ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ- ವಸಂತನ ಕಾರಸ್ಥಾನ. عفه ಹೀMMMMMMMAM೧೧೧೧೧೧೧೧೧೧೧೧೧೧೧೧೧೧೧೧೧೧೧೧೧MMMMMMMMMM ನಕ್ಕೆ ಬಂದು ರಾಜಮಹೇಂದ್ರಿಯ ಕಡೆಗೆ ಹೋಗತಕ್ಕ ಗಾಡಿಯ ಬಗ್ಗೆ ವಿಚಾರ ಮಾಡಹತ್ತಿದಳು, ಸ್ವಲ್ಪ ವೇಳೆಯ ಪೂರ್ವದಲ್ಲಿ ರಾಜಮಹೇಂದ್ರಿಯ ಕಡೆಗೆ ಹೋಗುವ ಗಾಡಿಯು ಹೋಯಿತೆಂತಲೂ, ಎರಡನೇ ಗಾಡಿಯು ಬೆಳಗಿನ ಐದುಗಂಟೆಗೆ ಹೋಗು ಇದೆಂತಲೂ ಸ್ಟೇಶನ್ನ ದಲ್ಲಿದ್ದ ಜನರು ಅವಳಿಗೆ ಹೇಳಿದರು, ಆಗ ಅವಳಿಗೆ ಬಹು ಚಿಂತೆಯಾಯಿತು. ಬೆಳಗಿನ ಐದು ಹೊಡೆಯುವತನಕ ಸ್ಟೇಶನ್ನ ದಲ್ಲಿದ್ದರೆ ಮತ್ತೇನು ಹೊಸ ಸಂಕಟವು ಪ್ರಾಪ್ತವಾಗುವದೋ ಏನೋ ಎಂದು ಅವಳಿಗೆ ಭೀತಿಯಾಯಿತು. ಹೀಗೆ ವಿಚಾರಮಾಡುತ್ತ ಅವಳು ಒಂದು ಬಾಕಿನ ಮೇಲೆ ಕುಳಿತಳು. ಅದೇ ಬಾಕಿನ ಮೇಲೆ ಒಬ್ಬ ಯುರೋಪಿಯನ್ ಸ್ತ್ರೀಯು ಕುಳಿತಿದ್ದಳು. ಕೆಲಹೊತ್ತಿನ ಮೇಲೆ ಅವಳ ಹತ್ತರ ಒಬ್ಬ ಯುರೋಪಿಯನ್ ಗೃಹಸ್ಥನು ಬರಲು ಅವರಿಬ್ಬರೂ ಇಂಗ್ಲೀಷಿನಿಂದ ಮಾತಾಡಹತ್ತಿದರು. ದಿವ್ಯಸುಂದರಿಗೆ ಇಂಗ್ಲೀಷು ಚನ್ನಾಗಿ ಬರುತ್ತಿದ್ದುದರಿಂದ, ಅವ ರಿಬ್ಬರೂ ಬೋಟಿನಿಂದ ರಾಜಮಹೇಂದ್ರಿಗೆ ಹೋಗುತ್ತಾರೆಂಬುವದು ಅವಳಿಗೆ ತಿಳಿ ಯಿತು. ಆ ಕೂಡಲೆ ಅವಳು ಮಡಂಸಾಹೇಬರ ಹತ್ತಿರ ಹೋಗಿ, ಇಂಗ್ರೇಜೀ ಪದ್ಧತಿಯಂತೆ ನಮಸ್ಕಾರಮಾಡಿ:- ನಾನೂ ರಾಜಮಹೇಂದ್ರಿಗೆ ಹೋಗಬೇಕು. ನಾನು ಬರುವದರೊಳಗೆ ಗಾಡಿಯು ಹೋಗಿದ್ದಿತು. ಇನ್ನು ಮತ್ತೊಂದು ಗಾಡಿಗೆ ಹೋಗಬೇಕೆಂದರೆ ಬೆಳಗಿನ ಐದು ಹೊಡೆಯುವ ತನಕ ಇಲ್ಲಿಯೇ ಕೂಡಬೇಕಾಗು ತದೆ. ನೀವು ಹೇಗೂ ಬೋಟಿನಿಂದ ಹೋಗುತ್ತೀರಿ, ಇಲ್ಲಿಂದ ಯಾವಾಗ ಬೋಟು ಹೊರಡುತ್ತದೆಂಬದನ್ನು ಹೇಳಿದರೆ ನನ್ನ ಮೇಲೆ ಕೃಪೆ ಮಾಡಿದಂತಾಗುತ್ತದೆ. " ಎಂದಳು. ಆ ಯುರೋಪಿಯನ್ ಸ್ತ್ರೀಯು ಹುಟ್ಟಾ ಸುಶೀಲಳಾಗಿದ್ದಳು, ಅದರಲ್ಲಿ ಸಾದಾಪೋಷಾಕಿನ, ಹಿಂದೂ ಸ್ತ್ರೀಯಾದ ದಿವ್ಯಸುಂದರಿಯು ಉತ್ತಮರೀತಿಯಿಂದ ಇಂಗ್ರೇಜೀ ಮಾತಾಡುವದನ್ನು ನೋಡಿ ಅವಳ ಬಗ್ಗೆ ಲೇಡಿಯ ಹೃದಯದಲ್ಲಿ ಆದ ರವು ಹುಟ್ಟಿತು, ಆಗ ಅವಳು ನಗುತ್ತ:- ಬೋಟು ರಾತ್ರಿ ಹತ್ತಕ್ಕೆ ಹೊರಡುತ್ತದೆ. ಆದರೆ ಈ ಬೋಟು ರಾಜಮಹೇಂದ್ರಿಗೆ ಮುಂಜಾನೆ ಹೊರಡುವ ಗಾಡಿಗಿಂತ ತಡ ವಾಗಿ ಮುಟ್ಟುತ್ತದೆ, ಕಾರಣ ನೀವು ಬೂಟಿನಿಂದ ಹೋಗುವದು ಚನ್ನಾಗಿ ಕಾಣಿ ಸುವದಿಲ್ಲ. ನಮಗೆ ಸಮುದ್ರ ಮಾರ್ಗದಿಂದ ಪ್ರವಾಸಮಾಡುವದು ವಿನೋದಪರ ವಾದದ್ದರಿಂದ ನಾವು ಬೋಟಿನಲ್ಲಿ ಕುಳಿತು ಹೋಗುತ್ತೇವೆ. ” ಎಂದಳು. ಇದನ್ನು ಕೇಳಿ ದಿವ್ಯಸುಂದರಿಯು ತಾನೂ ಬೋಟಿನಿಂದಲೇ ಹೋಗಬೇಕೆಂದು ಆಲೋಚಿಸಿ ದಳು; ಯಾಕಂದರೆ ಅವಳು ಯಾವರೀತಿಯಿಂದಾದರೂ ಪಾಂಡೀಚರಿಯನ್ನು ಬಿಟ್ಟು ಹೋಗಬೇಕೆಂದನ್ನುತ್ತಿದ್ದಳು. ಪ್ರವಾಸದಲ್ಲಿ ಒಂದೆರಡು ದಿನ ಹೆಚ್ಚಿಗೆ ಹೋದರೂ ಅಡ್ಡಿಯಿಲ್ಲ. ಆದರೆ ಪಾಂಡೀಚರಿಯಲ್ಲಿ ಒಂದು ಕ್ಷಣ ಸಹ ನಿಲ್ಲಬಾರದೆಂದು ಅವಳಿಗೆ ತೋರುತ್ತಿದ್ದಿತು. ಆಗ ಅವಳು ತನ್ನ ಇಚ್ಛೆಯೂ ಬೋಟಿನಿಂದಲೇ ಹೋಗಬೇಕೆಂದಿ