ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೭ ಆನೆಯ ಪ್ರಕರಣ-ವಸಂತನ ಕಾರಸ್ಥಾನ MMonMowwom ನಾಲ್ಕು ದಿವಸಗಳು ಕಳೆದವು. ಅನಂತರ ಹೀಗೆ ಸ್ವಸ್ಥ ಕೂಡ್ರುವದು ವಿಹಿತವಲ್ಲೆಂದು ಆಲೋಚಿಸಿ, ಅವನು ವಿನಾಯಕ-ಕೃಷ್ಣರಾಯರಿಗೆ ಈ ವರ್ತಮಾನವನ್ನು ತಿಳಿಸ ಬೇಕೆಂದು ಯೋಚಿಸಿದನು. ಮೊದಲು ಅವನು ಇಬ್ಬರಿಗೂ ಪತ್ರಮುಖಾಂತರ ಈ ವಾರ್ತೆಯನ್ನು ತಿಳಿಸಬೇಕೆಂದು ನಿಶ್ಚಯಿಸಿದನು; ಆದರೆ ಹಾಗೆ ಮಾಡಿದರೆ ಈ ಮಾತು ವಿಶೇಷ ಬೈಲಿಗೆ ಬೀಳುವದೆಂಬ ವಿಚಾರವು ಬರಲು ಅವನು ಆ ಇಬ್ಬರಿಗೆ ಕೂಡಲೆ ಕಿಸನಗಡಕ್ಕೆ ಬರಬೇಕೆಂದು ಪತ್ರ ಬರೆದನು, ಪತ್ರವು ಹೋದಕಾಲಕ್ಕೆ ಕೃಷ್ಣರಾ ಯನು ಯಮುನೆಯೊಡನೆ ಎರಡನೇ ಗ್ರಾಮಕ್ಕೆ ಹೋಗಿದ್ದುದರಿಂದ ಅವನಿಗೆ ರಾಮ ರಾಯನ ಪತ್ರವು ನಾಲ್ಕು ದಿವಸ ತಡವಾಗಿ ಮುಟ್ಟಿತು. ವಿನಾಯಕನಿಗೆ ಮಾತ್ರ ಪತ್ರವು ವೇಳೆಗೆ ಮುಟ್ಟಿದ್ದರಿಂದ ಅವನು ಕೂಡಲೆ ಕಿಸನಗಡಕ್ಕೆ ಹೊರಟುಬಂದನು. ರಾಮರಾಯನು ಒಳ್ಳೆ ಕಷ್ಟದಿಂದ ವಿನಾಯಕನಿಗೆ ಆ ಎಲ್ಲ ಸಂಗತಿಯನ್ನು ಹೇಳಿ ದನು, ಮತ್ತು ದಿವ್ಯಸುಂದರಿಯ ಪೋಟೋ ಸಹಿತವಾಗಿದ್ದ ಪತ್ರವನ್ನೂ ಅವನಿಗೆ ನೋಡುವದಕ್ಕಾಗಿ ಕೊಟ್ಟನು. ಆ ಪತ್ರವನ್ನು ಓದಿ, ರಾಮರಾಯನು ಹೇಳಿದ ವಾರ್ತೆಯನ್ನು ಕೇಳಿ ವಿನಾಯಕನ ಮಸ್ತಕದ ಮೇಲೆ ವಜ್ರಾಪಾತವಾದಂತಾಯಿತು. ಈ ವೇಳೆಯಲ್ಲಿ ಮೃತ್ಯುವು ಬಂದು ತನ್ನನ್ನು ಈ ಜಗತ್ತಿನಿಂದ ಮುಕ್ತ ಮಾಡಿದರೆ ಒಳ್ಳೆ ದಾಗುವದೆಂದು ಅವನು ನೆನಿಸಿದನು, ಎಲ್ಲಿ ಅತ್ಯಂತ ಪ್ರೇಮವಿರುತ್ತದೆಯೋ ಅಲ್ಲಿಯೇ ಪಾಪಮಯ ಶಂಕೆಯೂ ಇರುತ್ತದೆಂದು ಹಿರಿಯರು ಹೇಳುವದು ಸುಳ್ಳಲ್ಲ. ಆ ಪತ್ರದ ಮೇಲೆ ವಿಶ್ವಾಸವಿಡಬೇಕಾಗಿಯೇ ವಿನಾ ಯಕನಿಗೆ ತೋರಹತ್ತಿತು, ಮತ್ತು ಆ ದೃಷ್ಟಿಯಿಂದಲೇ ಅವನು ದಿವ್ಯಸುಂದರಿಯ ಹಿಂದಿನ ಆಚರಣೆಯ ಬಗ್ಗೆ ವಿಚಾರಮಾಡಹತ್ತಿದ ಕೂಡಲೆ ಅವನಿಗೆ ಪ್ರತಿಯೊಂದು ಮಾತಿನಲ್ಲಿ ವಸಂತ-ದಿವ್ಯಸುಂದರಿಯರ ಪ್ರೇಮವು ಸ್ಪಷ್ಟವಾಗಿ ಕಾಣಿಸಹತ್ತಿತು. ಈ ವಿಚಾರದಿಂದ ವಿನಾಯಕನ ಸ್ಥಿತಿಯು ಹುಚ್ಚನಂತಾಯಿತು; ಆದರೂ ಅವನು ಅದನ್ನು ತನ್ನ ಮನಸ್ಸಿನಿಂದಲೇ ದೂರೀಕರಿಸಿ, ರಾಮರಾಯನ ನಿರೋಪವನ್ನು ತಕ್ಕೊಂಡು ತಿರುಗಿ ತನ್ನ ಕಾರಖಾನೆಗೆ ಹೊರಟುಹೋದನು. ಕಾರಖಾನೆಗೆ ಹೋದ ಮೇಲೆ ನಾನ್ನೈದು ದಿವಸ ಅವನ ಮನಸ್ಸಿನ ಸ್ಥಿತಿಯು ಚಮತ್ಕಾರಿಕವಾಯಿತು; ಆದರೆ ಮೆಲ್ಲಮೆಲ್ಲನೆ ಅವನು ಮನದಿಂದ ಸರ್ವ ವಿಚಾರವನ್ನು ತೆಗೆದುಹಾಕಿ, ಪುನಃ ತನ್ನ ಸರ್ವ ಮನೋವ್ಯಾಪಾರಗಳನ್ನು ಕಾರಖಾನೆಯ ಕಡೆಗೆ ಹಚ್ಚಿದನು. ಅವನ ಮನೋನಿಗ್ರಹವು ಬೆಳೆಯುತ್ತ ಬೆಳೆಯುತ್ತ ಹೋದಂತೆ ಕಡೆಗೆ ಅವನು ಇನ್ನು ಮುಂದೆ ಸ್ತ್ರೀಯರ ಮುಖವನ್ನೇ ನೋಡಬಾರದೆಂದು ನಿಶ್ಚಯಮಾಡಿದನು. ಮೊದಲೇ ಕಾರ ಖಾನೆಯಲ್ಲಿ ಸ್ತ್ರೀಯರು ಯಾರೂ ನವಕರಿಗಿದ್ದಿಲ್ಲ; ಆದರೂ ಈ ಮುಂದೆ ಸ್ತ್ರೀಯರನ್ನು ನವಕರಿಗೆ ತಕ್ಕೊಳ್ಳಬಾರದು, ಸ್ತ್ರೀಸಮೇತವಾಗಿ ಯಾರೂ ಕಾರಖಾನೆಯಲ್ಲಿ ಇರ ಭಾರದು, ಎಂಬದಾಗಿ ಅವನು ನಿಯಮ ಮಾಡಿದನು. ಕಾರಖಾನೆಯ ಕೆಲಸವು