ಪುಟ:ದಕ್ಷಕನ್ಯಾ .djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ಸತೀ ಹಿ ತೈ ಷಿ ಣಿ ಈ ನಿನ್ನ ಸ್ವಾಮಿಗೆ, ಮಕ್ಕಳೊಡನೆ ನೀನು ಬಂದು ಎಷ್ಟು ಬೇಗ ಪ್ರಸನ್ನಳಾ ಗಬಲ್ಲೆಯೋ, ಅಷ್ಟೂ ಈತನಿಗೆ ಸಂತೋಷವೇ ಸರಿ, ನನ್ನ ಹಿತೈಷಿಣಿ ಯಾದ ನಿನಗೆ ಇನ್ನು ಹೆಚ್ಚು ಬರೆಯಲೇಕೆ ? ಈ ಪತ್ರಪಠಣವಾದ ಬಳಿಕ ಅಲ್ಲಿ ನಿಲ್ಲದೆ ಹೊರಟುಬರುವೆಯೆಂಬ ಭರವಸೆಯಿಂದ ನಿನ್ನ ಆಗಮನವನ್ನೇ ಇದಿರುನೋಡುತ್ತ, ದಿನಗಳನ್ನೆಣಿಸುತ್ತಿರುವುದಲ್ಲದೆ, ನನಗೆ ಮತ್ತಾವ ಕೆಲ ಸವಿದೆ ? ವಿಷ ಹರಪುರ, ಇತಿ ನಿನ್ನ ಮನದನ್ನ ೧-೮-೧೫, ೨ ತಾರಾಪತಿ, ೨) ಎಂದು ಪತ್ರವನ್ನು ಮುಗಿಯಿಸಿ, ಶ್ರೀದತ್ತನ ಕೈಯ್ಯಲ್ಲಿರಿಸಿದನು. ಶ್ರೀದತ್ತ-ತಲೆದೂಗಿ-'ರಾವಸಾಹೇಬ್ ! ಪತ್ರವು, ಅಂತಃಕರಣವನ್ನು ಚೆನ್ನಾಗಿ ವ್ಯಕ್ತಪಡಿಸುತ್ತಿರುವುದು, ಇನ್ನು ನೀವು, ನಿರ್ವಿಚಾರವಾಗಿ ತೆರಳಬಹದು. ಇಂದಿಗೆ ನಾಲ್ಕನೆಯ ದಿನದಲ್ಲಿ ನಿಮ್ಮ ಪತ್ನಿ ಯು ನಿಮ್ಮ ಬಳಿಯನ್ನು ಸೇರುವಳು. ತಾರಾಪತಿ -ನೀನೇ ಹೋಗುವೆಯಾ ? ಶ್ರೀದತ್ತ --ಹೋಗಬೇಕಾದ ಸಂದರ್ಭವಾದರೆ ಹೋಗುವೆನು, ನೀವಿನ್ನು ಇಲ್ಲಿ ಹೆಚ್ಚು ಹೊತ್ತಿದ್ದರೆ, ಜನರ ಅನುಮಾನಕ್ಕೆ ಕಾರಣವಾಗು ವುದು, ಹೊರಗಿರತಕ್ಕವರಲ್ಲಿ ಬಹುಮಂದಿ ನಮ್ಮ ವಿರೋಧಪಕ್ಷ ದವರಾಗಿದ್ದಾರೆ, ಎಚ್ಚರಿಕೆಯಲ್ಲಿರಬೇಕು. ತಾರಾಪತಿರಾಯನು ಎದ್ದನು. ಅಷ್ಟರಲ್ಲಿ, ಹೊರಗೆ ಕೂಗುವ ಶಬ್ದವೂ ಕೇಳಿಸಿತು. ಅವಸರದಲ್ಲಿ ಕಿರುಮನೆಯ ಬಾಗಿಲನ್ನು ತೆರೆದು ಹೊರಗೆಬಂದು, ಮತ್ತೆ ಬೀಗಹಾಕಿ ಮ್ಯಾಜಿಸ್ಟ್ಟರ (Magistrate) ಮುಂದೆ ಹೋಗಿ, ವಿನಯದಿಂದ ಬೀಗದಕೈಯನ್ನು ಮುಂದಿಟ್ಟು ನಿಂತನು. ಮಜಿಸ್ಸೆಟ್ ಒ ಸಾ ಕಕೇ | ವಿಶೇಷವಟೋ ? ಏನು ? ಜಮೀಾ। ರೇ ! ವಿಶೇಷವುಂಟೇ ? (ರಾವಬಹದ್ದುರ) |