ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

R ಆ ತ್ಮನಿವೇದನೆ. ಆp talw ಕರ್ನಾಟಕ ಭಾಷಾಭಿಮಾನಿಗಳೇ! ಮೊದಲೆ ಕರ್ನಾಟಕ ವಾಙ್ಕಯದಲ್ಲಿ ನೀತಿಪರ ಕಥಾ-ಕಾದಂಬರಿಗಳು ಸಾಕಷ್ಟು ಇಲ್ಲ. ಅದರಲ್ಲಿಯೂ ಸದ್ಯದ ಸಮಾಜಸ್ಥಿತಿಯನ್ನೂ, ಸದ್ಯದ ಪರಿಸ್ಥಿತಿಯಿಂದ ಹಿಂದೂ ಧರ್ಮವೂ, ಹಿಂದುಸ್ತಾನವೂ ಹೇಗೆ ಅಧಃಪತನವಾಗಹತ್ತಿರುತ್ತವೆಂಬುವದನ್ನೂ ವಿಸ್ತಾರವಾಗಿ ವರ್ಣಿಸಿರುವಂಥ ಉಪದೇಶಪರ ಸಾಮಾಜಿಕ ಕಾದಂಬರಿಗಳಂತೂ ಇಲ್ಲೇ ಇಲ್ಲ. ಇದಕ್ಕಾಗಿಯೇ ನಾನು ಸಾಮಾಜಿಕ ಕಾದಂಬರಿಗಳನ್ನು ಬರೆಯಲಿಕ್ಕೆ ಯತ್ನಿಸಿ, ಈ ಮೊದಲು CC ವೇಣ ಅಥವಾ ದುಷ್ಟ ಸಮಾಜ ” ಎಂಬ ಕಾದಂಬರಿಯನ್ನು ಬರೆದು ಮುದ್ರಿಸಿ ಪ್ರಸಿದ್ಧ ಮಾಡಿರುವೆನು. ಸ್ವಲ್ಪಾವಧಿಯಲ್ಲಿಯೇ ಅದರ ಅನಂತಪ್ರತಿಗಳು ಖರ್ಚಾದದ್ದರ ಮೇಲಿಂದ ಅದು ಭಾಷಾಭಿಮಾನಿಗಳಾದ ಕನ್ನಡಿಗರ ಆದರಕ್ಕೆ ಪಾತ್ರವಾಯಿತೆಂದು ಊಹಿಸಬಹುದಾಗಿದೆ. ಇನ್ನು ಈಗ ಬರೆದು ತಮ್ಮ ಕರಕಮಲವನ್ನು ಅಲಂಕರಿಸಿರುವ ಈ CC ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ » ವೆಂಬ ಕಾದಂಬರಿಯಾದ ರೂ ಅತ್ಯಂತ ಉಪಯುಕ್ತ ಸಾಮಾಜಿಕ ಕಾದಂಬರಿಯಾಗಿದೆ. ಇದು, ಮನಸ್ಸನು ಚಂಚಲಗೊಳಿಸಿ, ಅನೀತಿಗೆ ಮಾರ್ಗಮಾಡಿಕೊಡುವ ಶೃಂಗಾರರಸದಿಂದ ತುಂಬಿ ತುಳುಕುವ ಶೃಂಗಾರಕಾದಂಬರಿಯಲ್ಲ. ಜನರ ಮನಸ್ಸಿನೊಳಗಿನ ದುರ್ಭಾವನೆಗಳನ್ನು ಹೋಗಲಾಡಿಸಿ, ಸದ್ದಾವನೆಗಳನ್ನು ಪ್ರಸ್ಥಾಪಿಸುವ ಬೋಧಪರ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ನಾಯಕನಾಗಿರುವ ವಿನಾಯಕನು ಎಮ್. ಎ. ಪರೀಕ್ಷೆ ಪಾಸಾದವನು. ಮೇಲಾಗಿ ಬಡವನು. ಆದರೂ ಈಗಿನ ಉಚ್ಚತರದ ಶಿಕ್ಷಣ ಹೊಂದಿದವರಂತೆ ನವಕರಿಯೇ ತನ್ನ ಕರ್ತವ್ಯಕರ್ಮವೆಂದು ತಿಳಿಯದೆ, ಘನವಾದ ಸ್ವತಂತ್ರೋದ್ಯೋಗವನ್ನು ಕೈಕೊಂಡು, ದೀರ್ಘ ಪ್ರಯತ್ನದಿಂದ ಹಿಂದುಸ್ತಾನದ ಖನಿಜ ಸಂಪತ್ತನ್ನು ಜೈಲಿಗೆಳೆದು ಅಲೌಕಿಕ ಕೀರ್ತಿ ಶಾಲಿಯಾದದ್ದು ಓದಿದರೆ ಎಂಥ ಸೋಮಾರಿಗೂ ಕೂಡ ಆವೇಶ ಬರುವಂತಿದೆ.