ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೆಯ ಪ್ರಕರಣ-ಡೀ ಕಾವು ರ್ಸ ಬ್ಯಾಂಕ ಆಫ ಇಂಡಿಯಾ ! ” *r ವಾಯಿತು. ಈ ಮುಳುಗಿದ ಬ್ಯಾಂಕಿನಲ್ಲಿಯೇ ವಿನಾಯಕನು ವರ್ತಕರ ಇಪ್ಪತ್ತೊಂದು ಸಾವಿರ ರೂಪಾಯಿಗಳನ್ನು ಇಟ್ಟಿದ್ದನೆಂಬುವದು ವಾಚಕರು ಮರೆತಿರಲಿಕ್ಕಿಲ್ಲ. ಅದ ಕ್ಯಾಗಿ ಅವನೂ ಮನಸ್ಸಿನಲ್ಲಿ ಚಿಂತೆಮಾಡಹತ್ತಿದನು, ಮಾಧವರಾಯನ ಮಾತಿಗೆ ಚಿಂತಾಮಣಿರಾಯನು:- ಮಾಧವರಾಯ, ಮಿಂಚಿಸಿದ್ದಕ್ಕೆ ಚಿಂತಿಸಿ ಫಲವಿಲ್ಲ. ಈ ಬಗ್ಗೆ ಮುಂದೇನಾದರೂ ಪ್ರಯತ್ನ ಮಾಡಲಿಕ್ಕೆ ಬೇಕು. ನೀವು ಈ ಸಂಗತಿಯನ್ನು ಹೋಲೀಸರಿಗೆ ತಿಳಿಸಿರುವಿರೇನು? ” ಎಂದನ್ನಲು ಮಾಧವರಾಯನು (( ಇಲ್ಲ. ಪೋಲೀ ಸರೇ ಈ ಸುದ್ದಿಯನ್ನು ನನಗೆ ಹೇಳಿರುವರು, ನಿನ್ನೆ ರಾತ್ರಿ ಎಂಟು ಹೊಡೆಯುವ ಸುಮಾರಕ್ಕೆ ನನ್ನ ಪರಿಚಯದ ಇನಸ್ಪೆಕ್ಟರನು ನನ್ನ ಬಳಿಗೆ ಬಂದು ' ಮೂವರೂ ತಪ್ಪಿಸಿಕೊಂಡು ಹೋಗಿರುತ್ತಾರೆ, ಅವರು ಇರುವ ಸ್ಥಳವು ಗೊತ್ತಾಗಿಲ್ಲ.' ಎಂಬ ದಾಗಿ ಹೇಳಿದನು, ಆ ಮೂವರು ಒಬ್ಬ ಪೋಲೀಸನಿಗೆ ಚನ್ನಾಗಿ ವಂಚಿಸಿದ್ದರಿಂದ, ಪೋಲೀಸರು ಅವರ ಶೋಧಕ್ಕಾಗಿ ಬಹು ಪ್ರಯತ್ನ ಬಡುತ್ತಾರೆ. ಆ ಮೂವರ ಇರು ವಿಕೆಯು ಗೊತ್ತಾಗದ್ದರಿಂದ ಪೋಲೀಸರು ಮೊದಲು ಬ್ಯಾಂಕನ್ನು ತಮ್ಮ ಸ್ವಾಧೀನ ತಕ್ಕೊಂಡರು. ಆದರೆ ಬ್ಯಾಂಕಿನೊಳಗಿನ ತಿಜೋರಿಯು ಬರಿದಿದ್ದು ಮಹತ್ವದ ಕಾಗದ ಪತ್ರಗಳೂ ಇರುವದಿಲ್ಲ, ಡಿರೆಕ್ಟರರಲ್ಲಿ ಪ್ರಸಿದ್ದ ಶ್ರೀಮಂತ ಗಿರಧರಲಾಲ, ರಾಮಲಾಲ ಎಂಬೀರ್ವರು ಕೂಡಲೆ ಮಾನಚ್ಯುತಿಯಾಗಬಾರದೆಂದು ಆತ್ಮಹತ್ಯೆ ಮಾಡಿಕೊಂಡರಾಗಿ ವಾರ್ತೆಯದೆ. ಡಿರೆಕ್ಟರರ ಸ್ವಂತ ದುಡ್ಡು ಹೋದರೂ ಹೋಗಲಿ, ಎರಡನೆಯವರ ಹಣದ ಜವಾಬದಾರಿಯೂ ಅವರ ತಲೆಯ ಮೇಲೆ ಬಿದ್ದದೆ. ” ಎಂದನ್ನಲು ಚಿಂತಾ ಮಣಿರಾಯನು (( ಹೌದು ಮಾಧವರಾಯ, ನಾನು ಇದೇ ಚಿಂತೆಯಿಂದಲೇ ಹೀಗೆ ತ್ರಸ್ತನಾಗಿದ್ದೇನೆ. ಸ್ವಂತ ಧನವು ಹೋದರೂ ಹೋಗಲಿ, ಆದರೆ ಎರಡನೆಯವರ ಧನವನ್ನು ಎಲ್ಲಿಂದ ಕೊಡಬೇಕೆಂಬುವದೇ ನನಗೆ ಪರಮ ಚಿಂತೆಯಾಗಿದೆ. ಹೆಚ್ಚು ಬಡ್ಡಿಯ ಆಶೆಯಿಂದ ನಾನು ನನ್ನ ಸರ್ವಸಂಪತ್ತನ್ನು ಈ ಬ್ಯಾಂಕಿನಲ್ಲಿ ಇಟ್ಟಿದ್ದೆನು. " ಎಂದನ್ನುತ್ತ ಒಂದು ದೊಡ್ಡ ಶ್ವಾಸವನ್ನು ಬಿಟ್ಟು ಕುಳಿತ ಬಾಕಿನ ಮೇಲೆ ಹಾಗೇ ಅಡ್ಡಬಿದ್ದನು. ಡಾಕ್ಟರನು ತಿರುಗಿ ಅವನಿಗೆ ನಿದ್ರೆ ಬರುವಂತೆ ಮಾಡಿದನು. ಅವನಿಗೆ ನಿದ್ರೆ ಹತ್ತಿದ ಕೂಡಲೆ ದಿವ್ಯಸುಂದರಿಯ ಹೊರ್ತು ಎಲ್ಲರೂ ದಿವಾಣಖಾನೆಯಿಂದ ಹೊರಬಿದ್ದರು. 5571