ಪುಟ:ದಕ್ಷಕನ್ಯಾ .djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ 8 ದ ಕ ಕ ನ್ಯಾ ರೈರ್ಮಾ-ಇಲ್ಲ; ಇತ್ತ ಕಡೆಯಲ್ಲಿ ಯಾರೂ ಬಂದಿರಲಿಲ್ಲ, ಬಹದ್ಗುರ-ತಲೆದೂಗಿ,-' ಹೂಂ ! ಇರಲಿ, ಬೇಗಹೋಗಿ ಪೊಲೀಸ್ ಇ೯ ಸ್ಪೆಕ್ಟರ್‌ ದಳವಾಯಿಸಿಂಗರನ್ನು ಬರಹೇಳಿ ಬಾ.' ರೈರ್ಮಾ - ಅಪ್ಪಣೆ ' ಎಂದು ಹೊರಟುಹೋದನು. ಬಹದ್ದುರನು, ಪತ್ರವನ್ನು ತೆರೆದು ಮತ್ತೆಮತ್ತೆಯೂ ಓದು ತಿದ್ದನು. ಅರ್ಧಗಂಟೆಯೊಳಗಾಗಿ, 36 ವರ್ಷದ ದೃಧಾಂಗನಾದ ತೇಜ ಸ್ವಿಯೊಬ್ಬನು ದಂಡಪಾಣಿಯಾಗಿ ಪ್ರವೇಶಿಸಿ, ರಾವಬಹದ್ದುರನಿಗೆ ಕೈ ಮುಗಿದು-' ರಾವಬಹಾದ್ದುರ್ ! ವಿಶೇಷವೇನಾದರೂ ಉಂಟೋ ? ಸಿತ ಕ್ಯಾಗಿ ಬರಮಾಡಿದಿರಿ ?” ಎಂದು ಕೇಳಿದನು. ರಾವಬಹದ್ಗುರ-ಕೈಹಿಡಿದು, ಬಳಿಯಲ್ಲಿದ್ದ ಕುರ್ಚಿಯ ಮೇಲೆ ಕುಳ್ಳಿರಿಸಿ

  • ದಳವಾಯಿಸಿಂಗ್ ! ಇದೇ, ನೋಡು, ನಿನ್ನನ್ನು ಬರಮಾಡಿಸಿದ

ವಿಶೇಷವಾಗಿದೆ.' ಎಂದು ಕೈಯಲ್ಲಿದ್ದ ಪತ್ರವನ್ನು ಮುಂದಿಟ್ಟನು. ದಳವಾಯಿ-ಪತ್ರವನ್ನು ಒಂದೆರಡುಬಾರಿ ಓದಿ, ಬಹದ್ದೂರನಕಡೆಗೆ ತಿರುಗಿ, ' ಪತ್ರಕಾರರು ಬಹಳ ಮೋಸಗಾರರಾಗಿದ್ದಾರೆ.' ಬಹದ್ದುರ-ಅಹುದು , ಯಾರನ್ನು ಉದ್ದೇಶಿಸಿ ಬರೆದಿರುವುದು ? ದಳವಾಯಿ- ಲೋಕಹಿತೈಷಿಗಳಿಗೆ ಅಪ್ರಿಯವನ್ನುಂಟುಮಾಡುವ' ಮತ್ತು 'ಸುಖಮಯವಾದ ಶ್ರೀಯನ್ನು ಅಪಹರಿಸಿ ಇಷ್ಟಸಿದ್ಧಿ ಹೊಂದಲು, ಎಂದು ಬರೆದಿರುವುದರಿಂದ, ಇದು ಜಮೀನ್ದಾರರನ್ನೇ ಉದ್ದೇ ಶಿಸಿ ಬರೆಯಲ್ಪಟ್ಟಿರುವುದೆಂದು ಹೇಳಬೇಕು, ಏಕೆಂದರೆ, ' ಸರ್ಕಾ ರದವರ ಮಹಾಪ್ರಯತ್ನ ಭಂಗೋದ್ದಿಶ್ಯವಾಗಿ' ಎಂದು ಮೊದಲೇ ಎಚ್ಚರಿಸುವುದರಿಂದ, ಹಾಗೆ ಹೇಳಬೇಕಾಗಿದೆ. ಬಹದ್ದು ರ-ಅಷ್ಟು ಮಾತ್ರಕ್ಕೇ ಹೀಗೆ ಊಹಿಸುವುದು ಹೇಗೆ ? ದಳವಾಯಿ-ಹೇಗೆಂದರೆ, ನಿನ್ನೆ ನ್ಯಾಯಸ್ಥಾನದಲ್ಲಿ ಜಮಾನ್ದಾರರ ಪ್ರವೇಶವಾದುದು ಮೊದಲು, ಹೊರಟುಹೋಗುವವರೆಗೂ ನಡೆದ ವಿದ್ಯಮಾನಗಳಿಂದ ಹಾಗೆ ಹೇಳುವೆನು. 5