ಪುಟ:ದಕ್ಷಕನ್ಯಾ .djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೬ ಕ ನ್ಯಾ ೪೯ ಶ್ರೀದತ್ತ ಇರಲಿ ; ಮುಂದೆ ತಿಳಿಸಲಾದೀತು. ಮಲೆತಿರದೆ ಎಚ್ಚೆತ್ತಿರು. ಉಳಿದವರ ಸ್ಥಿತಿ ಏನಾಗಿದೆಯೋ ವಿಚಾರಿಸು. ಎಂದು ಹೇಳಿ, ಮತ್ತೆ ಇಬ್ಬರೂ ಹಿಂದಿರುಗಿ, ಚಂದ್ರಮತಿಯ ಕಿರುಮನೆಯ ಬಳಿಗೆ ಬಂದು, ಮೆಲ್ಲನೆ ಕದವನ್ನು ತಟ್ಟಿದರು. ಚಂದ್ರಮತಿ – ದಿಗಿಲುಬಿದ್ದೆದ್ದು ಬಂದು, ಕದವನ್ನು ತೆರೆದುನೋಡಿ

  • ಇದೇಕೆ? ತಾರಾಪತಿ! ಇಷ್ಟು ಹೊತ್ತಾದರೂ ಮಲಗಬೇಡವೇ? ?

ಎಂದು ಆತುರದಿಂದ ಕೇಳಿದಳು. ತಾರಾಪತಿ - ಶ್ರೀದತ್ತನ ಸೂಚನೆಯಂತೆ " ಅಮ್ಮಾಯಿಾ ! ಸಂಗೀತಶ್ರನ ಣಕ್ಕೆ ಹೋಗಿದ್ದು, ಇದೇ ಬಂದೆವು ; ಬಂದವರು, ನಿಮ್ಮನ್ನು ನೋಡಿಕೊಂಡು ಹೋಗಿ, ಮಲಗಬೇಕೆಂದು ಬಂದು ಕೂಗಿದೆವು. ಯಮುನೆಯೂ ಇಲ್ಲಿರುವಳಷ್ಟೆ ? ? ಚಂದ್ರಮತಿ-ಇಲ್ಲ , ಅವಳು ಹುಕಥೆಯನ್ನು ಕೇಳಲಿಕ್ಕೆಂದು ಹೋಗಿ ರುವಳು. ತಾರಾಪತಿ-ಸರಿಯೆ, ನೀವಿನ್ನು ಮಲಗಬಹುದು ; ನಾವೂ ಹೋಗುವೆವು. - ಚಂದ್ರಮತಿಯು, ಕದವನ್ನು ಮುಚ್ಚಿ, ಮಲಗಿದಳು. ಜಮೀಾ ನ್ಯಾರನ್ನೂ, ಶ್ರೀದತ್ತ ಕುಮಾರನೂ ಉಪ್ಪರಿಗೆಗಳನ್ನು ನೋಡಿ ಬರಲು, ನಡೆದರು, ಲಕ್ಷ್ಮಿನಿಲಯದಲ್ಲಿ ಏನೂ ವ್ಯತ್ಯಾಸವಿರಲಿಲ್ಲ. ವಿಲಾಸಭವನ ದಲ್ಲಿಯೂ, ಇನ್ನೆಲ್ಲಿಯ ವಿಶೇಷವೇನೂ ಕಂಡುಬರಲಿಲ್ಲ, ಆದರೂ, ಗಂಗೆ ಯ ಮಲಗುವಮನೆ-ಚಿತ್ರದಮನೆಗಳ ಕದಗಳು ಮಾತ್ರ ಹಿಂದಕ್ಕೆ ತೆರೆದು ಹೋಗಿದ್ದುವು ; ಅಗಣಿಗಳು ಮುರಿದುಬಿದ್ದಿವೆ ; ಬಾಗಿಲುಗಳೂ ತೆರೆಯಲ್ಪ ಟ್ಟಿವೆ, ಕಿರುಮನೆಯಲ್ಲಿ ದೀಪವಿರಲಿಲ್ಲ, ದೀಪವನ್ನು ಹಿಡಿದು ನೋಡಿದರು. ಬೀರುಗಳೂ, ಪೆಟ್ಟಿಗೆಗಳೂ ಬರಿದಾಗಿ ಬಿದ್ದಿವೆ. ಉಡುವು ತೊಡವುಗಳಾಗ ಲೀ, ಉಳಿದ ಚಿತ್ರ-ಹೆಣಿಗೆ, ಕಸೂತಿ ಸಾಮಗ್ರಿಗಳಾಗಲೀ, ಯಾವುವೂ ಇರ ಲಿಲ್ಲ. ಗಂಗೆಯು ಮಂಚದಮೇಲೆ ಮೈಮರೆತು ನಿದ್ರಿಸುತ್ತಿದ್ದಳು. ಶ್ರೀದ ತಕುಮಾರನು ವಿಸ್ಮಿತನಾಗಿ ಏನನ್ನೋ ಯೋಚಿಸುತ್ತ ನಿಂತನು. 4