ಪುಟ:ದಕ್ಷಕನ್ಯಾ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೨೩ ಗಂಗಾ-ನನಗೆ ಇದಾವುದೂ ತಿಳಿಯದು, ಯಾವ ಸುದ್ದಿಯನ್ನೂ - ಯಾರೂ ನನ್ನಲ್ಲಿ ಹೇಳುವವರಿಲ್ಲ, ನಾನೂ ಕೇಳಬೇಕೆಂದಿಲ್ಲ. ದೈವ ಯತ್ನಕ್ಕೆ ಯಾರೇನು ಮಾಡಿಯಾರು ? ದೊರೆತಷ್ಟರಲ್ಲಿಯೇ ತೃಷ್ಣ ರಾಗಬೇಕು. ಯಮುನಾ ನಿಮ್ಮ ಸಹನೆ, ಮತ್ತಾರಲ್ಲಿಯೂ ಇರಲಾರದು ! ಆಕೆಯ - ಬದುಕಿದ್ದು, ನೀವಿಬ್ಬರೂ ಒಂದೇ ಕಡೆಯಲ್ಲಿದ್ದ ಪಕ್ಷದಲ್ಲಿ, ಜಮೀನ್ದಾರರ ಸಂತೋಷಕ್ಕೆ ಪಾರವಾದರೂ ಎಲ್ಲಿರಬೇಕು ? ಗಂಗಾ-ಉದಾಸೀನದಿಂದ, ಅದೆಲ್ಲವೂ ಸ್ವಪ್ನ ವಿಚಾರವೇ ಸರಿ.' ಯಮುನಾ-ಕೊರಳನ್ನು ಕೊಂಕಿಸಿ, ಒಂದುವೇಳೆ, ನಿಜವೇ ಆದರೋ?” ಗಂಗಾ-ಬೆದರಿನೋಡುತ್ತ,- ಇದೇನು ? ಸ್ವಪ್ನ ವೋ ? ? ಯಮುನಾ ..-ನಿಜವೇ, ಏಕಾಗಬಾರದು ? ಗಂಗಾ-ಹೇಗಾದೀತು ? ಹತ್ತು ವರ್ಷಗಳಿಗೆ ಹಿಂದೆ ಕಳೆದುಹೋದುದು, ದೊರಕೀತೇ ? ಯಮುನಾ-ಹೋಯಿತೆಂಬುದು, ಪರೋಕ್ಷದ ಮಾತು , ಒಂದುವೇಳೆ ಅದು, ದ್ರೋಹಿಗಳ ಅಪಲಾಪವೇ ಆಗಿದ್ದರೆ, ಆಗಬಾರದೇಕೆ ? ಗಂಗಾ-ಶರಭಾವದಿಂದ, : ಯಜಮಾನರ ವಿಷಯದಲ್ಲಿಯೂ ದ್ರೋಹಿ ಗಳಿದ್ದಾರೆಯೋ ? ಅದು, ಅಬದ್ದದ ಮಾತಾಗಿದೆ. ಹಾಗೂ ಒಂದುವೇಳೆ, ದೊರೆಯುವ ಪಕ್ಷದಲ್ಲಿ, ಸಂತೋಷವೇ ಸರಿ, ಅದ ರಿಂದ ಯಜಮಾನರೂ ಸುಬಿಗಳಾದಾರಲ್ಲವೆ ? ಅಷ್ಟೇ ನನಗೆ ಸಾಕು. ಯಮುನಾ- ದೈವೇಚ್ಛೆ ! ಅದಿರಲಿ ; ಹೊಸಸುದ್ದಿಯೊಂದನ್ನು ಕೇಳಿದೆ. ಗಂಗಾ-ಅದೇನು ? ಯಮುನಾ-ಹುಡುಗಿಗೆ ವರನು ನಿಶ್ಚಿತನಾಗಿದ್ದಾನಂತೆ ; ಮುಂದಿನ ಮಾಘದಲ್ಲಿಯೇ ಮದುವೆಯಂತೆ.