ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ನೆಯ ಪ್ರಕರಣ- ಬುದ್ಧಿ: ಕರ್ಮಾನುಸಾರಿಣೀ !

•••••••••vvvvvvv. ದ್ದನು. ಅವನ ಅಣ್ಣನ ಹೆಸರು ಕೃಷ್ಣರಾಯ, ಇಬ್ಬರೂ ಚಿಕ್ಕಂದಿನಲ್ಲಿಯೇ ಮಾತಾ ಪಿತೃವಿಹೀನರಾಗಿದ್ದರೂ, ಸದುದ್ಯಮಶೀಲಸ್ವಭಾವದವರಾಗಿದ್ದ ಗ್ಲರಿಂದ ಅವರು ತಮ್ಮ ಆಯುಷ್ಯವನ್ನು ಒಳ್ಳೆ ರೀತಿಯಿಂದ ಕಳೆಯುವವರಾಗಿದ್ದರು. ಅವರ ತಂದೆ ಯು ತೀರಿಕೊಂಡಾಗ ವಿನಾಯಕನಿಗೆ ಹನ್ನೆರಡು ವರ್ಷಗಳಾಗಿದ್ದು, ಕೃಷ್ಣರಾಯ ನಿಗೆ ಇಪ್ಪತ್ತು ವರ್ಷಗಳಾಗಿದ್ದವು. ತಂದೆತಾಯಿಗಳು ಇರುವಾಗಲೇ ಕೃಷ್ಣರಾಯನ ಲಗ್ನ ವಾಗಿದ್ದಿತು. ವಿನಾಯಕನು ಇನ್ನೂ ಅವಿವಾಹಿತನಾಗಿಯೇ ಇದ್ದನು. ವಿನಾಯ ಕನ ಮೇಲೆ ಕೃಷ್ಣರಾಯನ ಪ್ರೀತಿಯು ಬಹಳವಾಗಿದ್ದಿತು. ತಾಯಿತಂದೆಗಳ ಪಶ್ಚಾತ್ ವಿನಾಯಕನಿಗೆ ಕೃಷ್ಣರಾಯನು ಸ್ವಲ್ಪಾದರೂ ಯಾತಕ್ಕೇನು ಕಡಿಮೆಮಾಡಿದ್ದಿಲ್ಲ. ವಿನಾಯಕನು ಅಣ್ಣನನ್ನು ಪಿತೃಸಮಾನನೆಂದು ಭಾವಿಸಿದ್ದನು. ಅವನ ಆಜ್ಞೆಯನ್ನು ಎಂದೂ ಉಲ್ಲಂಘಿಸುತ್ತಿದ್ದಿಲ್ಲ. ಇವರ ತಂದೆಯು ಸ್ವತಂತ್ರವಾದ ಉದ್ಯೋಗದಿಂದ ಕಾಲಹರಣ ಮಾಡುವವನಾಗಿದ್ದನು. ಅವನು ತನ್ನ ಮಕ್ಕಳ ಶಿಕ್ಷಣದ ಸಲುವಾಗಿ ಭಗೀರಥಪ್ರಯತ್ನ ಮಾಡಿದನು. ಅವನ ಪ್ರಯತ್ನ ವಾದರೂ ಫಲಕಾರಿಯಾಯಿತು. ತಂದೆಯ ಪಶ್ಚಾತ್ ಕುಟುಂಬದ ಎಲ್ಲ ಭಾರವು ಕೃಷ್ಣರಾಯನ ಮೇಲೆ ಬಿದ್ದಿತು. ಅವನು ತನ್ನ ಅಯುಷ್ಯನೌಕೆಯನ್ನು ಬೇರೊಂದು ಮಾರ್ಗದಿಂದ ನಡಿಸಬೇಕಾಯಿತು. ಅವನ ಅಲ್ಪಸ್ವಲ್ಪ ಪಿತ್ರಾರ್ಜಿತ ಆಸ್ತಿಯು ನಿಜಾಮನ ರಾಜ್ಯದಲ್ಲಿದ್ದು, ಒಂದು ಸಣ್ಣ ಮನೆಯು ಮಾತ್ರ ಮುಂಬಯಿಯಲ್ಲಿದ್ದಿತು. ಮಕ್ಕಳ ಶಿಕ್ಷಣಕ್ಕಾಗಿ ಅವನ ತಂದೆಯು ಮುಂಬಯಿಗೆ ಬಂದಿದ್ದನು. ಕೃಷ್ಣರಾಯನು ಕಾಲೇಜನ್ನು ಹೊಕ್ಕ ಅಲ್ಪಾವಧಿ ಯಲ್ಲಿಯೇ ತಂದೆಯು ತೀರಿಕೊಂಡದ್ದರಿಂದ ಅವನು ನಿರ್ವಾಹವಿಲ್ಲದೆ ಇದ್ದ ಆಸ್ತಿ ಯನ್ನು ವ್ಯವಸ್ಥೆಗೊಳಿಸುವದಕ್ಕಾಗಿ ಕಾಲೇಜನ್ನು ಬಿಡಬೇಕಾಯಿತು. ತಮ್ಮನ ಶಿಕ್ಷಣ ಕ್ರಮಕ್ಕೆ ಬಾಧೆಯಾಗಬಾರದೆಂದು ಅವನು ಮುಂಬಯಿಯಲ್ಲಿ ೫೦ ರೂಪಾಯಿಯ ನವಕರಿಯ ಮೇಲೆ ನಿಂತಿದ್ದನು. ಕೃಷ್ಣರಾಯನಿಗೆ ಒಬ್ಬ ಚಿಕ್ಕಪ್ಪನಿದ್ದನು. ಅವನ ಹೆಸರು ನೀಲಕಂಠರಾಯ. ಅವನು ಇವರಿಬ್ಬರಿಂದ ಬೇರೆಯಿದ್ದು ಶ್ರೀಮಂತನಾಗಿ ದ್ದನು, ಅವನು ನಿಪುತ್ರಿ ಕನಾಗಿದ್ದದ್ದರಿಂದ ವಿನಾಯಕನನ್ನು ಬಹಳವಾಗಿ ಪ್ರೀತಿಸುತ್ತಿ ದ್ದನು. ಕೃಷ್ಣರಾಯನು ತನ್ನ ಆಸ್ತಿಯ ವ್ಯವಸ್ಥೆಯಸಲುವಾಗಿ ನಿಜಾಮನ ರಾಜ್ಯಕ್ಕೆ ಹೋದಾಗ ವಿನಾಯಕನು ನೀಲಕಂಠರಾಯನ ಮನೆಯಲ್ಲಿಯೇ ಇರುತ್ತಿದ್ದನು. ಮೊದ ಲಿನ ಹೆಂಡತಿಯು ತೀರಿಕೊಂಡ ಎಷ್ಟೋ ದಿವಸದ ಮೇಲೆ ಜನರ ವಿಶೇಷಾಗ್ರಹದಿಂದ ನೀಲಕಂಠರಾಯನು ಎರಡನೇ ಲಗ್ನ ವನ್ನು ಮಾಡಿಕೊಂಡಿದ್ದನು. ಈ ಲಗ್ನ ವಾದ ಸ್ವಲ್ಪ ದಿವಸಗಳಲ್ಲಿಯೇ ಅವನು ನಿಪುತ್ರಿಕನಾಗಿ ಮೃತಬಟ್ಟನು. ಇದರಿಂದ ನೀಲಕಂಠ ರಾಯನ, ಕೃಷ್ಣರಾಯ -ವಿನಾಯಕರ ಸಂಬಂಧವು ಕಡಿದುಹೋಯಿತು. ಆಮೇಲೆ ಕೃಷ್ಣರಾಯನು ಬಹಳವಾಗಿ ಮುಂಬಯಿಯಲ್ಲಿಯೇ ಇರುತ್ತಿದ್ದನು. ವಿನಾಯಕನು ತನ್ನ ಇಪ್ಪತ್ತೆರಡನೇ ವರ್ಷದಲ್ಲಿ ಎಮ್. ಎ. ಆಗಿ ಭೂಸ್ತರಶಾಸ್ತ್ರ-ಖನಿಜಶಾಸ್ತ್ರಗಳ