ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ- ವಸಂತನ ಕಾರಸ್ಥಾನ. ೧೨! ನೀANo••••••••••••MMwwwmv ಕೂಡಲೆ ಕಲ್ಪನೆಯಲ್ಲಿ ಇಲ್ಲದ ಬೇರೊಬ್ಬ ಭಯಂಕರ ಮನುಷ್ಯನು ಎದುರಿಗೆ ಕಾಣಿಸಿ ದ್ದರಿಂದ ಅವಳು ಗದಗದ ನಡುಗಿದಳು. ಅವಳ ಕಣ್ಣಿನ ಮುಂದೆ ಕತ್ತಲೆಯು ಕಾಣಿ ಸಿತು, ಅವಳು ಭೀತಿವಿಹ್ವಲಳಾಗಿ ಹಿಂದಕ್ಕೆ ಸರಿದ ಕೂಡಲೆ ಸಾಹೇಬಪೋಷಾಕಿನ ವಸಂತಮೂರ್ತಿಯು ದಿವಾಣಖಾನೆಯಲ್ಲಿ ಬಂದಿತು. ಅವನು ಬಂದು ನಗುತ್ತ:- < ಯಾಕೆ ದಿವ್ಯಸುಂದರಿ, ನನ್ನನ್ನು ನೋಡಿ ಇಷ್ಟೇಕೆ ಹೆದರುವದು? ನನ್ನ ಗುರ್ತು ಹತ್ತಲಿಲ್ಲವೇ ? ನೀನು ಈಗ ವಸಂತನ ಅರ್ಧಾಂಗಿಯಲ್ಲವೇ ? ಅಥವಾ ವಸಂತನ ಯಜಮಾರ್ನಿಣಿಯಲ್ಲವೇ? ಆ ದರಿದ್ರ ವಿನಾಯಕನ ಕಾರಖಾನೆಯಿಂದ ಬಿಡುಗಡೆ ಯಾಗಿ ನನ್ನ ಪದರಿನಲ್ಲಿ ಬಿದ್ದದ್ದಕ್ಕೆ ನೀನು ಸಂತೋಷಸಾಗರದಲ್ಲಿ ಮುಳುಗಿರುವಿ ಯಷ್ಟೆ? " ಎಂದಂದನು. ವಸಂತನ ಈ ವಿಷಾರೀ ಶಬ್ದವನ್ನು ಕೇಳಿ ದಿವ್ಯಸುಂದ ರಿಯ ಅಂತಃಕರಣವು ಜರ್ಝರವಾಯಿತು. ಅವಳಿಗೆ ಈಗ ತನ್ನ ಪರಿಸ್ಥಿತಿಯ ಬಗ್ಗೆ ಚನ್ನಾಗಿ ಮನವರಿಕೆಯಾಯಿತು. ತಾನು ಸುವಿಚಾರಮಾಡದೆ ಮುದುಕನ ಸಂಗಡ ಬಂದದ್ದಕ್ಕಾಗಿ ತನ್ನ ಮೇಲೆ ತಾನೇ ಸಂತಾಪಗೊಂಡಳು. ಈ ಪ್ರಕಾರ ದಿವ್ಯಸುಂದ ರಿಯು ಮನದಲ್ಲಿ ಖೇದಗೊಳ್ಳುತ್ತ ನಿಂತಿರಲು ವಸಂತನು ಪುನಃ:-( ದಿವ್ಯಸುಂದರಿ, ಪೂರ್ವದ ಸಂಗತಿಯು ನಿನ್ನ ಧ್ಯಾನದಲ್ಲಿರುವದೇ ? ಆ ವೇಳೆಯಲ್ಲಿ ನೀನು ನಿಜವಾಗಿ ನನ್ನಲ್ಲಿಯೇ ಆಸಕ್ತಳಾಗಿದ್ದೆ. ನಿನ್ನ ತಂದೆಯ ಮನಸ್ಸಿನಲ್ಲಿ ನನ್ನೊಡನೆಯೇ ನಿನ್ನ ಲಗ್ನ ಮಾಡಿಕೊಡಬೇಕೆಂಬುವದಿದ್ದಿತು. ಆದರೆ ವಿನಾಯಕನು ನಿಮ್ಮ ತಂದೆಗೆ ಬ್ಯಾಂಕಿ ನಲ್ಲಿ ಮುಳುಗಿದ ದುಡ್ಡನ್ನೆಲ್ಲ ಪುನಃ ದೊರಕಿಸಿಕೊಟ್ಟಿದ್ದರಿಂದ, ನಿರ್ವಾಹವಿಲ್ಲದೆ ಪ್ರತ್ಯುಪಕಾರವೆಂದು ನಿಮ್ಮ ತಂದೆಯು ವಿನಾಯಕನೊಡನೆ ನಿನ್ನ ಲಗ್ನ ಮಾಡಿಕೊ ಟ್ವೆನು; ಆದರೆ ಅದೇನೂ ನಿಜವಾದ ಲಗ್ನ ವಲ್ಲ. ಅದು ಕೇವಲ ಕನ್ಯಾವಿಕ್ರಯವಾ ಗಿದೆ. ಈ ಸಂಬಂಧವಾಗಿ ವಿನಾಯಕನಿಗೆ ಯೋಗ್ಯ ದಂಡನೆಯನ್ನು ಮಾಡಬೇಕೆಂದು ನಿಶ್ಚಯಿಸಿದ ಪ್ರಕಾರ ಈಗ ಯೋಗ್ಯ ದಂಡನೆಯನ್ನು ಮಾಡಿರುವೆನು, ವಿನಾಯಕನಿಗೆ ಆದ ಶಿಕ್ಷೆಯ ಸಲುವಾಗಿ ನಿನಗೆ ಪರಮಾನಂದವಾಗಿರಬಹುದೆಂದು ನನ್ನ ತಿಳುವಳಿಕೆ ಯದೆ. ” ಎಂದನು. ಇದಕ್ಕೂ ದಿವ್ಯಸುಂದರಿಯು ಏನೂ ಮಾತಾಡಲಿಲ್ಲ. ಅವಳ ಮನಸ್ಸಿನಲ್ಲಿ ಬೇರೆ ವಿಕಾರವು ಉತ್ಪನ್ನವಾಯಿತು, ಅವಳು ಮೊದಲು ಭೀತಿಯಿಂದ ವ್ಯಾಕುಲೆಯಾದಳು; ನಂತರ ವಿಲಕ್ಷಣ ಚಿಂತಾಗ್ನಿ ಯಿಂದ ಬೆಂದಳು; ಬರುಬರುತ್ತ ಅವಳ ಸಾತ್ವಿಕ ಕೋಪವು ಪ್ರಜ್ವಲಿತವಾಯಿತು; ಅವಳು ಕೆರಳಿದ ಹೆಣ್ಣು ಹುಲಿಯಂತೆ ವಸಂತನ ಮೇಲೆ ಕ್ರುದ್ಧಳಾದಳು, ಅವಳ ಬೆಂಕಿಯಂತೆ ಕೆಂಪಾದ ಕಣ್ಣುಗಳನ್ನೂ, ಥರಥರ ನಡುಗುವ ತುಟಿಗಳನ್ನೂ ನೋಡಿ ಕ್ಷಣಮಾತ್ರ ವಸಂತನೂ ಹೆದರಿಹೋದನು. ಅವಳು ಕೋಪದಿಂದ:- ವಸಂತ, ಸುಮ್ಮನೆ ಹೋಗು. ನನ್ನ ಸಂಬಂಧವಾಗಿಯೂ ನನ್ನ ಪತಿಯ ಸಂಬಂಧವಾಗಿಯೂ ಬಾಯಿಯಿಂದ ಒಂದು ಕೆಟ್ಟ ಶಬ್ದವು ಹೊರಟ ಪ್ಲಾದರೆ ಎಚ್ಚರಿಕೆ !?