ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ನೆಯ ಪ್ರಕರಣ- ಬುದ್ಧಿ: ಕರ್ಮಾನುಸಾ' ನೇ ! ಹಿ AAAAAAAAAAAA Sha Ah chAAA ಖಂಡದಲ್ಲಿ ವಿಪುಲವಾಗಿ ಸಿಗಹತ್ತಿದರೆ ನಮ್ಮ ದೇಶಕ್ಕೆ ಬಹಳ ಕಲ್ಯಾಣವಾಗು ವಂತಿದೆ, ೨ ಎಂಬದಾಗಿ ಈ ಮೊದಲಾದ ಅಲ್ಲಿದ್ದ ಎಲ್ಲ ಕಲ್ಲುಗಳ ವಿಷಯಕ್ಕೆ ವಿಸ್ತಾರವಾದ ಮಾಹಿತಿಯನ್ನು ಹೇಳಿ ಅವನು ಆ ಕಲ್ಲುಗಳಿಂದ ಧಾತುಗಳನ್ನು ತೆಗೆಯಲಿಕ್ಕೆ ಉಪಯು ಕ್ರವಾದ ತಾನು ಸಿದ್ಧಮಾಡಿಟ್ಟ ತರತರದ ಯಂತ್ರಗಳ ನಮೂನೆಗಳನ್ನು ತೋರಿಸಿ ದನು, ಆಗ ವಿನಾಯಕನ ಬುದ್ದಿ ಸಾಮರ್ಥ್ಯದ ಸಲುವಾಗಿ ಮಾಧವರಾಯನಿಗೆ ಒಳ್ಳೆ ಆಶ್ಚರ್ಯವಾಯಿತು. ಇಷ್ಟರಲ್ಲಿ ನಾಯಂಕಾಲವಾಯಿತು. ಆಗ ವಿನಾಯಕನು ದೀವಿಗೆಯನ್ನು ಹಚ್ಚಿ ಉಳಿದ ಅಲ್ಪಸ್ವಲ್ಪ ಸಂಗತಿಯನ್ನು ಮಾಧವರಾಯನಿಗೆ ಹೇಳಿ ದನು. ಆ ಎಲ್ಲ ವಿಷಯಪರಿಚಯ ಮಾಡಿಕೊಟ್ಟ ಬಗ್ಗೆ ಮಾಧವರಾಯನು ವಿನಾ ಯಕನ ಆಭಾರ ಮನ್ನಿಸಿ ಅವನ ಅಪ್ಪಣೆಯನ್ನು ತಕ್ಕೊಂಡು ಹೊರಟುಹೋದನು. ಅವನು ಹೋದಮೇಲೆ ವಿನಾಯಕನು ಆರಾಮಖುರ್ಚಿಯ ಮೇಲೆ ಕುಳಿತು ತಿರುಗಿ ತನ್ನ ವ್ಯವಸಾಯದ ಬಗ್ಗೆ ಆಲೋಚಿಸಹತ್ತಿದನು. ಸ್ವಲ್ಪಾವಧಿಯಲ್ಲಿ ಓಡುತ್ತ ಒಬ್ಬ ಮನುಷ್ಯನು ವಿನಾಯಕನ ಕೋಣೆಯಲ್ಲಿ ಬಂದು ಭೀತಸ್ವರದಿಂದ:- ತಮ್ಮ ಹೆಸರು ವಿನಾಯಕರಾಯರೇನು ? >> ವಿನಾಯಕ:- ( ಭಯಚಕಿತನಾಗಿ ) ಹೌದು, ನಿಮ್ಮ ಕೆಲಸವೇನು ? ) ಬಂದವ: ಏಳಿರಿ, ಏಳಿರಿ, ಬೇಗನೆ ನನ್ನ ಸಂಗಡ ಬರಿ ನಿಮ್ಮ ಮೇಲೆ ದೊಡ್ಡ ಸಂಕಟವು ಬಂದಿರುತ್ತದೆ. " ವಿನಾಯಕ:-( ನಾನು ಎದ್ದೆನು; ಆದರೆ ಅಂಥ ಕಠಿಣ ಪ್ರಸಂಗವೇನು ?” ಬಂದವ:- ತಾವು ಸುಮ್ಮನೆ ಇಲ್ಲಿ ವೇಳೆಯನ್ನು ಕಳೆಯಬೇಡಿರಿ. ನಾನು ಹಾದಿಯಲ್ಲಿ ನಿಮಗೆ ಎಲ್ಲ ಸಂಗತಿಯನ್ನು ಹೇಳುತ್ತೇನೆ. ಲಗು ನಡೆಯಿರಿ, ಹೊರಗೆ ಗಾಡಿಯು ನಿಂತಿರುತ್ತದೆ.” ವಿನಾಯಕ:- ( ತ್ವರೆಯಿಂದ ಡೇಸು ಹಾಕಿಕೊಂಡು ) ತಮ್ಮ ಹೆಸರೇನು ? ಮತ್ತು ತಾವು ಇಷ್ಟ ಯಾಕೆ ಗಾಬರಿಯಾಗಿದ್ದೀರಿ? ನನ್ನ ಮೇಲೆ ಬಂದ ಸಂಕಟ ವೇನು ? ) ಬಂದವ:- ( ತ್ವರೆಯನ್ನು ತೋರಿಸುತ್ತ ) ನಾನು ತಮಗೆಲ್ಲ ಹೇಳುವೆನು. ತಾವು ಮೊದಲು ನನ್ನ ಸಂಗಡ ಹೊರಡಿರಿ, ಒಂದು ವಿಕ್ಟೋರಿಯಾ ಗಾಡಿಗೆ ಗ್ರಾಮದ ಧಕ್ಕೆ ತಗಲಿದ್ದರಿಂದ ತಮ್ಮ ಬಂಧು ಕೃಷ್ಣರಾಯನು ಆ ಗಾಡಿಯ ಮೇಲಿಂದ ಬಿದ್ದು ಎಚ್ಚರದಪ್ಪಿರುತ್ತಾನೆ. ನನ್ನ ಹೆಸರು ಗೋಪಾಳರಾಯ. ನಾನು ಶ್ಯಾಮರಾಯರೆಂಬ ಒಬ್ಬ ಸಧನಗೃಹಸ್ಥರ ನವಕರನು. ಅವರೂ, ನಾನೂ ಕೂಡಿ ಬೀದಿಯಲ್ಲಿ ಹೋಗು ತಿದ್ದೆವು. ಇಷ್ಟರಲ್ಲಿ ಮೇಲಿನ ದುರ್ಘಟ ಪ್ರಸಂಗವನ್ನು ಕಣ್ಣಾರೆ ಕಂಡದ್ದರಿಂದ