ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ನೆಯ ಪ್ರಕರಣ-ಪ್ರೇಮದ ಸುಂದರ.ಭವಸ. ೧ar ಹಿಡಿದಿರಬಹುದು, ಈ ಪ್ರಕಾರ ಸೇವೆಯನ್ನು ಮಾಡುವವಳು ಇಂದಿರೆಯು, ಅವಳು ಪತಿಯ ಸಂರಕ್ಷಣೆಯ ಸಲುವಾಗಿ ಬೆನ್ನ ಹಿಂದಿರುವ ಯಾವಳೊಬ್ಬ ದೂರೀಕೃತ ಸಾಧೀಸಹಧರ್ಮಿಣಿಯಂತ ವಿನಾಯಕನ ಹಿಂದಿರುತ್ತಿದ್ದಳು; ಆದರೆ ಅವಳು ತನ್ನನ್ನು ನೋಡಿ ವಿನಾಯಕನ ಮನಸ್ಸು ತಲ್ಲಣಗೊಂಡೀತೆಂಬ ಭಯದಿಂದ ಎಂದೂ ಅವನ ದೃಷ್ಟಿಗೆ ಬೀಳುತ್ತಿದ್ದಿಲ್ಲ. ಒಂದು ದಿವಸ ಅವಳು ಗುಡ್ಡದ ಮೇಲಿನ ವನಪುಗಳನ್ನು ಸಂಗ್ರಹಮಾಡಿ, ಯೋಜಿಸಿದ ಅಕ್ಷರಗಳು ಎದ್ದು ಕಾಣಿಸುವಂತೆ ಅವುಗಳಿಂದ ಒಂದು ಮಾಲೆಯನ್ನು ಮಾಡಿದಳು. ನಿತ್ಯದಂತ ಅವಳು ತೀರ ಬೆಳಗಿನಲ್ಲಿ ಎದ್ದು, ವಿನಾಯ ಕನ ಬಂಗಲೆಗೆ ಹೋಗಿ ಆ ಬಂಗಲೆಯ ಮುಂಚೇ ಬಾಗಿಲಿಗೆ ಆ ಮಾಲೆಯನ್ನು ಕಟ್ಟಿ ದಳು, ನಂತರ ಮೆಲ್ಲನೆ ಅಂಗಳದ ಕಸವನ್ನು ಹೊಡೆದು ನೆಲಸಾರಣಿಮಾಡಹತ್ತಿದಳು. ಇಂದು ಬೇಕಂತಾ ವಿನಾಯಕನು ಎಚ್ಚರದಿಂದಿದ್ದನು. ದಿವ್ಯಸುಂದರಿಯೂ ಕುಳಿತೇ ಇದ್ದಳು. ಬಾಗಿಲಲ್ಲಿ ನೀರು ಹಾಕುವ ಸಪ್ಪಳವಾಯಿತು. ಕೂಡಲೆ ಈರ್ವರೂ ಬಾಗಿಲು ತೆರೆದು ಹೊರಗೆ ಬಂದರು. ವಿನಾಯಕನು ಭರದಿಂದ ಇಂದಿರೆಯ ಹತ್ತರ ಹೋಗಿ < ಯಾರವರು ? ” ಎಂದನು. ಆಗ ಅವಳು “ ನಾನು ತಮ್ಮ ದಾಸಿ ಇಂದಿರೆ, ” ಎಂದಳು. ಆಗ ವಿನಾಯಕ-ದಿವ್ಯಸುಂದರಿಯರಿಗೆ ಎಷ್ಟು ಆಶ್ಚರ್ಯವಾಗಿದ್ದಿತೆಂಬುವದನ್ನು ವಾಚ ಕರೇ ತರ್ಕಿಸಬಹುದಾಗಿದೆ. ಇಂದಿರೆಯು ' ನಾನು ತಮ್ಮ ದಾಸಿ...' ಎಂದಂದ ಕೂಡಲೆ ದಿವ್ಯಸುಂದರಿಯು ಪ್ರೇಮಭರದಿಂದ ಇಂದಿರೆಯ ಕೈಯನ್ನು ಹಿಡಿದು 'ಗೆಳತೀ, ಬಾ, ಒಳಗೆ, ನಿನ್ನ ಗುರ್ತು ಹತ್ತಿತು, ಯಾವ ಆಕಾಂಕ್ಷೆಯಿಲ್ಲದೆ ಇಷ್ಟು ಸೇವೆ ಮಾಡುತ್ತೀಯೆಂದ ಮೇಲೆ ನೀನೇ ಧನ್ಯಳು. ' ಎಂದಳು. ಆಗ ಇಂದಿರೆಯು:- ( ದಿವ್ಯಸುಂದರಿಯೊಡನೆ ಒಳಗೆ ಹೋಗುತ್ತ) ಸಖಿ, ನೀನು ಮಾತ್ರ ಧನ್ಯಳು--” ವಿನಾಯಕ:- (ನಡುವೇ ಬಾಯಿ ಹಾಕಿ) ಇಂದಿರೆ, ಈ ರೀತಿಯಿಂದ ಸೇವೆ ಮಾಡುವ ನಿನ್ನ ಉದ್ದೇಶವಾದರೂ ಯಾವದು? " ಇಂದಿರೆ:-( ಈ ಶರೀರರೂಪವಾದ ಬಂಗಲೆಯು ನಿಮ್ಮ ಬಂಗಲೆಯಂತೆ ಅನ್ವ ರ್ಥಕವಾಗಬೇಕೆಂಬುವದೇ ನನ್ನ ಉದ್ದೇಶವು ! " ವಿನಾ:« (ಆಶ್ಚರ್ಯದಿಂದ) ಈ ಬಂಗಲೆಯಲ್ಲಿ ಅಂಥ ವಿಶೇಷವೇನಿರುವದು? ” ಇಂದಿರ:-( ಹೊರಗೆ ನಡೆಯಿರಿ, ಅಂದರೆ ಎಲ್ಲ ತಿಳಿಯುವದು, ೨೨ ಆಗ ಎಲ್ಲರೂ ಹೊರಗೆ ಬಂದ ಮೇಲೆ ಇಂದಿರೆಯು ಪುಷ್ಪಮಾಲೆಯ ಕಡೆಗೆ ಬೊಟ್ಟು ಮಾಡಿ ' ನೋಡಿದಿರಾ! ಅದನ್ನು ' ಎಂದಳು. ಆಗ ಪುಷ್ಪಗಳಿಂದ ಸಾಧಿಸಿದ ಅಕ್ಷರಗಳನ್ನು ನೋಡಿ ವಿನಾಯಕನ ಕಣ್ಣುಗಳು ಪ್ರೇಮಾಶ್ರುಗಳಿಂದ ತುಂಬಿಬಂದವು. ದಿವ್ಯಸುಂದರಿಯ ಅವಸ್ಥೆಯೂ ಹಾಗೆಯೇ ಆಯಿತು.