ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೆಯ ಪ್ರಕರಣದೀ ಕಾಮರ್ಸ ಬ್ಯಾಂಕ ಆಫ್ ಇಂಡಿಯಾ! AfK/\ 21 ? ? ? f\r * * ' + ' + ' + + ' * ** ** (* ** 1 - 7 (shhhhhhhh. ಕೊಂಡು: ಮಕ್ಕಳೇ, ನಮ್ಮ ಸರ್ವ ವೈಭವವು ನಮ್ಮ ಕೈಬಿಟ್ಟು ಹೋಯಿತು, ಜನರಿಗೆ ಮುಖವನ್ನು ತೋರಿಸದಂತಾಯಿತು. ಆ ವಸಂತನ ಕಾಮರ್ಸ ಬ್ಯಾಂಕು ಮುಳುಗಿತು ! " ಎಂದನು. ಚಿಂತಾವ:ಣಿರಾಯನ ಮಾತಿನಿಂದ ರಾಮರಾಯನ ಮನ ಸ್ಸಿನ ಮೇಲೆ ಆದ ಪರಿಣಾಮವು ಅವನಿಗೇ ಪರಿಚಯ : ಮಧುರೆಯ ಮಿತಿಮೀರಿ ಹಳಹಳಿಬಡಹತ್ತಿದಳು. ದಿವಸುಂದರಿಯು ಮಾತ್ರ ಶಾಂತಳಿದ್ದಳು. ತಂದೆಯದು ಬಹಳ ಹಾನಿಯಾಯಿತೆಂಬುವದು ಅವಳಿಗೆ ತಿಳಿಯಿತು, ಆದರೆ ಅಷ್ಟರ ಸಲುವಾಗಿ ಇಷ್ಟು ದುಃಖವೇಕೆಯೆಂಬುವದು ಅವಳಿಗೆ ತಿಳಿಯಲಿಲ್ಲ, ಏನೂ ಅರಿಯದ ಕುಮಾರಿ ದಿವ್ಯಸುಂದರಿ ! ಈ ಜಗತ್ತಿನಲ್ಲಿ ಕೇವಲ ಧನದಿಂದಲೇ ಜನರು ಮಾನಗೊಡುತ್ತಾರೆಂಬು ವದೂ, ಧನವಿದ್ದರೇನೇ ಎಲ್ಲರೂ ಪ್ರಿಯರಾಗುತ್ತಾರೆಂಬುವದೂ, ಧನದೇವತೆಯು ಕೈ ಬಿಟ್ಟು ಹೋದ ಮೇಲೆ ಆಕಾಶವೇ ಹೊತ್ತುಕೊಂಡು ಬಿದ್ದಂತಾಗುತ್ತದೆಂಬುವದೂ ಆ ಮುಗ್ಗ ದಿವಸುಂದರಿಗೆ ಏನು ಪರಿಚಯ ! ! ರಾಮರಾಯ, ಚಿಂತಾಮಣಿರಾಯ ಇವರ ಮಹತ್ವಾಕಾಂಕ್ಷೆಯು ಅದೊಂದು ದುಡ್ಡನ್ನೇ ಅವಲಂಬಿಸಿದ್ದಿತು. ಅವರಿಗೆ ದುಡ್ಡಿನಿಂದಲೇ ಮಾನವದೆಯೆಂಬುವದು ಪೂರ್ಣ ಪರಿಚಯವಿದ್ದಿತು. ಎಷ್ಟೋ ಪ್ರಸಂಗದಲ್ಲಿ ಶ್ರೀಮಂತ ಮನುಷ್ಯರು ತಾವು ಜಗತ್ತಿನಲ್ಲಿ ಇಷ್ಟು ಕೀರ್ತಿಶಾಲಿಗಳು ಧನ ದಿಂದಲೇ ಆಗಿರುತ್ತೇವೆಂಬದನ್ನು ಮರೆತು, ತಮ್ಮ ಹತ್ತರ ಇರುವ ಇತರ ಸದ್ದು ಣಗ ಳಿಂದ ಆಗಿರುತ್ತೇವೆಂದು ತಿಳಿಯುತ್ತಾರೆ; ಆದರೆ ವಿಲಕ್ಷಣವಾದ ಕಾಲಚಕ್ರದಿಂದ ಸಂಪತ್ತು ಮಣ್ಣು ಪಾಲಾಯಿತೆಂದರೆ ಆ ಕೂಡಲೆ ಅವರ ಕಣ್ಣುಗಳು ತೆರೆಯುತ್ತವೆ. ಆಗ ತೋರುವ ಸದ್ದು ಣದ ಬರೇ ಚೀಲವನ್ನು ನೋಡಿ ಅವರಿಗೆ ಬಹಳ ಅನುತಾಪವಾ ಗುತ್ತದೆ. ಈ ಸ್ಥಿತಿಯೇ ಆ ವೇಳೆಯಲ್ಲಿ ಚಿಂತಾಮಣಿರಾಯ ರಾಮರಾಯರಿಗೆ ಪ್ರಾಪ್ತ ವಾಗಿದ್ದಿತು, ನಮ್ಮ ಹತ್ತರ ಇಷ್ಟು ದುಡ್ಡಿದ್ದು ನಾವು ಅದರಿಂದ ಜಗತ್ತಿಗೆ ಏನು ಉಪ ಕಾರ ಮಾಡಿದೆವು, ಎಂಬ ಪ್ರಶ್ನ ವು ಅವರ ಹೃದಯದಲ್ಲಿ ಹರಿದಾಡಹತ್ತಿತು. ನೀವು ನಿಮ್ಮ ದುಡ್ಡನ್ನು ಸದುದ್ಯೋಗದಲ್ಲಿ ಖರ್ಚುಮಾಡದೆ, ಕೇವಲ ಜನರಿಗೆ ವೈಭವವನ್ನು ತೋರಿಸುವದಕ್ಕೋಸ್ಕರ ಖರ್ಚು ಮಾಡಿದಿರೆಂದು ಅವರ ಮನೋದೇವತೆಯು ಹೇಳಿದ ಕೂಡಲೆ ಅವರಿಗೆ ವಿಶೇಷ ಹಳಹಳಿಯಾಯಿತು. ಮಧುರೆಯ ಮುಖ್ಯ ದೇವತೆಯೆಂದರೆ ಧನದೇವತೆಯೇ ಆಗಿದ್ದಳು. ಇಂದು ಇಂಥ ಶೀರೆಯನ್ನು ಉಡಬೇಕು, ನಾಳೆ ಇಂಥ ಆಭರಣವನ್ನಿಟ್ಟು ಕೊಳ್ಳಬೇಕು, ನಾಡದು ಊರೊಳಗಿನ ದೊಡ್ಡ ದೊಡ್ಡ ಸ್ತ್ರೀಯ ರಿಗೆ ಚಹಾದ ಆಮಂತ್ರಣ ಹೇಳಬೇಕು; ಎಂಬುವದೇ ಅವಳ ಕರ್ತವ್ಯಕರ್ಮವಾಗಿ ದ್ವಿತು. ಇಂಥ ಮಧುರೆಗೆ ಬ್ಯಾಂಕು ಮುಳುಗಿದ ಸುದ್ದಿಯನ್ನು ಕೇಳಿ ಕಲ್ಪನಾತೀತ ವಾದ ದುಃಖವಾಗುವದು ಅರಿದಲ್ಲ ! ಮೂವರೂ ಗತಧೈರ್ಯರಾಗಿ ಕಣ್ಣೀರು ಸುರಿ ಸುತ್ತಿದ್ದರು, ಆದರೆ ನನ್ನ ದಿವ್ಯಸುಂದರಿಯು ಶಾಂತವಾಗಿ ಕುಳಿತಿದ್ದಳು. ತಂದೆಯ ಪ್ರಕೃತಿಯ ಮೇಲೆಯಾದ ಪರಿಣಾಮದಿಂದ ಮಾತ್ರ ಅವಳು ದುಃಖಿತಳಾಗಿದ್ದಳು. 13