ಪುಟ:ದಕ್ಷಕನ್ಯಾ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಂದ, ಅನುಭವಕ್ಕೊಳಪಟ್ಟ ವಿಚಾರಗಳನ್ನು ತಕ್ಕಮಟ್ಟಿಗೆ ಉದಾಹರ ಣೆಗಳೊಡನೆಯೇ ಪ್ರತಿಪರಿಚ್ಚೇದದ ಆದಿ ಅಧವಾ ಅಂತ್ಯಭಾಗದಲ್ಲಿಯೇ ಕಾಣಿಸಿರುವುದರಿಂದಲೂ, ಗ್ರಂಧದ ಕಡೆಯಲ್ಲಿರುವ ' ಫಲಿತಾಂಶ ” ಲೇಖನ ದಲ್ಲಿ ಉದ್ದೇಶ-ಚರಿತಾರ್ಧತೆಗಳ ವಿಚಾರವನ್ನು ಸ್ಪಷ್ಟಪಡಿಸಿರುವುದರಿಂ ದಲೂ ಇಲ್ಲಿ, ಇನ್ನು ಇದಕ್ಕೂ ಹೆಚ್ಚಾಗಿ ಬರೆಯಬೇಕಾದ ಅಗತ್ಯವೇನೂ ಕಾಣುತ್ತಿಲ್ಲವಾದರೂ, ಅದನ್ನೇ ನಮ್ಮ ಸೋದರಿಯರೆಲ್ಲರ ಕಿವಿ, ಕಣ್‌, ಮನಸ್ಸುಗಳನ್ನೂ ಮುಟ್ಟುವಂತೆ ಮಾಡುವ ಕೆಲಸದಲ್ಲಿ, ನಮ್ಮ ಧರ ಬಾಂ ಧವರು ಅಧಿಕ ಶ್ರಮವನ್ನು ವಹಿಸಿಕೊಳ್ಳಬೇಕೆಂದು ಮತ್ತೆ ಮತ್ತೆಯೂ ಬೇಡಿಕೊಳ್ಳುವುದೊಂದನ್ನು ಮಾತ್ರ ಬಿಡಲಾರೆನು, ಆ ನಮ್ಮ ಸನ್ಮಾನ ನೀಯ ಭ್ರಾತೃವರ್ಗಿಯರು, ತಮ್ಮ ತಮ್ಮ ನಾರೀ ವರ್ಗಗಳಲ್ಲಿ, ವಿಂದಾ ಸುಕನ್ಯಾ- ಸುನಂದಾ-ಗಂಗಾ-ಯಮುನಾ-ಮೊದಲಾದವರ ಕರ್ತವ್ಯ ಮತೆ, ನಿರಂತರೋದ್ಯಮಶೀಲತೆಗಳನ್ನು ೦ಟುಮಾಡುವವರಾದರೆ, ನನ್ನ ಲೇಖ ನದ ಪರಿಶ್ರಮವೂ, ಉದ್ದೇಶವೂ ಸಾರ್ಧಿಕ್ಯ ಹೊಂದುವುವಲ್ಲದೆ, ಪತ್ತೇದಾ ಕಿಗೆ ಸಂಬಂಧಿಸಿದ ಕಾದಂಬರಿಯೊಂದನ್ನು ಬರೆಯಬೇಕೆಂದು ಹುರುಡಿಸಿದ ನನ್ನ ಸೋದರನ [ ಈಗ ಸದ್ಯದಲ್ಲಿ ಈತನು, ಕಾಶಿ ಸೆಂಟ್ರಲ್ ಹಿಂದೂ ಕಾಲೇಜಿನ ಇಂಟರ್ ಮಾಡಿಯೇಟ್ ತರಗತಿಯ ವಿದ್ಯಾರ್ಥಿಯಾಗಿರುವನು.] ಅಭಿಮತವೂ ಸಫಲವಾದೀತೆಂದು ಹೇಳಲು ಯಾವ ಅಭ್ಯಂತರವೂ ಇರು ವುದಿಲ್ಲ. ಮುಖ್ಯವಾಗಿ, ನಮ್ಮಿಾ ದೇಶಮಾತೆಯ ಅಭ್ಯುದಯಕ್ಕೆ ಪ್ರಬಲ ಕಂಟಕಗಳಾಗಿರುವ ತೃಷ್ಣಾ-ದುರಾಚಾರ ರೋಗಗಳು ನಿವಾರಣೆಯಾಗಿ, ಸದಾನಂದ ಸಾಮ್ರಾಜ್ಯವು ಸ್ಪಿರಪಡುವಂತೆ ಮಾಡಬಲ್ಲ ಸ್ವಶಕ್ತಿ, ಸ್ವಾವ ಲಂಬನ, ಸ್ವರೂಪವಿಜ್ಞಾನಗಳೆಂಬ ಮಂತ್ರಶಕ್ತಿಗಳು ನಮ್ಮ ಅಶೇಷ ಕರ್ಣಾಟಕ ಮಾತೃಸಂತಾನರಲ್ಲಿಯೂ ಸ್ಪೂರ್ತಿಗೊಳಿಸುವಂತೆ ಅನುಗ್ರಹಿಸ ಬೇಕೆಂದು ಅನವರತವೂ ಅನನ್ಯಭಾವದಿಂದ ಮಾತೃಸನ್ನಿಧಿಯಲ್ಲಿ ಸಂಗ್ರಾ ರ್ಧಿಸುತ್ತಿರುವ ರಾ ||! ಆಜಶುದ್ಧ ಚತುರ್ಥಿ | ನಿರಂತರ ಶ್ರೇಯಃಕಾಂಕ್ಷಿಣಿ, ಮಂಗಳವಾರ ಗರಳಪುರೀ (ನಂಜನಗೂಡು ) | ವಿದ್ಯಾರ್ಥಿನಿ. -+