ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ ೫ನೆಯ ಪ್ರಕರಣ- ವನದೇವತೆ! •••••vvvv • //wwwmM J\/ # / ವಿನಾ:- ( ಕುದುರೆಯನ್ನು ಇಳಿದು ಇಂದಿರೆಯ ಹತ್ತಿರ ಹೋಗಿ) ನೀವು ಇಂಥ ಭಯಂಕರ ರಾತ್ರಿಯಲ್ಲಿ ಇಲ್ಲಿಗೆ ಯಾಕೆ ಬಂದಿರಿ? ನಮ್ಮ ಗಾಡಿಯನ್ನು ನೋಡಿ ನಮಗೆ ಕೈಬೀಸಿ ಕರೆದ ಕಾರಣವೇನು?” ಇಂದಿರೆ:- ( ಖೇದಕಾರಸ್ವರದಿಂದ ) ವಿನಾಯಕರಾಯ, ಭಯಂಕರ ರಾತ್ರಿಯಾದರೂ ಈಶ್ವರೀದತ್ತ ಧೈರ್ಯದಿಂದ ನಾನು ಕೇವಲ ನಿಮ್ಮ ಪ್ರಾಣ ಉಳಿಸು ವದರ ಸಲುವಾಗಿ ಈ ಅಡವಿಗೆ ಬಂದಿದ್ದೇನೆ, ನನ್ನ ತಂದೆಯನ್ನು ಕ್ಷಮಿಸಿ ನೀವು ಆತನ ಮೇಲಿನ ಫಿರ್ಯಾದಿಯನ್ನು ಹಿಂದಕ್ಕೆ ತಕ್ಕೊಂಡರೂ ಆ ಬಗ್ಗೆ ಅವನು ನಿಮ್ಮ ಉಪಕಾರವನ್ನು ಸ್ವಲ್ಪಾದರೂ ನೆನಿಸದೆ, ಇನ್ನೂ ಮೃತ್ಯುಪತ್ರದೊಳಗೆ ನಮೂದಿಸಿರುವ ಆಸ್ತಿಯ ಸಲುವಾಗಿ ಬಡಿದಾಡುತ್ತಿರುತ್ತಾನೆ. ಅಷ್ಟರ ಸಲುವಾಗಿ ನನ್ನ ತಂದೆ, ಗೋಪಾಳರಾಯ ಇವರಿಬ್ಬರು ನಿಮ್ಮನ್ನು ಈ ಅಡವಿಯಲ್ಲಿಯೇ ಕೊಲ್ಲುವ ಪ್ರಯತ್ನ ಮಾಡಿದ್ದಾರೆ. " ಏನಿದ್ದಿತೋ ಏನೋ, ಈ ಕಡೆಯ ಶಬ್ದವನ್ನು ಉಚ್ಚರಿಸುವಾಗ ಇಂದಿರೆಯ ಕಣ್ಣುಗಳಿಂದ ದಳದಳ ಕಣ್ಣೀರುಗಳು ಸುರಿದವು. ವಿನಾ:- ( ನಡುಗುತ್ತ ) ನೀವು ನಿಮ್ಮ ಪ್ರಾಣದಾಶೆಯನ್ನು ಬಿಟ್ಟು, ತಂದೆಯ ದುಷ್ಕೃತ್ಯವನ್ನು ಹೇಳುವದಕ್ಕಾಗಿ ಇಂಥ ಭಯಂಕರವಾದ ಅರಣ್ಯದಲ್ಲಿ ಬಂದದ್ದ ಕ್ಕಾಗಿ ನಾನು ನಿಮ್ಮ ಉಪಕಾರವನ್ನು ಎಷ್ಟು ಕೊಂಡಾಡಿದರೂ ಸ್ವಲ್ಪ ಸರಿ. ನಿಮಗೂ, ನನಗೂ ಯಾವ ಋಣಾನುಸಂಬಂಧವದೆಯೋ ಏನೊ, ಪ್ರತ್ಯೇಕ ಸಂಕಟ ದೊಳಗಿಂದ ನಿಮ್ಮಿಂದ ನಾನು ಬದುಕಬೇಕೆಂದು ಪರಮೇಶ್ವರೀ ಸಂಕೇತವಿದ್ದಂತೆ ತೋರುತ್ತದೆ. ನಿಮ್ಮಿ ಉಪಕಾರ-ಋಣದಿಂದ ನಾನು ಮುಕ್ತನಾಗುವದು ಅಶಕ್ಯ ವಾಗಿದೆ. " ಇಂದಿರೆ:- ನೀವು ನನಗೆ ನಿಷ್ಕಾರಣ ಸ್ತುತಿಸುತ್ತೀರಿ, ನನ್ನ ಕರ್ತವ್ಯ ಕರ್ಮವನ್ನಷ್ಟು ಮಾತ್ರ ನಾನು ಮಾಡಿರುವೆನು, ನನ್ನ ತಂದೆಯ ಕಡೆಯಿಂದ ಮನು ಷ್ಯವಧೆಯಾಗಬಾರದೆಂಬ ನನ್ನಿ ಪ್ರಯತ್ನದಲ್ಲಿ ನನ್ನ ಸ್ವಾರ್ಥವಿಲ್ಲೆಂಬುವ ಹಾಗಿಲ್ಲ. ಹೇಗೇ ಇರಲಿ, ನೀವು ಮಾತ್ರ ಒಳ್ಳೆ ಜಾಗೃತೆಯಿಂದ ಇರಿ.” ವಿನಾ:-( ನೀವು ನಿಮ್ಮಿ ಕೃತಿಗೆ ಬೇಕಾದ ಹೆಸರು ಇಡಿರಿ, ನಾನಂತೂ ಈ ಕೃತಿಗೆ ಪರೋಪಕಾರವೆಂದೇ ಹೆಸರಿಡುವೆನು, ನಿಮ್ಮ ತಂದೆಯು ಬೇಕಾದ ಪ್ರಯತ್ನ ದಿಂದ ನನ್ನನ್ನು ಕೊಲ್ಲಲಿ, ಆ ವಿಷಯವಾಗಿ ನನಗೆ ಸ್ವಲ್ಪಾದರೂ ಚಿಂತೆಯಿಲ್ಲ. ಬದು ಕುವದೂ, ಸಾಯುವದೂ ಮನುಷ್ಯನ ಕೈಯೊಳಗಿನ ಆಟವಲ್ಲ. ಅದೆಲ್ಲ ಈಶ್ವರೀ ಸೂತ್ರವಾಗಿರುವದು, ಸಂಸದ-ವಿಪದುಗಳನ್ನು ನಾನು ಆ ದಯಾಘನನ ಸ್ವಾಧೀನ ಮಾಡಿದ್ದೇನೆ, ೨