ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೆಯ ಪ್ರಕರಣ- ವನದೇವತೆ ! ೬೭ wwmmum MMMAMMAMwwwMMMAMMM mMrMMur A Twww. ಮೈಯಲ್ಲಿ ಸ್ವಲ್ಪ ಅಸ್ವಸ್ಥತೆಯಾದದ್ದರಿಂದ ಅವನು ತಾನು ಹೋಗುವದು ರಹಿತಮಾಡಿ ಮಿಕ್ಕವರನ್ನು ರಾಮಪುರಕ್ಕೆ ಕಳಿಸಿಕೊಟ್ಟನು. ವಿನಾಯಕನಿಗೆ ಈ ಸಂಗತಿಯು ಮೊದಲೇ ತಿಳಿದಿದ್ದಿತು. ಮೊದಲು ಬಸರಾಬಾದದಿಂದ ರಾಮಪುರಕ್ಕೆ ಹೋಗಲಿಕ್ಕೆ ಚಕ್ಕಡಿಯ ಹೊರ್ತು ಬೇರೆ ಸುಲಭತೆಯಿದ್ದಿಲ್ಲ, ಆದರೆ ವಿನಾಯಕನು ಕಾರಖಾನೆಯು ಪ್ರಾರಂಭವಾದ ಕೂಡಲೆ ಸ್ವತಃ ಎರಡು ಕುದುರೆಯ ಗಾಡಿಗಳನ್ನೂ, ಎರಡು ಹತ್ತುವ ಕುದುರೆಗಳನ್ನೂ ಇಟ್ಟಿದ್ದನು. ದಿವ್ಯಸುಂದರಿಯು ತನ್ನ ಕಾರಖಾನೆಯನ್ನು ನೋಡುವ ದಕ್ಕಾಗಿ ಬರುತ್ತಾಳೆಂಬುವದನ್ನು ಕೇಳಿ ಅವನಿಗೆ ಪರಮಾನಂದವಾಯಿತು. ಅವನು ಒಳ್ಳೇ ಉತ್ಸುಕತೆಯಿಂದ ಕುದುರೆಯ ಮೇಲೆ ಕುಳಿತು, ಸಂಗಡ ಕುದುರೆಯ ಗಾಡಿ ಗಳನ್ನು ಕೂಡಿಸಿಕೊಂಡು ಬಸರಾಬಾದಕ್ಕೆ ಬಂದಿದ್ದನು. ರಾಮರಾಯನ ಹಡಗು ನಾಲ್ಕು ಹೊಡೆಯುವ ಸುವಾರಕ್ಕೆ ಬರಬೇಕಾಗಿದ್ದಿತು, ಆದರೆ ಹಾದಿಯಲ್ಲಿ ಏನೋ ತೊಂದರೆಯಾದದ್ದರಿಂದ ಹಡಗವು ಸಂಜೆಯ ಆರು ಹೊಡೆಯುವಾಗ ಬಂದಿತು. ಆಗ ವಿನಾಯಕನು ಎಲ್ಲರನ್ನು ಇಳಿಸಿಕೊಂಡು, ಅವರ ಯಥೋಚಿತವಾದ ಆದರಸತ್ಕಾರ ಮಾಡಿ, ಅವರಿಗೆ ಚಹಾ ಮೊದಲಾದ ಉಪಹಾರ ಮಾಡಿಸಿದನು, ಹಡಗವ ನಾಲ್ಕು ಹೊಡೆಯುವಾಗ ಬಂದಿತೆಂದರೆ, ಕೂಡಲೆ ಹೊರಟು ರಾಮಪುರಕ್ಕೆ ಹೋಗಬೇಕೆಂದು ವಿನಾಯಕನ ವಿಚಾರವಿದ್ದಿತು; ಆದರೆ ಬಸರಾಬಾದದಲ್ಲಿಯೇ ಸಂಜೆಯ ಏಳು ಹೊಡೆ ದದ್ದರಿಂದ ಆಗ ರಾಮಪುರಕ್ಕೆ ಹೋಗಬೇಕೊ, ಹೋಗಬಾರದೋ ಎಂಬ ಬಗ್ಗೆ ವಿನಾಯಕನಿಗೆ ದೊಡ್ಡ ವಿಚಾರವು ಬಿದ್ದಿತು. ರಾತ್ರಿಯ ಕಾಲವಾದರೂ ಬೆಳದಿಂಗಳು ಇರುತ್ತದೆ, ಕುದುರೆಯ ಗಾಡಿಗಳಿರುತ್ತವೆ, ಬಹಳವಾದರೆ ಹೋಗಲಿಕ್ಕೆ ಹತ್ತು ಹೊಡೆ ದೀತು, ಇತ್ಯಾದಿ ಕಾರಣಗಳಿಂದ ರಾಮರಾಯ ಮೊದಲಾದವರು ವಿನಾಯಕನಿಗೆ. ಆಗಲೇ ಹೋಗಬೇಕೆಂದು ಹೇಳಿದರು. ಸರ್ವಸಮ್ಮತಿಯಾದ ಮೇಲೆ ವಿನಾಯಕನು ಕುದುರೆಯ ಗಾಡಿಗಳನ್ನು ಸಿದ್ದ ಮಾಡಲಿಕ್ಕೆ ಹೇಳಿದನು. ಸಿದ್ದವಾಗಿ ಗಾಡಿಗಳ ಮೇಲೆ ಕೂಡುವವರೆಲ್ಲರೂ ಕುಳಿತಮೇಲೆ ಗಾಡಿಗಳು ಹೋಗಹತ್ತಿದವು, ವಿನಾಯಕನ ಓರ್ವ ಮಿತ್ರನು ಕುದುರೆಯ ಮೇಲೆ ಕುಳಿತುಕೊಂಡು ಎಲ್ಲಕ್ಕೂ ಮುಂದೆ ಹೋಗುತ್ತಿದ್ದನು. ಅವನ ಹಿಂದೆ ನವಕರ ಜನರ ಗಾಡಿಯಿದ್ದಿತು. ಈ ಗಾಡಿಯ ಹಿಂದೆ ರಾಮರಾಯದಿವ್ಯಸುಂದರಿ-ಮಧುರೆಯರು ಕುಳಿತ ಗಾಡಿಯಿದ್ದು, ಇದರ ಹತ್ತಿರದಲ್ಲಿಯೇ ವಿನಾಯ ಕನು ಹತ್ತಿದ ಕುದುರೆಯಿದ್ದಿತು. ಗಾಡಿಗಳು ವೇಗದಿಂದ ಹೋಗುತ್ತಿದ್ದದ್ದರಿಂದ ಅವು ಗಳ ಖಡಖಡ ಧಡಧಡ ಸಪ್ಪಳವೂ, ಹಾದಿಯಲ್ಲಿ ಹಾರತಕ್ಕ ಧೂಳಿಯೂ, ಭರನೆ ಬೀಸುವ ಗಾಳಿಯ, ಹಿಟ್ಟು ಚಲ್ಲಿದಂತೆ ಬಿದ್ದಿದ್ದ ಬೆಳದಿಂಗಳೂ, ಪರ್ವತವೂ ದಿವ್ಯಸುಂದರಿ-ಮಧುರೆಯರಿಗೆ ನವೀನವಾಗಿದ್ದದ್ದರಿಂದ ಅವರಿಗೆ ಆ ಪ್ರವಾಸವು ಒಳ್ಳೆ ವಿನೋದವಾಗಿ ತೋರಹತ್ತಿತು. ಒಮ್ಮೊಮ್ಮೆ ಅರಣ್ಯದೊಳಗಿನ ಕತ್ತಲೆಯನ್ನು ನೋಡಿ ಅವರ ಮನಸ್ಸಿಗೆ ಭೀತಿಯೆನಿಸುತ್ತಿದ್ದಿತು. ಸುಮಾರು ಒಂದೂವರೆ ತಾಸು ಗಾಡಿಗಳು