ಪುಟ:ದಕ್ಷಕನ್ಯಾ .djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ಗೋಪಾಲ-ವಿಶೇಷಕ್ಕೆ, ಹೊರಗೆ ಹೋಗಿದ್ದರಲ್ಲವೇ ? ದಿವಾನ-ಅದೇಕೆ ಹೋಗಲಿಲ್ಲ ? ಗೋಪಾಲ--ಹೋಗಲಿಕ್ಕೆ ಅವಕಾಶವೇ ದೊರೆಯಲಿಲ್ಲ. ಈ ವರೆಗೂ, ಯಮುನಮ್ಮ ನವರು ಬಿಸಿಲುಮಾಳಿಗೆಯಮೇಲೆಯೇ ನಿಂತು ನೋ ಡುತ್ತಿದ್ದರು. ದಿವಾನ- ಒಬ್ಬಳಿಗಾಗಿ ಕೆಲಸವನ್ನೇ ಕೆಡಿಸಿಕೊಳ್ಳುವುದೇ ? ಏನಾದರೂ - ಒಂದು ಹೂಟವನ್ನು ತೆಗೆದಿದ್ದ ರಾಗದಿತ್ತೋ ? ಗೋಪಾಲ-ಮಾಡಿಯೇ ಬಂದಿರುತ್ತೇನೆ. ದಿವಾನ-ಏನುಮಾಡಿರುತ್ತೀಯೆ ? ಗೋಪಾಲ-ಮೇಲಿದ್ದಾಕೆಯನ್ನು ಕೂಗಿ, ಯಾರೋ ನೋಡಲಿಕ್ಕೆ ಬಂದಿ ದ್ದರೆಂದು ಹೇಳಿ, ಬೀದಿಗೆ ಹೋಗುವಂತೆ ಮಾಡಿಯೇ ನಾನಿತ್ತ ಒಂ ದುದು. ದಿವಾನ-ಆಕೆ ಹೇಳಿದುದೇನು ? ಗೋಪಾಲ - ನಾನು ಕೆಲಸಕ್ಕಾಗಿ ಹೊರಗೆ ಹೋಗಿ ಬರುವೆನು, ನೀನು - ಮನೆಯಲ್ಲಿಯೇ ಇರಬೇಕೆಂದು ” ಹೇಳಿ ಹೋದರು. ದಿವಾನ-ಆಕೆ, ಹೊರಗೆ ಹೋಗುವವರೆಗೂ ಇದ್ದು ನೋಡಿಬಂದೆಯಾ ? ಗೋಪಾಲ-ಬೀದಿಯ ಹಂತದವರೆಗೂ ಹೋದುದನ್ನು ನೋಡಿಬಂದೆನು. ದಿವಾನ... ಆದರೂ, ನನಗಾಕೆಯ ವಿಚಾರವಾಗಿ ಸಂಶಯವಿದ್ದೇ ಇದೆ. - ಅವಳೆಂತಹ ಮಾಟಗಾರ್ತಿಯೆಂದರಿತಿರುವೆ ! ಅವಳಿಗಾವಾಗಲೂ ನಮ್ಮ ಒಳಗುಟ್ಟನ್ನು ತಿಳಿಯಬೇಕೆಂಬುದೊಂದೇ ನಿರೀಕ್ಷೆಯಾ ಗಿದೆ, ಇಲ್ಲೆಲ್ಲಿಯಾದರೂ ಅಡಗಿ, ಹೊಂಚಿ ಕೇಳುತ್ತಿದ್ದರೂ ಇರ ಬಹುದು, ಒಂದುಬಾರಿ ಹುಡುಕಿ ನೋಡಿಬಾ, ಆ ಬಳಿಕ ಉಳಿದ ವಿಚಾರವಾಗಲಿ.