ಪುಟ:ದಕ್ಷಕನ್ಯಾ .djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ ತೈ ಷಿ ಣಿ • ಅಮ್ಮಾಯಿಾ ! ಎಲ್ಲರೂ ಒಂದೇ ಬಗೆಯವರಾಗಿದ್ದಾರೆಯೇ ? ಭಾವನಾಗುಣಗಳು ಬೇರೆಬೇರೆಯಾಗಿವೆಯಲ್ಲವೆ ? ಯಜಮಾನರಿಗೆ ವಿರ ಕ್ರಿಯಲ್ಲಿರುವ ಮನಸ್ಸು, ಮತ್ತೊಂದರಲ್ಲಿಯೂ ಇಲ್ಲ ! ಇದನ್ನು ನಾವು ಹೇಳಿ, ಬದಲಾಯಿಸಲಿಕ್ಕಾದೀತೆ ? - * ಹೇಗಾದೀತು ? ಯಮುನೆ ! ಹತ್ತು ವರ್ಷಗಳಿಂದ ದಿನದಿನಕ್ಕೂ ಬಲವಾಗುತ್ತಿರುವ ಹುಚ್ಚು, ಇನ್ನು ಮುಂದೆ ನೆಟ್ಟಗಾಗುವುದೆಂದರೆ ಆದೀ ತೇ ? ಇದು, ಬರಿಯ ಆಶೆಯಲ್ಲವೇ? ಅವಳುಹೋಗಿ, ಇವಳನ್ನು ತಂದೂ, ಅವನು ಹಾಗೆ ಒಂಟಿಯಾಗಿರುತ್ತಿರುವುದು, ನನಗೆ ಸಮಾಧಾನವೇ ? ಆತನ ಹಿಂದಿನ ಸಂತೋಷ-ಉತ್ಸಾಹವೆಲ್ಲವೂ, ಸುನಂದೆಯೊಡನೆಯೇ ಮಾಯವಾ ದುವೇ ? ದಿನದಿನಕ್ಕೂ ಜಿಗುಪ್ಪೆಯೇ ಹೆಚ್ಚುತ್ತಿದೆ. ಅಯ್ಯೋ ! ಸುನಂದೆ ! ಈಗ ನೀನೆಲ್ಲಿರುವೆ ? ನಿನ್ನ ಮಕ್ಕಳೇನಾಗಿವೆ ? ಹೇಳಲಾರೆಯಾ ? ಆ ನಿನ್ನ ಪ್ರೀತಿ-ವಿಶ್ವಾಸ ಗೌರವವೆಲ್ಲವೂ ಈಗೆಲ್ಲಿಹೋದುವು ?' « ಏಕೆ ಅಳುವುದು ? ಅಮ್ಮಾ ಯಾ ! ಅಳಬಾರದು, ಅಳುವಂತಹ ದೇನೂ ಆಗಿಲ್ಲ; ಸುಮ್ಮನಿರಿ ಈ ಬಗೆಯ ಉತ್ತರಪ್ರತ್ಯುತ್ತರಗಳು, ಜಮಿಾನ್ಮಾರನ ತಾಯಿ-ಚಂದ್ರಮತಿಗೂ, ಯಮುನೆಗೂ ನಡೆಯುತ್ತಿ ದ್ದುವು. ಚಂದ್ರಮತಿಯು, ಹಜಾರದೊಳಗಡೆಯ ಕಿರುಮನೆಯಲ್ಲಿ ಕುಳಿ ತಿದ್ದಳು. ಅವಳ ಮುಂದೆ ಯಮುನೆಯು ಕುಳಿತಿದ್ದಳು, ಕಿರುಮನೆಯು ಚಂದ್ರಮತಿಯ ಸ್ವಂತದ್ದಾಗಿರುವುದು, ಇದರೊಳಗಡೆಯಲ್ಲಿ, ಇವಳ ಕೈ ಪೆಟ್ಟಿಗೆ, ಪೆರಾರಿ, ದೇವರ ಪೆಟ್ಟಿಗೆ, ಮೊದಲಾದ ಪೆಟ್ಟಿಗೆಗಳು, ದೇವರ ಪೂಜಾಸಾಮಗ್ರಿಗಳೂ, ಉಳಿದ ಹಾಸಿಗೆ, ಹೊದಿಕೆಬಟ್ಟೆಗಳೂ ಓರಣವಾ ಗಿಡಲ್ಪಟ್ಟಿರುವುವು. ಹೆಚ್ಚೇಕೆ ? ಒಟ್ಟಿನಲ್ಲಿ, ಈ ಕಿರುಮನೆಯನ್ನು ನೋಡಿ ದರೆ ಸಾಕು ; ಚಂದ್ರಮತಿಯ ಕರ್ತವ್ಯ ದಕ್ಷತೆ, ಮನೋಜಯ ಇತ್ಯಾದಿ ಗಳು, ಎಷ್ಟರಮಟ್ಟಿಗಿರಬಹುದೆಂಬುದು ತಿಳಿದುಬರುವುದು, ಚಂದ್ರಮತಿಗೆ, ೭೦ ವರ್ಷಗಳಾಗಿರಬಹುದು, ಆದರೂ, ದೇಹವು ದೃಢವಾಗಿರುವುದು, ಮುಖದಲ್ಲಿಮಾತ್ರ, ಸುಕ್ಕು ಕಾಣಿಸಿಕೊಂಡಿರುವುದು,