ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.مرم مرد مرمرم ೬ನೆಯ ಪ್ರಕರಣ-ದೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ ! ಉ•••••••••• ••••••++++AMove, ಹೋದಳು, ಮತ್ತು ಅವಳು ಮಧುರಸ್ಕರದಿಂದ:-( ನೀವು ಯಾಕೆ ಇತ್ತ ಬಂದಿರಿ? » ಎನ್ನಲು ಆ ಪರಿಚಯದ ಮಧುರಶಬ್ದವು ಕಿವಿಗೆ ಮುಟ್ಟುತ್ತಲೇ ಆಕಾಶಸ್ಥ ಚಂದ್ರಿಕೆಯ ಕಡೆಗಿದ್ದ ವಿನಾಯಕನ ಲಕ್ಷವ ಹತ್ತರದಲ್ಲಿದ್ದ ಚಂದ್ರಿಕೆಯ ಕಡೆಗೆ ತಿರುಗಿತು. ಆಗ ಅವನು ನಗುತ್ತ:-( ನಾನು ಮನೆಗೆ ಹೋಗಬೇಕೆಂದು ಮಾಡಿದ್ದೇನೆ, ಆದರೆ ಅಪ್ಪಣೆಯಿಲ್ಲದೆ ಹೇಗೆ ಹೋಗಬೇಕೆಂದು ಆಲೋಚಿಸಿ ನಿಂತಿದ್ದೇನೆ, ೨” ಎಂದನ್ನಲು | ದಿವ್ಯಸುಂದರಿಯು ವಿನಾಯಕನು ಕುಳಿತ ಬಾಕಿನ ಮೇಲೆ ಕುಳಿತು:IC ಯಾಕೆ? ತಮಗೆ ಈ ಸಮಾರಂಭವು ಮನಸ್ಸಿಗೆ ಬಂದಂತೆ ಕಾಣುವದಿಲ್ಲ ? ?” ಎಂದಂದಳು. ಆಗ ವಿನಾಯಕನು ಸ್ವಲ್ಪ ಹೊತ್ತು ಸುಮ್ಮನಿದ್ದು:-( ಹೌದು, ನನಗೆ ಇಂಥ ನೃತ್ಯ ಮೊದ ಲಾದವು ಸೇರುವದಿಲ್ಲ ? ” ಎಂದನ್ನಲು ದಿವ್ಯಸುಂದರಿಯು:-( ನನಗೆ ನೃತ್ಯವೇ ಯಾಕೆ; ಇಡೀ ಸಮಾರಂಭವೇ ನನ್ನ ಮನಸ್ಸಿಗೆ ಬಂದಿಲ್ಲ. ತಂದೆಗೆ ಈ ಮಹೋತ್ಸ ವವು ಬೇಡೆಂದು ಹೇಳಿದರೂ ಕೇಳಲಿಲ್ಲ. ” ಎಂದಂದಳು. ಈ ಪ್ರಕಾರ ದಿವ್ಯಸುಂದರಿ-ವಿನಾಯಕರ ಸಂಭಾಷಣವು ನಡೆದಿರುವಾಗ ದಿವಾಣಮಾಧವರಾಯನು ಬಂದನು. ಅವನು ಬಂದ ಕೂಡಲೆ ವಿನಾಯಕನು ಅವನನ್ನು ಆದರಪೂರ್ವಕವಾಗಿ ಕೂಡಿಸಿ ನೋಡುತ್ತಾನೆ, ಅವನ ಮುಖ ಕಮಲವು ಬತ್ತಿಹೋಗಿದೆ! ಆಗ ವಿನಾಯಕನು (ಇದೇನು ಮಾಧವರಾಯ ! ನಿಮ್ಮ ಮೋರೆಯು ಹೀಗೇಕೆ ಆಗಿದೆ! ?” ಎನ್ನಲು ಆಗ ಮಾಧವರಾಯನು ಉಸುರ್ಗರೆ ಯುತ್ತ ವಿನಾಯಕರಾಯ, ವಿಶ್ವಾಸಿಕರಾದ ನಿಮ್ಮೊಡನೆ ನನ್ನ ಚಿಂತಾಕಾರಣವನ್ನು ಹೇಳಲಿಕ್ಕೆ ಅಡ್ಡಿಯೇನೂ ಇದ್ದಿಲ್ಲ; ಆದರೆ ಕೆಲವು ಕಾರಣಗಳ ಸಲುವಾಗಿ ಈಗಲೇ ನನ್ನ ಚಿಂತಾಕಾರಣವನ್ನು ಹೇಳಲಿಕ್ಕೆ ಬರುವಂತಿಲ್ಲ. ಈ ಬಗ್ಗೆ ಕ್ಷಮಿಸಬೇಕು. ” ಎಂದ ನಲು ವಿನಾಯಕನು ಗಾಂಭೀರ್ಯದಿಂದ ( ತಮಗೆ ಬಂದ ಸಂಕಟವನ್ನು ಶಕ್ಯಾನು ಸಾರ ನಾನು ಪರಿಹರಿಸಲಿಕ್ಕೆ ಆಜನ್ಮ ಸಮರ್ಥನಾಗಿರುವದರಿಂದ, ಚಿಂತಾಕಾರಣವನ್ನು ವಿಚಾರಿಸಿದೆನು. ಕಾರಣವನ್ನು ನನಗೆ ಹೇಳದಿದ್ದರೂ, ಅದಕ್ಕೆ ನನ್ನಿಂದೇನಾದರೂ ಸಹಾಯವಾಗಬೇಕಾಗಿದ್ದರೆ ಆ ಪ್ರಕಾರ ನನಗೆ ಅವಶ್ಯವಾಗಿ ಆಜ್ಞೆಯನ್ನು ಮಾಡಿರಿ.” ಎಂದನು. ಈ ಪ್ರಕಾರ ಈರ್ವರ ಸಂಭಾಷಣವು ನಡೆಯುತ್ತಿರಲು ಹನ್ನೊಂದು ಹೊಡೆ ಯಿುತು, ಸಮಾರಂಭದ ಕೆಲಸವೂ ಮುಗಿದು, ಬಂದ ಜನರು ಚಿಂತಾಮಣಿರಾಯನ ಅನುಜ್ಞೆಯನ್ನು ಪಡೆದು ಸಹಾಸ್ಯದಿಂದ ಮನೆಗೆ ಹೋಗಹತ್ತಿದರು, ಮನುಷ್ಯರವ ದಿಂದ ಪ್ರತಿಧ್ವನಿಗೊಳ್ಳುತ್ತಿದ್ದ ದಿವಾಣಖಾನೆಯು ಅರ್ಧತಾಸಿನಲ್ಲಿ ಜನಶೂನ್ಯವಶ ಯಿತು. ಚಿಂತಾಮಣಿರಾಯನು ತನ್ನ ದರ್ಬಾರದ ಪೋಷಾಕನ್ನು ತೆಗೆಯಹತ್ತಿದನು. ಏಕಾಂತ ಮಾತಾಡಲಿಕ್ಕೆ ಇದು ಸುಸಂಧಿಯೆಂದು ಯೋಚಿಸಿ ಮಾಧವರಾಯನು ಕುಳಿತ