ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಪ್ರಕರಣ- ವಸಂತನ ಕಾರಸ್ಥಾನ. ೧೨ ಹಿಂmmmwooooooooooooownMow ಸಾಹಸವನ್ನು ನೋಡಿ ಕೃಷ್ಣರಾಯನು ಬಾಯಿಯಲ್ಲಿ ಬೊಟ್ಟು ಕಚ್ಚಿಕೊಂಡನು; ಆದರೆ ಅವಳು ಎಲ್ಲಿ ಹೋದಳು, ಅವಳು ನನಗೆ ಹೇಗೆ ಭೆಟ್ಟಿಯಾದಾಳು, ಎಂಬ ಬಗ್ಗೆ ಮಾತ್ರ ಅವನಿಗೆ ವಿಲಕ್ಷಣ ಚಿಂತೆಯಾಯಿತು. ಪೋಲೀಸರ ಸಂಗಡ ಕೃಷ್ಣರಾಯ ನೊಬ್ಬನೇ ಇದ್ದದ್ದರಿಂದ ಅವಳ ಶೋಧಕ್ಕಾಗಿ ಅವನೇ ಹೋಗಬೇಕಾಯಿತು. ಅವನು ಪೋಲೀಸರ ಅನುಜ್ಞೆಯನ್ನು ಹೊಂದಿ ಕೂಡಲೆ ಸ್ಟೇಶನ್ನಕ್ಕೆ ಬಂದನು; ಆದರೆ ಅಲ್ಲಿಯೂ ಅವಳ ಶೋಧವಾಗಲಿಲ್ಲ. ಅವನು ಆಗ “ ಈ ಮೊದಲೇ ಹೋಗಿ ರುವ ಗಾಡಿಯಿಂದ ದಿವ್ಯಸುಂದರಿಯು ಕಿಸನಗಡಕ್ಕೆ ಅಥವಾ ರಾಮಪುರಕ್ಕೆ ಹೋಗಿರ ಬಹುದು. ” ಎಂಬದಾಗಿ ತರ್ಕಿಸಿ ರಿಪ್ಲಾಯ ತಾರುಮಾಡಿದನು; ಆದರೆ ತಾರಿನಿಂದ ಸಮಾಧಾನಕಾರಕವಾದ ಉತ್ತರವು ಸಿಗಲಿಲ್ಲ. ಕೃಷ್ಣರಾಯನು ಎರಡನೇ ದಿವಸವೂ ಫಾಂಡೀಚರಿಯಲ್ಲಿ ಸೂಕ್ಷ್ಮವಾಗಿ ಶೋಧಮಾಡಿದನು; ಆದರೆ ಶೋಧವಾಗಲಿಲ್ಲ. ಪೋಲೀಸರ ಚವಕಸಿಯ ಸಲುವಾಗಿ ಕೃಷ್ಣರಾಯನು ಮೂರು ನಾಲ್ಕು ದಿವಸ ಪಾಂಡಿಚೇರಿಯಲ್ಲಿಯೇ ಇರಬೇಕಾಯಿತು. ನಾವು ಫ್ರೆಂಚಹದ್ದಿನಲ್ಲಿರುತ್ತೇವೆ; ಆದ ದ್ದರಿಂದ ನಮ್ಮ ಚವಕಸಿಯನ್ನು ಇಲ್ಲಿಯೇ ಮಾಡಬೇಕೆಂದು ವಸಂತ ಮೊದಲಾದವರು ಹೇಳಿಕೊಂಡರು, ಆದರೆ ಪಾಂಡೀಚರಿಯ ಪ್ರಂಚ ಗವರ್ನರನು ಎಲ್ಲ ವಿಷಯವನ್ನು ಕೇಳಿಕೊಂಡು ಸರ್ವರಿಗೂ ಬ್ರಿಟಿಶರ ಸ್ವಾಧೀನಮಾಡಿದನು, ಆ ಮೇಲೆ ಕೃಷ್ಣರಾ ಯನು ಎಲ್ಲರನ್ನು ಕರಕೊಂಡು ಮುಂಬಯಿಗೆ ಬಂದನು, ಅಲ್ಲಿ ಮೊದಲು ಪೋಲೀ ಸರ ಪ್ರಾಥಮಿಕ ಚವಕಸಿಯು ಪ್ರಾರಂಭವಾಯಿತು. ಇತ್ತ ದಿವ್ಯಸುಂದರಿಯು ರಾಜಮಹೇಂದ್ರಕ್ಕೆ ಬಂದ ಮೇಲೆ ಬಸರಾಬಾದಕ್ಕೆ ಹೋಗುವ ಒಂದು ಭಾಡಿಗೆಯ ನಾವೆಯಲ್ಲಿ ಕುಳಿತು ಬಸರಾಬಾದಕ್ಕೆ ಬಂದಳು. ಬಸರಾಬಾದಕ್ಕೆ ಬರುತ್ತಲೇ ಸಂಜೆಯಾದದ್ದರಿಂದಲೂ, ಅವಳೊಬ್ಬಳಿಂದಲೇ ಆಗ ರಾಮಪುರಕ್ಕೆ ಹೋಗುವದು ಶಕ್ಯವಿಲ್ಲದ್ದರಿಂದಲೂ ಅವಳು ನದಿಯ ದಂಡೆಯ ಮೇಲೆ ಕುಳಿತು ಇಂದು ರಾತ್ರಿ ಎಲ್ಲಿರಬೇಕೆಂಬ ಬಗ್ಗೆ ವಿಚಾರಮಾಡಹತ್ತಿದಳು. ಈ ಪೂರ್ವ ದಲ್ಲಿ ಅವಳು ಅನೇಕ ಸಾರೆ ಬಸರಾಬಾದಕ್ಕೆ ಬಂದಿದ್ದರೂ, ಅವಳಿಗೆ ಆ ಹಳ್ಳಿಯಲ್ಲಿ ಯಾರ ಪರಿಚಯವೂ ಇದ್ದಿಲ್ಲ. ಅವಳು ವಿಚಾರಮಾಡುತ್ತ ಕುಳಿತಿರುವಷ್ಟರಲ್ಲಿ ಹಳ್ಳಿ ಯೊಳಗಿನ ನಾಲೈದು ಮಂದಿ ಒಕ್ಕಲಗಿತ್ತಿಯರು ಮಣ್ಣಿನ ಕೊಡವನ್ನು ತಕ್ಕೊಂಡು ನದಿಗೆ ಬಂದರು. ನದಿಯ ದಂಡೆಯ ಮೇಲೆ ಒಬ್ಬ ಬ್ರಾಹ್ಮಣ ಸ್ತ್ರೀಯು ಕುಳಿತದ್ದು ನೋಡಿ, ಬೇರೆ ಬೇರೆ ಹೆಂಗಸರು ಬೇರೆ ಬೇರೆ ತರ್ಕಮಾಡುತ್ತ ಅವಳ ಹತ್ತಿರ ಬಂದು ಅವಳನ್ನು ಮಿಕಿ ಮಿಕಿ ನೋಡಹತ್ತಿದರು. ಆಗ ದಿವ್ಯಸುಂದರಿಯು ಒಬ್ಬ ಹೆಂಗಸ ನನ್ನು ಕುರಿತು:-ಅಮ್ಮಾ, ರಾಮಪುರಕ್ಕೆ ಹೋಗುವದಕ್ಕಾಗಿ ಇಲ್ಲಿಂದ ಒಂದು ಭಾಡಿಗೆಯ ಗಾಡಿಯು ಸಿಕ್ಕೀತೇ ? ” ಎಂದು ಕೇಳಲು ಆ ಹೆಂಗಸು ಕೊಡವನ್ನು ಕೆಳ ಗಿಟ್ಟು ದಿವ್ಯಸುಂದರಿಯ ಸಮೀಪದಲ್ಲಿ ಕುಳಿತು:- ಇಲ್ಲ ಅಮ್ಮ, ಇಲ್ಲಿ ಬಾಡಿಗೆಯ 17