ಪುಟ:ದಕ್ಷಕನ್ಯಾ .djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ. ೫೯ ಇರಲಿ , ನಿಮ್ಮ ಪತ್ನಿ ಗೇನಾದರೂ ನೀವು ನಿಮ್ಮ ಸ್ವಹಸ್ತಾಕ್ಷರದ ಪತ್ರವನ್ನು ಕೊಡುವಿರೋ ? ತಾರಾಪತಿ-ತಂದೇ ಇರುತ್ತೇನೆ, ಆದರೆ, ನೀನೂ ಒಂದುಬಾರಿ ನೋಡಿ, ಸರಿದೋರಿದರೆ ತಲುಪಿಸು. ಶ್ರೀದತ್ತ-ಆಗಬಹುದು, ನೀವೇ ಓದಿಹೇಳಿರಿ ತಾರಾಪತಿರಾಯನು ಪತ್ರವನ್ನು ಈ ರೀತಿ ವಾಚಿಸಿದನು. (ಪತ್ರ.) (ದೇವಿ, ಸುನಂದಾ | ಈ ಅಧಮನಲ್ಲಿ, ಈ ನಿರ್ಭಾಗ್ಯನ ವಿಷಯದಲ್ಲಿ ನೀನು ಹೇಗೆ ಭಾವಿಸುತ್ತಿರುವೆ ? ಕೃತಘ್ನ ನೆಂದೋ ? ನಿರ್ಚ್ಛಣನೆಂದೋ ? ಅಪ್ರಯೋಜ ಕನೆಂದೋ ? ನೀನು ಹೇಗೆ ಭಾವಿಸುತ್ತಿದ್ದರೂ, ನನ್ನನ್ನು ಕ್ಷಮಿಸಬಲ್ಲೆ ಯಲ್ಲವೇ? ಆದರೆ, ನೋಡು , ಪ್ರಾಣಾಧಿಕೆ ! ನಾನು ನಿನ್ನನ್ನು ಬೇಕೆಂದು ಬಟ್ಟವನಲ್ಲ, ದುರ್ಜನರ ಅಪಲಾಪದಿಂದ ವಂಚಿತನಾದ ನನಗೆ ನಿನ್ನ ವಿಚಾರವಾಗಿ ಬಂದ ಸುಳ್ಳು ಸುದ್ದಿಯೇ ನಿಜವಾಗಿ ತೋರಿತು, ವಿಚಾರ ಶೂನ್ಯತೆಯಿಂದ, ನಿನ್ನನ್ನು ಈವರೆಗೂ ಪರಂಧಾಮದಲ್ಲಿರುವವಳನ್ನಾಗಿಯೇ ತಿಳಿದು, ಮನಸಾ ಪೂಜಿಸುತ್ತಿದ್ದೆನು. ಆದರೆ, ಇಂದು ಶ್ರೀದತ್ತ ಕುಮಾರನಿಂದ ನಿನ್ನ ಜೀವಿತ ವೃತ್ತಾಂತವನ್ನು ಕೇಳಿ ತಿಳಿದು, ನನಗಾದ ಸಂತೋಪಾಶ್ವ ರ್ಯಗಳನ್ನೂ, ನೀನು ಹೇಳಿ ಕಳುಹಿರುವ ಮಾತುಗಳಿಂದುಂಟಾಗಿರುವ ಕೃತ್ತಾಪವನ್ನೂ ಇಲ್ಲಿ ನಾನು ವಿವರಿಸಿ ಬರೆಯಲು ಅಶಕ್ತನಾಗಿರುವೆನು. ಅಲ್ಲದೆ ಬರೆಯಲು ಕುಳಿತರೆ, ಅಖಂಡವಿಚಾರಗಳೇ ಮುಂದೆ ಬಂದು ನಿಲ್ಲುವುವು. ಯಾವುದನ್ನು ಬರೆವುದು ? ಯಾವುದನ್ನು ಬಿಡುವುದು ? ಇದಕ್ಕಾಗಿ ಎಲ್ಲವನ್ನೂ ಮನದಲ್ಲಿಯೇ ಅಡಗಿಸಿ, ನನ್ನಿ ನುಡಿಯನ್ನು ನೀನು ಕಡೆಗಣಿಸದೆ ನಡೆಯಿಸುವೆ ಎಂಬ ಭರವಸೆಯಿಂದ, ಒಂದೆರಡು ಮಾತಿನಲ್ಲಿ ಮುಗಿಸುವೆನು, ನಿನ್ನ ಸ್ವರ್ಗಿಯ ಪ್ರೇಮಸ್ವರೂಪವನ್ನೇ ಧ್ಯಾನಿಸುತ್ತಿರುವ