ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆmmmmmmmmve - ಆನೆಯ ಪ್ರಕರಣ-ವಸಂತನ ಕಾರಸ್ಥಾನ. . ಲದ ಮುತ್ತಿನ ಸರಪಳಿಯು ಕಳವಿನಿಂದ ಹೋಯಿತೆಂದು ನಿರ್ಧರವಾಗಿರುವುದಕ್ಕೆ?:: ವಾಸ್ತವಿಕ ಅದನ್ನು ನಾನೇ ಕದ್ದು ವಸಂತರಾಯರಿಗೆ ಬಕ್ಷೀಸು ಕೊಟ್ಟಿದ್ದನು, ಅವರು ಅದನ್ನು ಸ್ವಲ್ಪ ದಿವಸಗಳ ಪೂರ್ವದಲ್ಲಿ ತಿರುಗಿ ನನ್ನ ಕೈಯಲ್ಲಿ ಕೊಟ್ಟಿದ್ದರು, ಅದನ್ನೂ ಬರುವಾಗ ಗಾದಿಯ ಕೆಳಗೆ ಇಟ್ಟು ಬಂದಿರುತ್ತೇನೆ. ಉಳಿದ ರೂಪಾಯಿಗಳ ಸಲು ವಾಗಿ ಇನ್ನೂ ನೀವು ಪೋಲೀಸರ ಮುಖಾಂತರ ಚೌಕಸಿ ಮಾಡುತ್ತಿರುವಿರಿ; ಈನಂತರ ಹಾಗೆ ಮಾಡಬಾರದು; ಯಾಕಂದರೆ ಆ ರಕಮಿನ ಅಪಹಾರಕ್ಕ ವಸಂತರಾಯರಿಗಿಂತ ನಾನೇ ಹೆಚ್ಚು ಜವಾಬದಾರಳಾಗಿದ್ದೇನೆ, ನೀನು ಸಣ್ಣ ಮಗುವನ್ನು ಬಿಟ್ಟು ಹೇಗೆ ಹೋದೀ ಎಂದು ನೀವು ನನಗೆ ಅಂದೀರಿ; ಆದರೆ ಆ ಸಂಪತ್ತು ವಿನಾಯಕನದಾದದ್ದ ರಿಂದ ಅವನಿಗೆ ಅದನ್ನು ಕೊಡಿರಿ, ಹೆಚ್ಚಿಗೆ ಏನು ಬರೆಯುವದು! ಇದೇ ನನ್ನ ಕಡೆಯ ಪತ್ರವು. ( ತಮ್ಮ ಭಗಿನೀ-ದಿವ್ಯಸುಂದರಿ. " ಮೇಲಿನ ಪತ್ರದಿಂದ ರಾಮರಾಯ-ಮಧುರೆಯರಿಗೇ ಗೊಂದಲದಿದ್ದ ಮೇಲೆ ದಿವ್ಯಸುಂದರಿಯ ಅಕ್ಷರಗಳನ್ನು ಎಂದೂ ನೋಡದೆ ಇದ್ದಂಥ ವಾಚಕರು ವಿಶೇಷ ವಾಗಿ ಗೊಂದಲದಲ್ಲಿ ಬೀಳುವದು ಆಶ್ಚರ್ಯವಲ್ಲ ! ವಾಚಕರೇ, ಇಲ್ಲಿಯವರೆಗಿನ ದಿವ್ಯಸುಂದರಿಯ ಶುದ್ಧಾಚರಣೆಯನ್ನು ಕಣ್ಮುಟ್ಟಿ ನೋಡಿರುವ ನಿಮಗೆ : ಈ ಪತ್ರವು ದಿವ್ಯಸುಂದರಿಯದೇ ' ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ನೀವು ' ಅಲ್ಲ ' ಎಂದು ಹೇಳದೆ ಎಂದೂ ಇರಲಿಕ್ಕಿಲ್ಲ. ವಾಚಕಮಹನೀಯರೇ, ನಿಮ್ಮ ಅಭಿ ಪ್ರಾಯವು ನಿಜವಾಗಿದೆ. ಈ ಪತ್ರವೆಂದರೆ ವಸಂತನ ಕಾರಸ್ಥಾನ ! ಅವನು ಯಾವ ನೀಚರಲ್ಲಿ ಶಿಕ್ಷಣವನ್ನು ತಕ್ಕೊಳ್ಳುತ್ತಿದ್ದನೋ ಆ ನೀಚರು ಬೇಕಾದ ಅಕ್ಷರಗಳನ್ನು ತೋರಿಸಿದರೂ ತದ್ರೂಪ ಆ ಅಕ್ಷರಗಳಂತೆಯೇ ಬರೆಯುತ್ತಿದ್ದರು. ಇಂಥ ಚತುರ ಲೇಖಕರಿಗೆ ವಿನಾಯಕ-ದಿವ್ಯಸುಂದರಿಯರ ಅಕ್ಷರಗಳಂತೆ ಅಕ್ಷರಗಳನ್ನು ಬರೆಯಲಿಕ್ಕೆ ಏನು ಕಠಿಣವಾದೀತು ! ಅದು ಅವರ ಕೈಯೊಳಗೇ ಇದ್ದಿತು. ಈ ನೀಚರ ಪತ್ರ ದಿಂದ ಪಾಪ, ಆ ಸುಖದಾಂಪತ್ಯದ ಸರ್ವ ಚರಿತ್ರಸೃಷ್ಟಿಯು ಬದಲಾಗಿಹೋಯಿತು! ಈ ಪತ್ರದ ರಹಸ್ಯವನ್ನು ನಾವು ನಮ್ಮ ವಾಚಕರಿಗೆ ಹೇಳಿದ್ದಾಯಿತು, ಆದರೆ ಆ ರಹಸ್ಯವನ್ನು ರಾಮರಾಯನಿಗೆ ಯಾರು ಹೇಳಬೇಕು, ಅವನು ಆ ಎಲ್ಲ ಸಂಗತಿಯು ನಿಜವೆಂದು ಭಾವಿಸಿದನು, ಆ ಬಗ್ಗೆ ಅವನಿಗೆ ಸಾಕಷ್ಟು ಪುರಾವೆಗಳೂ ಸಿಕ್ಕವ ಪತ್ರವು ದಿವ್ಯಸುಂದರಿಯ ಕೈಯಿಂದ ಬರೆದದ್ದು; ಗಾದಿಯ ಕೆಳಗೆ ಎರಡುಲಕ್ಷ ರೂಪಾಯಿಯ ಪ್ರಾಮಿಶರೀ ನೋಟು ಸಿಕ್ಕವು; ತಂದೆಯ ಮುತ್ತಿನ ಸರಪಳಿಯು ಸಿಕ್ಕಿತು; ಒಬ್ಬ ರಿಗೊಬ್ಬರು ಕೊರಳಲ್ಲಿ ಕೈಹಾಕಿಕೊಂಡು ತೆಗಿಸಿದ ವಸಂತ ದಿವ್ಯಸುಂದರಿಯರ ಪೋಟೋವಂತೂ ಅವನ ಕೈಯೊಳಗೇ ಇದ್ದಿತು ! ಇದಕ್ಕಿಂತ ಹೆಚ್ಚಿನ ಪುರಾವೆಗಳು ಏನು ಬೇಕು ? ಇಷ್ಟು ಪುರಾವೆಗಳನ್ನು ಚತುರ ನ್ಯಾಯಾಧೀಶನ ಮುಂದಿಟ್ಟರೆ ಅವನು