ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೦ ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ. ಕ್ರೋಧಪ್ರದರ್ಶನಮಾಡದೆ ಸ್ವಲ್ಪ ತಿರಸ್ಕಾರದಿಂದ:-( ಈ ಪ್ರಕಾರವಾಗಿ ನನ್ನನ್ನು ವಂಚಿಸಿ ಇಲ್ಲಿಗೆ ಕರಕೊಂಡು ಬಂದ ಉದ್ದೇಶವಾದರೂ ಯಾವದು ? ? ಶ್ಯಾಮರಾಯ:-( ಎರಡನೇ ಉದ್ದೇಶವೇನೂ ಇಲ್ಲ, ಒಂದು ತೀರ ಕುಲ್ಲಕ ಕಾರ್ಯದ ಸಲುವಾಗಿ ನಾನು ನಿಮ್ಮನ್ನು ಇಲ್ಲಿಗೆ ಕರಿಸಿರುವೆನು, ನನ್ನ ಕಡೆಗೆ ಒಂದು ಕಾಗದವಿರುತ್ತದೆ. ಆ ಕಾಗದದ ಮೇಲೆ ನಿಮ್ಮ ಸಹಿ ಬೇಕಾಗಿದೆ. " ವಿನಾ:- ( ಕ್ರೋಧಾಶ್ಚರ್ಯಗಳಿಂದ ) ನನ್ನ ಸಹಿ? ಅದು ಯಾತಕ್ಕೆ? ಕಾಗದವನ್ನು ನೋಡಿದ ಹೊರ್ತು ನಾನು ಸಹಿ ಮಾಡುವದಿಲ್ಲ. ” ಶಾಮ:-( ತಾವು ಅಗತ್ಯವಾಗಿ ಕಾಗದವನ್ನು ನೋಡಿರಿ. ಈ ಸಂಬಂಧ ವಾಗಿ ನನ್ನ ದೇನೂ ಅಡ್ಡಿಯಿಲ್ಲ. ಏನೋ ಕೆಟ್ಟ ಉದ್ದೇಶದ ಸಲುವಾಗಿ ನಾನು ತಮ್ಮ ಸಹಿ ಬೇಡುತ್ತೇನೆಂದು ತಿಳಿಯಬೇಡಿರಿ. ” ಹೀಗನ್ನುತ್ತ ಅವನು ಗೋಪಾಳನ ಕೈಯ ಇದ್ದ ಕಾಗದವನ್ನು ಇಸುಕೊಂಡು ಅದನ್ನು ವಿನಾಯಕನ ಕೈಯಲ್ಲಿ ಕೊಟ್ಟನು. ಮೊದಲು ಆ ಕಾಗದವನ್ನು ಓದಿನೋಡಿ ನಂತರ ನಿಶ್ಚಯಿಸಬೇಕಾದದ್ದನ್ನು ನಿಶ್ಚ ಯಿಸಬೇಕಾಗಿ ವಿನಾಯಕನು ಆಲೋಚಿಸಿದ್ದನು, ಆದರೆ ಆ ಕಾಗದವ ತನ್ನ ಕೈಯಲ್ಲಿ ಬರುತ್ತಲೇ ಆ ಕಾಗದವನ್ನು ಓದಿನೋಡುವ, ಅದರ ಮೇಲೆ ಸಹಿ ಮಾಡುವ ಕಾರಣ ವಿಲ್ಲೆಂದು ಮನಸ್ಸಿನಲ್ಲಿ ಹುಟ್ಟಿದ್ದರಿಂದ ಅವನು ಆ ಕಾಗದವನ್ನು ಹಾಗೆಯೇ ಶಾಮ ರಾಯನ ಕೈಯಲ್ಲಿ ತಿರುಗಿ ಕೊಟ್ಟು:- ಕಾಗದದಲ್ಲಿ ಯಾವ ಸಂಗತಿಯೇ ಇರಲಿ. ನಾನು ಅದನ್ನು ಓದುವದೂ ಇಲ್ಲ, ಮತ್ತು ಅದರ ಮೇಲೆ ಸಹಿಯನ್ನೂ ಮಾಡುವ ದಿಲ್ಲ. ” ಎಂದನ್ನಲು ಶಾಮರಾಯನು ಆಶ್ಚರ್ಯದಿಂದ:-( ಇದೇನು ವಿನಾಯಕ ರಾಯ! ನಾವು ಒಳ್ಳೆ ಶಿಕ್ಷಿತರೆಂದು ನೀವು ಅನ್ನುವದೇನು, ನಿಮ್ಮಲ್ಲಿ ಇಷ್ಟು ಧೈರ್ಯವು ಕೂಡ ಇಲ್ಲವೆಂಬುವದೇನು? ಮೊದಲು ಆ ಕಾಗದವನ್ನು ಓದಿಯಾದರೂ ನೋಡಿರಿ.” ಎಂದನ್ನುತ್ತ ತಿರುಗಿ ಆ ಕಾಗದವನ್ನು ವಿನಾಯಕನ ಕೈಯಲ್ಲಿ ಕೊಟ್ಟನು. ಆ ಕಾಗದದ ಮೇಲೆ ಸಹಿ ಮಾಡಲಿಕ್ಕಿಲ್ಲವೆಂದು ವಿನಾಯಕನು ನಿಶ್ಚಯಿಸಿದ್ದರೂ, ಆ ಕಾಗದದಲ್ಲಿ ಬರೆದಿರುವದಾದರೂ ಏನು ನೋಡಬೇಕೆಂದು ಅವನಿಗೆ ಸಾಹಜಿಕ ಜಿಜ್ಞಾಸೆಯುತ್ಪನ್ನ ವಾಗಿ ಕೂಡಲೆ ಆ ಕಾಗದವನ್ನು ಓದಲಿಕ್ಕೆ ಆರಂಭಿಸಿದನು. ಅವನು ನಾಲ್ಕಾರು ಸಾಲುಗಳನ್ನು ಓದುತ್ತಲೇ ಅವನ ಗೌರವರ್ಣದ ಮುದ್ರೆಯು ಕ್ರೋಧದಿಂದ ಕೆಂಪಾ ಯಿತು. ಅವನು ಕೈಯಲ್ಲಿದ್ದ ಕಾಗದವನ್ನು ಮುದುಡಿ ದೂರ ಚಲ್ಲಿ ಸಂತಾಪದಿಂದ:- * ಇದೇನು? ಇದು ಬೊಟ್ಟ ಮೃತ್ಯುಪತ್ರವು ! ಇದರ ಮೇಲೆ ನಾನು ಸಹಿಯನ್ನು ಮಾಡಬೇಕೇ ? ” ಎಂದನು. ವಿನಾಯಕನ ಈ ರಾಗವನ್ನು ನೋಡಿ ಗೋಪಾಳ-ಶಾಮರಾಯರು ಬಿದಿಖದಿ ನಕ್ಕರು. ನಂತರ ಒಳ್ಳೆ ಗಂಭೀರಸ್ವರದಿಂದ ಶಾಮರಾಯ:- ವಿನಾಯಕರಾಯ,