ಪುಟ:ದಕ್ಷಕನ್ಯಾ .djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ 0 ಸ ತಿ ಹಿ ತ ಷಿ ಣಿ ಅಭದ್ರವನ್ನಾಡಬಾರದು, ಮಗನನ್ನು ನೋಡಿರಿ, ನಿಮ್ಮಿಬ್ಬರನ್ನೂ ನೋಡಿ ಬೆರಗಾಗಿ ಕುಳಿತಿದ್ದಾನೆ. ತಾರಾಪತಿ-ಮಗನನ್ನು ತನ್ನೆರಡು ಕೈಗಳಿ೦ದೆಯೂ ಹಿಡಿದೆತ್ತಿ ತೊಡೆ ಯಲ್ಲಿ ಕುಳ್ಳಿರಿಸಿ, ಮುಡಿಯನ್ನು ಮೂಸುತ್ತ, ಸಂತೋಷಾತಿಶಯ ದಿಂದ- ಭಗವಂತ ! ಇದೆಲ್ಲವೂ ನಿನ್ನ ಅನುಗ್ರಹ ; ಮುಂದೆಯೂ ನಿನ್ನ ಅನುಗ್ರಹದಿಂದಲೇ ಅಭ್ಯುದಯವನ್ನು ಹೊಂದಬೇಕು. ಎಂದೆಂದೂ ನಿನ್ನನುಗ್ರಹವು ಸ್ಥಿರವಾಗಿರಲಿ.' ಎಂದು ಹೇಳುತ್ತಿ ಧ್ವನು, ಆನಂದ-ಶೋಕಸಂತಾಪಗಳ ವೇಗವು ತಕ್ಕ ಮಟ್ಟಿಗೆ ಶಾಂತ ಸ್ಥಿತಿಯನ್ನು ತಾಳಿತು. ಸುನಂದೆಯು ಅತ್ತೆಯ ಕಾಲನ್ನು ಹಿಡಿದು " ಅಮ್ಮಾ ಯಾ । ಅನುಗ್ರಹಮಾಡಿರಿ. ಈ ಪಾದಸೇವೆಯಿಂದ ಜನ್ಮ ಸಾರ್ಥಕವಾಗುವಂತೆ ಆಶಿರ್ವಾದಮಾಡಿರಿ.' ಎಂದು ಕೇಳಿ ಕೊಂಡಳು. ಚಂದ್ರಮತಿಗೆ ಹೊಟ್ಟೆ ಹಿಡಿಯಲಾರದಷ್ಟು ದುಃಖ ವಾಯಿತು. ಅಳುತಳು, ಸೊಸೆಯನ್ನೆಬ್ಬಿಸಿ, ಬಳಿಯಲ್ಲಿ ಕುಳ್ಳಿರಿ ಸಿಕೊಂಡು ಹೇಳಿದಳು,-ಎಲ್ಲವೂ ಭಗವತ್ತೈಪೆ, ತಾಯಿಾ ! ಅವನೇ ನಿನಗೆ ರಕ್ಷಕನಾಗಿರುವನು , ಚಿಂತಿಸಬೇಡ.' ಸುನಂದೆ-ಸುತ್ತಲೂನೋಡಿ ವಿಸ್ಮಯ-ಕುತೂಹಲಗಳಿಂದ ಅತ್ತೆಯನ್ನು ಕುರಿತು ' ಅಮ್ಮಾ ಯಾ ! ಮನೆಯ ಯಜಮಾನಿಯೆಲ್ಲಿ ? ಕಾಣು ವುದಿಲ್ಲವಲ್ಲ !' ಚಂದ್ರಮತಿ-ಜ್ಞಾಪಿಸಿಕೊಂಡವಳಂತೆ ಸುತ್ತಲೂ ನೋಡುತ್ತ ಕೂಗಿ ದಳು-' ಗಂಗಾ ! ಎಲ್ಲಿರುವೆ ?' ಏನಿದು ? ಅನ್ಯಾಯ ! ಸೋದರಿಯರೇ ! ಈವರೆಗೂ ಗಂಗೆಯ ನೆನೆವೇ ಇರಬೇಡವೇ ? ಹೇಗಾದೀತು ? ಸ್ನೇಹಮಯಿ ಸುನಂದೆಯನ್ನು ನೋಡಿ, ಆನಂದೋದ್ರೇಕದಿಂದಾಡುವ ತಾರಾನಾಧನ ಸ್ತುತಿವಚನಗಳಿಗೆ ತಲೆದೂಗಿ ಜಡರಾಗಿದ್ದವರಿಗೆ ಗಂಗೆಯ ನೆನೆವಾದರೂ ಹೇಗಾಗಬೇಕು ?