ಪುಟ:ದಕ್ಷಕನ್ಯಾ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸJ ಹಿ ತೇ ಷಿ ಣಿ ಗಂಗಾ-ನನಗೆ ತಿಳಿಯದು, ಹುಡುಗಿಯ ತಂದೆಯಿರುವಲ್ಲಿ, ಈ ವಿಷಯ ದಲ್ಲಿ ಮತ್ತಾರಿಗೆ ಹಕ್ಕಿರುವುದು ? ಯಮುನಾ- ಹಟವಾದಿಗಳ ವಿಷಯದಲ್ಲಿ, ಯಾರೇನು ಹೇಳಲಾದೀತು ? ಹುಡುಗಿಯನ್ನು ಇಲ್ಲಿಗೆ ಕಳಿಸುವುದಿಲ್ಲವೆಂದೂ, ತಮ್ಮಲ್ಲಿಯೇ ವಿದ್ಯೆ ಯನ್ನು ಕಲಿಯಿಸಿ, ಅನುಕೂಲವಾದ ವರನಿಗೆ ಮದುವೆಮಾಡಿ ಕೊಡುವೆವೆಂದೂ, ಹುಡುಗಿಯ ತಾತನು ಹೇಳುತ್ತಿರುವನಂತೆ ! ಯಜಮಾನರಾದರೂ, ಮತ್ಯಾದೆಗೆ ಕುಂದಾದೀತೆಂದು ಮೌನ ವನ್ನೇ ಹಿಡಿದಿರಬೇಕಲ್ಲವೇ ? ಗಂಗಾ-ಬಿಡುಗಣ್ಣಿನಿಂದ ನೋಡುತ್ತ,-- ನಿನಗಿದೆಲ್ಲಾ ಹೇಗೆ ತಿಳಿಯಿತು?' ಯಮುನಾಈ ದಿನ ಮಧ್ಯಾಹ್ನದಲ್ಲಿ ನಾನು ರಾಮಮಂದಿರಕ್ಕೆ ಹೋ ಗಿರಲಿಲ್ಲವೆ ? ಅಲ್ಲಿಗೆ ನನ್ನ ಸೋದರಮಾವನ ಮಗನು, ಬಂದಿದ್ದನು. ಅವನಿಂದ ತಿಳಿದುಬಂದಿದೆ. ಗಂಗಾ-.-ಈ ಊರಲ್ಲಿಯೇ ಇದ್ದಾನೆಯೇ ? ಯಮುನಾ-ಇಲ್ಲಿಗೆ ನಾಲ್ಕು ಹರದಾರಿಯಲ್ಲಿರುವ ಹಳ್ಳಿಯಲ್ಲಿರುವನು. ಗಂಗಾ-ಆತನ ಹೆಸರೇನು ? ಉದ್ಯೋಗವಾವುದು ? ಯಮುನಾಉದ್ಯೋಗವೆಂತಹುದೋ ನನಗೆ ಹೇಳಲಿಕ್ಕೆ ಬಾರದು. ಹೇಗೂ ಪ್ರಸಿದ್ಧನಾದ ಚಿಕಿತ್ಸಕನಂತೆ ! ಅವನ ಹೆಸರಾದರೂ ನನಗೆ ಮರೆತುಹೋಗಿದೆ, ಚೆನ್ನಾಗಿ ನೆನಪಿಲ್ಲ. ಗಂಗಾ-ಯಾವುದು ಹೇಗಾಗಬೇಕೋ ಹಾಗೆಯೇ ಆಗುವುದು, ನನ್ನ - ನಿನ್ನ ಇಷ್ಟದಂತಾಗುವುದೇನು ? ಸುಮ್ಮನೇಕೆ ಬಳಲಬೇಕು ? ಯಮುನಾ-ಅಷ್ಟೇ ಸರಿ ! ಆದರೆ, ಅಮ್ಮಾಯಿಯವರ ಕ್ಷೇಶವನ್ನು ನೋಡಿ, ಸಹಿಸುವಂತಿಲ್ಲ. ಗಂಗಾ-ನಾವೇನು ಮಾಡಲಾದೀತು ? ಹೊತ್ತು ಊಾರುತ್ತಿದೆ. ನನಗೆ ಹೊರಗೆ ಕೆಲಸವಿದೆ ಇನ್ನು ಹೊರಡು !