್ತ್ರೀಜನಾಂಗದ ಪುರೋವೃದ್ಧಿಗೆ ಆವಶ್ಯಕವಾಗಿರಬೇಕಾದ ರೀತಿ-ನೀತಿಗಳನ್ನು ಪ್ರತ್ಯಕ್ಷಾ ಪ್ರತ್ಯಕ್ಷ ರೂಪ