ಪುಟ:ದಕ್ಷಕನ್ಯಾ .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ್ಷ ಕ ನ್ಯಾ 8೭. ತಾರಾಪತಿರಾಯನೂ, ಒಂದೆರಡು ಕ್ಷಣದವರೆಗೆ, ಅಲ್ಲೇ ನಿಂತಿದ್ದು * ಬಳಿಕ ಹೊರಟು ರಾಜಮಾರ್ಗವನ್ನನುಸರಿಸಿ ಬರುತ್ತಿದ್ದು, ಬರುತ್ತಿದ್ದ ವನು, ನಡುದಾರಿಯಲ್ಲಿ ವಿಸ್ತಾರವಾದುದೊಂದು ಭವನದ ಮುಂಗಡೆ ಯಲ್ಲಿ ನಿಂತು ನೋಡುತ್ತಿದ್ದ ಘನವಂತನೊಬ್ಬ ನನ್ನು ಸಂಧಿಸಿ, ಕೈಮು ಗಿದು ಹೇಳಿದನು.. ವಂದನೆ ' ರಾವಬಹದ್ದು ರರಾಧಾನಾಧರಾವ್! ರಾವಬಹದ್ದುರ - ಪ್ರತಿವಂದನೆ, ತಾರಾಪತಿರಾವ್ ! ಸುಖಾಗಮನವಷ್ಟೆ? ತಾರಾಪತಿ-ಭಗವದನುಗ್ರಹದಿಂದ ಇಷ್ಟರಮಟ್ಟಿಗೆ, ಇದೇನು, ಇಲ್ಲಿ ನಿಂತಿ ರುವಿರಿ ? ರಾವಬಹದ್ಗುರ-ವಿಶ್ರಾಂತಿಗಾಗಿ ಹೊರಗೆ ಬಂದವನು, ಹಾಗೆಯೇ - ಬಂದ ನಿಮ್ಮನ್ನು ನೋಡುತ್ತ ನಿಂತೆನು, ನಿಮ್ಮಲ್ಲಿ ಹೇಳಬೇಕಾದ ಸಂಗತಿಯೊಂದಿದೆ, ನೀವೇಬಂದುದು ತುಂಬಾ ಅನುಕೂಲವಾಯ್ತು. ತಾರಾಪತಿ --ನಾನೂ ತಮ್ಮ ಶ್ರೀದತ್ತ -- ರಾವಬಹದ್ಗುರ-ಅದಿರಲಿ ಹಾಗೆಯೇ ನ್ಯಾಯಸಭೆಯ (Court) ವರೆಗೂ ಬಂದು, ಅಲ್ಲಿ ನನ್ನ ವಿಶ್ರಾಂತಿಮಂದಿರದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡಿದ್ದು ಹೋಗಬಹುದು , ಬನ್ನಿರ ತಾರಾಪತಿ-ಆಗಬಹುದು, ಹಾಗೆಯೇ ನ್ಯಾಯಪೀರದಲ್ಲಿ ನನ್ನ ಮನ ವಿಯ ಒಪ್ಪಿಸತಕ್ಕುದಿದೆ. ಇಬ್ಬರೂ, ಭವನದ ಮೇಗಡೆಗೆ ಹೋದರು. ರಾವಬಹದ್ದುರನ ಆಗಮನ ನೀರೀಕ್ಷೆಯಲ್ಲಿದ್ದವರೆಲ್ಲರೂ ಎದ್ದು ನಿಂತರು. ರಾವಬಹದ್ದುರನು ನ್ಯಾಯಪೀರದಲ್ಲಿ ಕುಳಿತು, ಅಂಗಿಯ ಕಿಸೆಯಲ್ಲಿದ್ದ ಬೀಗದಕೈಯನ್ನು ತೆಗದು ತಾರಾಪತಿಯ ಕೈಯ್ಯಲ್ಲಿರಿಸಿ,-" ಜಮಾನ್ದಾರರೇ ! ಅಲ್ಲಿ ಪ್ರತ್ಯೇಕ ವಾಗಿ ಕಾಣುವ ಕಿರುಮನೆಯ ಕದವನ್ನು ತೆಗೆದು, ಒಳಗಡೆ ಅಗಣಿಹಾಕಿ ಕೊಂಡು ವಿಶ್ರಮಿಸಿಕೊಳ್ಳಿರಿ, ಅವಕಾಶವಾದಾಗ ಕರೆಯಿಸುವೆನು ; ಕಿರು ಮನೆಗೆ ಮತ್ತಾರೂ ಬಾರದಂತೆ ನೋಡಿಕೊಳ್ಳಿರಿ.'