ಪುಟ:ದಕ್ಷಕನ್ಯಾ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೫೫ ಬಹು ಜನರು ಬಂದು-ಹೋಗುವ ಸ್ಥಳವಾದುದರಿಂದ, ಇಲ್ಲರಬಾ ರದು.' ಗಂಗೆಯು ಮರುಮಾತಿಲ್ಲದೆ, ಹೊರಟುಹೋದಳು. ಅವಳು ಹೊರಟುಹೋದ ಉತ್ತರಕ್ಷಣದಲ್ಲಿಯೇ ಯಮುನೆಯೂ ಬಂದಳು. ತಾರಾ ಪತಿರಾಯನು, ತಲೆಯೆತ್ತಿ- ಯಮುನಾ ! ಸ್ವಲ್ಪ ಇತ್ತ ಬಾ !? ಎಂದು ಕೂಗಿದನು. ಯಮುನೆ -- ಬಂದು ದೂರದಲ್ಲಿ ನಿಂತು-" ಏನು ? ? ತಾರಾಪತಿ- ರಾತ್ರಿ ನಡೆದ ವಿದ್ಯಮಾನಗಳೆಲ್ಲವೂ ಗೊತ್ತಿದೆಯೇ ? ಯಮುನೆ-ವಿದ್ಯಮಾನವೂ ಗೊತ್ತಿದೆ, ಮಾಡಿದವರೂ, ಮಾಡಹೇಳಿದ ವರೂ ತಿಳಿದಿದೆ. ತಾರಾಪತಿ-ಏನು ' ಎನು ? ? ಗೊತ್ತಿದೆಯೆ ? ಮಾಡಿದವರಾರು ? ಯಮುನೆ-ಈಗಲೇ ಅದನ್ನು ಹೇಳಲಾಗದು. ತಾರಾಪತಿ-ತಲೆದೂಗಿ-' ಮುಂದೆ ಗೊತ್ತಾದೀತು, ಇರಲಿ , ನಿನ್ನ ಮೇಲೆ ಬಿದ್ದಿರುವ ಆರೋಪಣೆಗೆ ನೀನೇನು ಹೇಳುವೆ ? ? ಯಮನೆ – ಹೇಳುವುದೇನು? ಬೀಳುವುದೆಂದು ಮೊದಲೇ ನಿಶ್ಚಯಿಸಿದ್ದೆನು. ತಾರಾಪತಿ - ಹಾಗಿದ್ದೂ ಏನನ್ನೂ ಹೇಳಲಾರೆಯೇನು ? ಯಮುನಾ....ಕಿರುನಗೆಯಿಂದ- ಪ್ರತಿಭಾಸಂಪನ್ನರು, ತಮ್ಮ ಬುದ್ಧಿಶಕ್ತಿ ಯಿಂದ ಜನರ ನಡೆ ನುಡಿಯಲ್ಲಿರಬಹುದಾದ ದೋಷಗಳನ್ನು ನೋ ಡಿದಮಾತ್ರದಿಂದಣಿಕ' ತಿಳಿಯಬಲ್ಲರು, ನಂಬಲು ತಕ್ಕುದನ್ನು ಹೇಳದೆಯೇ ನಂಬುವರ: ನಂಬಲಾಗದುದನ್ನು ಆಣೆಯಿಟ್ಟಾಗಲೀ, ಕಣ್ಣೀರ್ಗರೆದಾಗ, ಆಶೆಹುಟ್ಟಿಸುವುದುಂದಾಗಲೀ, ಬೆದರಿಸಿ ಯಾಗಲೀ ನಂಬುವಂತೆ ಮಾಡುವೆನೆಂದರೆ ನನಗಳವಲ್ಲ. ಇದರ ಮೇಲೆಯೂ ನಾನು ಹೇಳತಕ್ಕುದೇನು ? ತಾರಾಪತಿ -ನಿಜವೇ ಸರಿ, ನಿನ್ನ ವಿಚಾರದಲ್ಲಿ ನನಗೆ ಹೇಗೂ ಸಂಶಯ ವಾಗುವಂತಿಲ್ಲ. MAR