ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ನೆಯ ಪ್ರಕರಣ-ವಿವಾಹ 6: ///yyyy ಸರಿ, ” ಎಂದನ್ನಲು ರಾಮರಾಯನು:- ತಮ್ಮ ಯೋಗ್ಯತಾದೃಷ್ಟಿಯಿಂದ ನೋಡಿ ದರೆ ತಮಗೆ ಕೊಟ್ಟ ಬಕ್ಷೀಸು ತೀರ ಕಡಿಮೆ ತರಹದು. ಇರಲಿ, ತಾವು ಮೊದಲು ಫಲಾಹಾರ ಮೊದಲಾದದ್ದು ತೆಗೆದುಕೊಂಡು ಸ್ವಲ್ಪ ವಿಶ್ರಾಂತಿಯನ್ನು ತಕ್ಕೊಳ್ಳಿರಿ. ಆ ಮೇಲೆ ಬೇಕಾದಷ್ಟು ಹೊತ್ತು ಮಾತಾಡುತ್ತ ಕುಳಿತುಕೊಳ್ಳಿರಿ. ” ಎಂದಂದು ಅವನು | ಫಲಾಹಾರದ ಸಿದ್ದತೆಗಾಗಿ ದಿವ್ಯಸುಂದರಿ-ಮಧುರೆಯರನ್ನು ಕಳಿಸಿದನು. ಅವರು ಹೋದ ಕೆಲಹೊತ್ತಿನ ಮೇಲೆ ರಾಮರಾಯ -ವಿನಾಯಕರು ಹೋಗುವದಕ್ಕಾಗಿ ಎದ್ದರು. ಆಗ ಚಿಂತಾಮಣಿರಾಯನು ರಾಮರಾಯನನ್ನು ಉದ್ದೇಶಿಸಿ,:-' ರಾಮರಾಯ, ನೀನು ಇವರಿಗೆ ಫಲಾಹಾರಕ್ಕೆ ಕಳಿಸಿ ಕಾಗದ-ದೌತಿ-ಲೆಕ್ಕಣಿಕೆಗಳನ್ನು ತೆಗೆದುಕೊಂಡು ಬಾ, ನಾನು ಒಂದು ಪತ್ರ ಬರೆಯಬೇಕಾಗಿದೆ. ” ಎಂದನು. ಚಿಂತಾಮಣಿರಾಯನ ಮಾತಾಡಿದ್ದರ ಅರ್ಥವು ಕೂಡಲೆ ರಾಮರಾಯನಿಗೆ ತಿಳಿಯಿತು. ಆದದ್ದರಿಂದ ಅವನು ನಗುತ್ತ ವಿನಾಯಕನನ್ನು ಕರಕೊಂಡು ಹೋದನು. ವಿನಾಯಕನಿಗೆ ಮಾತ್ರ ರಾಮ ರಾಯನ ನಕ್ಕ ಕಾರಣವು ತಿಳಿಯಲಿಲ್ಲ. ವಿನಾಯಕನ ಆ ದಿವಸವು ಅಲ್ಲಿಯೇ ಕಳೆದು ಹೋಯಿತು. ದಿವ್ಯಸುಂದರಿಗೆ ಕಡೆಗೆ ಕ್ಷೇಮಸಮಾಚಾರವನ್ನಾದರೂ ಕೇಳಬೇಕೆಂದು ವಿನಾಯಕನು ಬಹು ಪ್ರಯತ್ನ ಮಾಡಿದನು. ಆದರೆ ಏನಿದ್ದಿತೋ ಏನೋ, ಚಿಂತಾಮ ೬ಣಿರಾಯನು ರಾಮರಾಯನ ಕಡೆಯಿಂದ ಪತ್ರ ಬರಿಸಿದ ಸಂಗತಿಯನ್ನು ಕೇಳಿದಾಗಿ ನಿಂದ ಅವಳು ವಿನಾಯಕನ ಎದುರಿಗೆ ಒಂದು ಕ್ಷಣ ಹೊತ್ತಾದರೂ ನಿಲ್ಲಲಿಲ್ಲ. ಮೊದಲು ಅವಳು ವಿನಾಯಕನೊಡನೆ ಎಷ್ಟೋ ಮಾತುಗಳನ್ನಾಡುತ್ತಿದ್ದಳು; ಆದರೆ ಈ ವೇಳೆ ಯಲ್ಲಿ ಅವಳು ವಿನಾಯಕನೊಡನೆ ಮಾತಾಡುವದೊತ್ತಟ್ಟಿಗಿರಲಿ, ವಿನಾಯಕನ ಕಡೆಗೆ ಹಣಿಕಿ ಹಾಕಿ ನೋಡಲಿಲ್ಲ. ಎರಡನೇ ದಿವಸ ವಿನಾಯಕನು ಚಹಾವನ್ನು ತಕ್ಕೊಂಡು ಅನಂತರ ಊರಿಗೆ ಹೋಗುವ ಮಾತನ್ನು ತೆಗೆದನು; ಆದರೆ ಅವನಿಗೆ ರಾಮರಾಯನು ಹೋಗಲಿಕ್ಕೆ ಸಮ್ಮತಿಯನ್ನು ಕೊಡಲಿಲ್ಲ, ಇನ್ನೂ ೫-೬ ದಿವಸ ನಿಮಗೆ ಹೋಗಲಿಕ್ಕೆ ಮಾರ್ಗವಿಲ್ಲೆಂದು ಖಂಡಿತವಾಗಿ ಹೇಳಿದ್ದರಿಂದ ವಿನಾಯಕನು ನಿರುಪಾಯನಾಗಿ ಅಲ್ಲಿಯೇ ಇದ್ದನು. ಸುಮ್ಮನೆ ತಿರುಗಾಡುವದು ವಿನಾಯಕನಿಗೆ ಕಡುಹಗೆಯಂತೆ ಇದ್ದ ದ್ದರಿಂದ ಅವನು ಆ ಹಳ್ಳಿಯೊಳಗಿನ ಒಕ್ಕಲಿಗರ ಗುರ್ತುಮಾಡಿಕೊಂಡನು, ಮತ್ತು ಅವರ ಹೊಲದೊಳಗಿನ ಮಣ್ಣು ಶೋಧಿಸಿ ಇಂಥಿಂಥ ಭೂಮಿಯಲ್ಲಿ ಇಂಥಿಂಥ ಪೈರು ಬೆಳೆಯಬೇಕೆಂದು ತಿಳಿಸಿಕೊಟ್ಟನು. ಅವನು ಇದಕ್ಕಾಗಿ ದಿನಾ ಹೊಲಕ್ಕೆ ಹೋಗಿ ಸಾಯಂಕಾಲಕ್ಕೆ ವಾಡೆಗೆ ಬರುತ್ತಿದ್ದನು, ಅವನು ಒಂದು ದಿವಸ ವಾಡೆಯಲ್ಲಿ ಪ್ರವೇ ಶಿಸುವಾಗ, ಅದೇ ವಾಡೆಯೊಳಗಿಂದ ಹೊರಬಿದ್ದ ಕೃಷ್ಣರಾಯನನ್ನು ನೋಡಿದನು. ಅಣ್ಣನಾದ ಕೃಷ್ಣರಾಯನನ್ನು ನೋಡಿದ ಕೂಡಲೆ ಅವನಿಗೆ ಆನಂದವಾದಷ್ಟು ಆತ್ಮ ರ್ಯವೂ ಆಯಿತು. ಅವನು ಅಣ್ಣನ ತೀರ ಸಮೀಪಕ್ಕೆ ಹೋಗಿ ಸಸ್ಮಿ ತಸ್ವರದಿಂದ:- ( ಅಣ್ಣಾ, ಇದೇನು ನೀವು ಇತ್ತ ಬಂದಿರಿ ? ಅಂಥ ಮಹತ್ವದ ಕಾರಣವಿಲ್ಲವ ? ? 14