ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ದಿವಸುಂದರಿ ಅಥವಾ ದೀರ್ಘ ಪ್ರಯತ್ನ. ಯೋmmonno •ewwwಯ ಯಾಗಿ ಅವಳ ಭೆಟ್ಟಿಯಾಗಬೇಕೋ ಆಗಬಾರದೋ ಎಂಬ ವಿಚಾರದಲ್ಲಿ ಅವನು ಎರಡು ದಿವಸ ಕಳೆದನು. ಇಂದು ಸಮಾರಂಭದ ಶನಿವಾರ ದಿವಸ, ಆ ದಿವಸ ಪ್ರಾತಃಕಾಲದಿಂದ ಸಾಯಂಕಾಲದ ವರೆಗೆ ಚಿಂತಾಮಣಿರಾಯನ ಸಮಾರಂಭದ ಸಿದ್ದತೆಯು ಮಿತಿಮೀರಿ ನಡೆದಿದ್ದಿತು. ಅತ್ತಿತ್ತ ಧ್ವಜ, ಪತಾಕೆ, ತೋರಣ ಮೊದಲಾದವುಗಳನ್ನು ಕಟ್ಟುವ ಕೆಲಸವೂ, ವಿದ್ಯುದ್ದೀಪಿಕೆಗಳನ್ನು ಹಚ್ಚುವ ಕೆಲಸವೂ ಭರದಿಂದ ನಡೆಯಹತ್ತಿತು. ಸಾಯಂಕಾಲದ ನಾಲ್ಕು ಹೊಡೆಯುವ ಸುಮಾರಕ್ಕೆ ಚಿಂತಾಮಣಿರಾಯನ ಬಂಗ ಲೆಯು ಇ೦ದ್ರಭವನದಂತೆ ಸುಂದರವಾಗಿ ಕಾಣಿಸಹತ್ತಿತು. ಸಾಯಂಕಾಲದ ವೇಳೆ ಯಾದ ಕೂಡಲೆ ಆ ಎಲ್ಲ ವಿದ್ಯುದ್ದೀಪಿಕೆಗಳು ಒಮ್ಮೆಲೇ ಪ್ರಜ್ವಲಿತವಾದವು, ತೋಟ ದಲ್ಲಿ ಬ್ಯಾಂಡು ಮಧುರಸ್ವರದಿಂದ ಬಾರಿಸಹತ್ತಿತು. ಬಂಗಲೆಗೆ ಒಂದರಹಿಂದೊಂದು ದೊಡ್ಡ ದೊಡ್ಡ ಜನರ ಗಾಡಿಗಳು ಬರಹತ್ತಿದವು, ನಿಮಂತ್ರಿತ ಯುರೋಪಿಯನ್, ಹಿಂದೀ ಪುರುಷ-ಸ್ತ್ರೀಯರು ತಮ್ಮ ತಮ್ಮ ಸ್ಥಳದ ಮೇಲೆ ಕುಳಿತುಕೊಳ್ಳಲು ಮೊದಲು ಸ್ವಲ್ಪ ಹೊತ್ತು ಹಿಂದೂಪದ್ದತಿಯ ಗಾಯನವಾಯಿತು, ಅನಂತರ ನಿಮಂತ್ರಿತಜನ ರಿಗ ಉಪಹಾರದ ಬಗ್ಗೆ ಸೂಚನೆಯಾಯಿತು, ಆ ಕೂಡಲೆ ಅವರು ತೋರಿಸಿದ ದಿವಾಣಖಾನೆಯಲ್ಲಿ ಹೋಗಿ ಕುಳಿತರು. ಜಾತಿಧರ್ಮದಂತೆ ಬೇರೆ ಬೇರೆ ಎಲ್ಲರ ಉಪಹಾರದ ವ್ಯವಸ್ಥೆಯಾದ ಮೇಲೆ ಟೊಂಕಕಟ್ಟಿಕೊಂಡು ನಿಂತಜನರಿಗೆ ಸ್ವಲ್ಪ ವಿಶ್ರಾಂತಿಯು ಸಿಕ್ಕತು. ಅರ್ಥಾತ್ ದಿವ್ಯಸುಂದರಿ-ವಿನಾಯಕರಿಗೆ ಮಾತಾಡಲಿಕ್ಕೆ ಅನುವು ಸಿಕ್ಕಿತು. ಉಪಹಾರ ತೀರಿಸಿಕೊಂಡು ನಿಮಂತ್ರಿತಜನರು ತಿರುಗಿ ತಂತಮ್ಮ ಸ್ಥಳದ ಮೇಲೆ ಕುಳಿತಮೇಲೆ ನಾಲೈದು ಮಂದಿ ಯುರೋಪಿಯನ್ ನರ್ತಕಿಯರ ನೃತ್ಯವು ಪ್ರಾರಂಭವಾಯಿತು, ಆ ಕುಣಿಯುವ ಸ್ತ್ರೀಯರು ಅಚ್ಚ ಪ್ರಾಯದವರಿದ್ದು, ಅವರ ಪೋಷಾಕು ಕೋಲುಮಿಂಚಿನಂತೆ ಥಳಥಳ ಹೊಳಿಯುತ್ತಿದ್ದಿತು. ಅವರ ವಿಲಕ್ಷಣ ಅಭೂತಪೂರ್ವ ನೃತ್ಯದಿಂದ ಸಕಲರಿಗೂ ಆಶ್ಚರ್ಯವಾಯಿತು. ನಮ್ಮ ಅರಸಿಕ ವಿನಾಯಕನಿಗೆ ಮಾತ್ರ ಅದು ಅಸಹ್ಯವಾಗಿ ತೋರಿತು. ಅವನು ಮೆಲ್ಲನೆ ಯುಕ್ತಿಯಿಂದ ಎದ್ದು, ಆ ದಿವಾಣಖಾನೆಯ ಹಿಂದಿನ ಭಾಗದಲ್ಲಿರುವ ಒಂದು ಬಾಕಿನ ಮೇಲೆ ಕುಳಿತು ಆಕಾಶಸ್ಥ ತಾರೆಗಳನ್ನು ನಿರೀಕ್ಷಣಮಾಡಹತ್ತಿದನು. ವಿನಾಯಕ ನೆಂದರೆ ಅಷ್ಟು ದೊಡ್ಡ ಮನುಷ್ಯನಾಗದ್ದರಿಂದ, ಅವನು ಅಲ್ಲಿಂದ ಎದ್ದು ಹೋದದ್ದು ಯಾರ ಲಕ್ಷದಲ್ಲಿಯೂ ಬರಲಿಲ್ಲ. ನಮ್ಮ ದಿವ್ಯಸುಂದರಿಗೆ ಮಾತ್ರ ಅವನು ದೊಡ್ಡವ ನಾಗಿದ್ದನು. ಅವಳ ಲಕ್ಷವೆಲ್ಲ ಅವನ ಕಡೆಗೇ ಇದ್ದಿತು. ಅವನು ಎದ್ದು ಹೋದ ೧೦-೧೨ ಮಿನೀಟಿನಲ್ಲಿ ಸಂಧಿಯನ್ನು ಸಾಧಿಸಿ, ಅವಳೂ ಸ್ತ್ರೀಸಮಾಜದಿಂದ ಎದು ವಿನಾಯಕನಿದ್ದ ಸ್ಥಳಕ್ಕೆ ಹೋದಳು. ವಿನಾಯಕನು ಒಂದೇಸವನೆ ಆಕಾಶದ ಕಡೆಗೆ ನೋಡುತ್ತಿರುವದನ್ನು ಕಂಡು ಅವಳು ಮೆಲ್ಲನೆ ಅವನು ಕುಳಿತ ಬುಕಿನ ಹಿಂದೆ