ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, AAAAAAMM೧೧೧೧೧೧೧೧ AAAAAA ದಿವಾಣಖಾನೆಯಿಂದ ಮೇಲಕ್ಕೆ ಹೋಗಲಿಕ್ಕೆ ಕೆಂಪುಬಣ್ಣದ ಕಲ್ಲಿನ ಒಂದು ಅಗಲ ವಾದ ಅಟ್ಟವಿದ್ದು, ಓಡಾಡಲಿಕ್ಕೆ ಅನುಕೂಲವಾಗಬೇಕೆಂದು ಅದರ ಒಂದು ಭಾಗಕ್ಕೆ ಕೆಳಗಿನಿಂದ ಮೇಲಿನ ಅಂತಸ್ತಿನ ತನಕ ಹಿತ್ತಾಳಿಯ ಗಡುತರವಾದ ಕಟ್ಟು ಇದ್ದಿತು. ಇದೇ ಅಟ್ಟದ ಹತ್ತರ ಮೇಲೆ ಹೋಗುವದಕ್ಕಾಗಿ ಒಂದು ವಿದ್ಯುಲ್ಲತೆಯ ತೊಟ್ಟಿಲವೂ ಇದ್ದಿತು. ಬಂಗಲೆಯೊಳಗಿನ ಎಲ್ಲ ದಿವಾಣಖಾನೆಗಳು ಪಾಶ್ಚಾತ್ಯ ಪದ್ಧತಿಯಿಂದ ಶೃಂಗ ರಿಸಿದ್ದವು. ಎಷ್ಟೋ ಕಡೆಗೆ ಇಟಾಲಿ-ಫ್ರಾನ್ಸ್ ದೇಶಗಳಲ್ಲಿ ಸಿದ್ಧವಾದ ಸಣ್ಣ ಸಣ್ಣ ನಗ್ನ ಮೂರ್ತಿಗಳು ಸುಂದರವಾದ ಆಸನಗಳ ಮೇಲೆ ಬಹು ಭವ್ಯವಾಗಿ ಕಾಣಿಸುತ್ತಿದ್ದವು. ರಾಜಾಬಹಾದೂರ ಚಿಂತಾಮಣಿರಾಯನು ಒಬ್ಬ ಸಜ್ಜನ ಗೃಹಸ್ಥನಾಗಿದ್ದನು. ಅವನ ಹತ್ತರ ಪಿತ್ರಾರ್ಜಿತ ಸಂಪತ್ತು ಅಗಣ್ಯವಾಗಿದ್ದಿತು. ಅಲ್ಲದೆ ಅವನೂ ತನ್ನ ಕಾಲಕೀರ್ದಿಯಲ್ಲಿ ಎಷ್ಟೋ ಹಣಗಳಿಸಿದ್ದನು. ಅವನು ಕಾಲೇಜದ ಒಂದೂ ಪರೀಕ್ಷೆ ಯನ್ನು ಕೊಡದಿದ್ದರೂ ಇಂಗ್ರೇಜೀಭಾಷೆಯ ಮೇಲೆ ಒಳ್ಳೆ ಪ್ರಭುತ್ವವುಳ್ಳವನಾಗಿ ದ್ದನು, ವಿಶೇಷತಃ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಅವನ ಮನಸ್ಸಿನ ಮೇಲೆ ಚನ್ನಾಗಿ ಪರಿಣಾಮವಾಗಿದ್ದಿತು. ಅವನು ಪ್ರತಿಯೊಂದು ವಿಷಯಕ್ಕೆ ಪಾಶ್ಚಾತ್ಯ ಪದ್ಧತಿಯನ್ನು ಅನುಸರಿಸುತ್ತಿದ್ದನು. ಅವನ ಅನುಕರಣಪದ್ಧತಿಯು ವಿಲಕ್ಷಣವಾದದ್ದಾಗಿದ್ದಿತು. ಅನುಕರಣಮಾಡುವ ವಿಷಯದ ಶಕ್ಯಾಶಕ್ಯವನ್ನೂ, ಒಳಿತುಹೀನವನ್ನೂ ವಿಚಾರ ಮಾಡುತ್ತಿದ್ದಿಲ್ಲ. ಅವನಿಗೆ ಸುಧಾರಣೆಯ ಸವಿಯು ಬಹಳವಾಗಿ ಹತ್ತಿದ್ದರಿಂದ ಹೈದ ರಾಬಾದದಂಥ ಪಟ್ಟಣವು ಕೂಡ ಇರಲಿಕ್ಕೆ ಅಯೋಗ್ಯವಾಗಿ ತೋರಿತು. ಅಷ್ಟರ ಸಲುವಾಗಿ ಅವನು ಆ ವಿಶಾಲವಾದ ಬಂಗಲೆಯನ್ನು ಮುಂಬಯಿಯಲ್ಲಿ ಕಟ್ಟಿಸಿದ್ದನು. ಅವನಿಗೆ ರಾಮರಾಯನೆಂಬ ಒಬ್ಬ ಮಗನೂ, ದಿವ್ಯಸುಂದರಿಯೆಂಬ ಒಬ್ಬ ಮಗಳೂ ಹೀಗೆ ಇಬ್ಬರೇ ಮಕ್ಕಳಿದ್ದರು. ಅವನು ಮಗನ ಶಿಕ್ಷಣದ ಸಲುವಾಗಿ ಬಹಳ ಪ್ರಯತ್ನ ಬಟ್ಟನು. ಮುಂಬಯಿಯಲ್ಲಿ ಕಲಿಯುವದಾದ ಮೇಲೆ ರಾಮರಾಯನನ್ನು ಹೆಚ್ಚಿನ ಶಿಕ್ಷಣಕ್ಕಾಗಿ ವಿಲಾಯತಿಯಲ್ಲಿ ಇಟ್ಟನು. ರಾಮರಾಯನು ಕೆಂಬ್ರಿಜಿ ವಿಶ್ವವಿದ್ಯಾಲ ಯದ ಬಿ. ಎ. ಆದ ಮೇಲೆ ಚಿಂತಾಮಣಿರಾಯನು ಹೆಂಡಿರುಮಕ್ಕಳು ಸಹಿತ ಇಂಗ್ಲಂ ಡಕ್ಕೆ ಹೋಗಿ ರಾಮರಾಯನನ್ನು ಸಂಗಡ ಕರಕೊಂಡು ಬಂದನು. ಇಂಗ್ಲಂಡದಿಂದ ಬಂದ ಸ್ವಲ್ಪ ದಿನಗಳಲ್ಲಿಯೇ ಚಿಂತಾಮಣಿರಾಯನ ಕುಟುಂಬವು ತೀರಿಕೊಂಡಿತು. ಆಗ ಅವನಿಗೆ ಪುನಃ ಲಗ್ನ ವಾಗಲಿಕ್ಕೆ ಎಷ್ಟೋ ಶ್ರೀಮಂತರು ಆಗ್ರಹಮಾಡಿದರು; ಆದರೆ ಅದಕ್ಕೆ ಅವನು ಒಪ್ಪಲಿಲ್ಲ. ಶ್ರೀಮಂತದೃಷ್ಟಿಯಿಂದ ಚಿಕ್ಕಂದಿನಲ್ಲಿಯೇ ರಾಮ ರಾಯನ ಲಗ್ನವಾಗಿದ್ದಿತು. ಅವನ ಹೆಂಡತಿಯ ನಿಜಾಮನ ರಾಜ್ಯದೊಳಗಿನ ಒಬ್ಬ ಜಹಾಗೀರದಾರನ ಮಗಳಾಗಿದ್ದಳು. ಅವಳು ಸುಶೀಲಳೂ, ಚೆಲುವೆಯೂ ಆಗಿದ್ದಳು ಚಿಂತಾಮಣಿರಾಯನ ಮನೆಯಲ್ಲಿ ಸುಧಾರಣೆಯು ಅಂಗಾಲಿನಿಂದ ನಡುನೆತ್ತಿಯವರೆಗೆ ಹಬ್ಬಿದ್ದರೂ ಅದರ ಪ್ರಭಾವವು ಎಲ್ಲರ ಮೇಲೆಯೂ ಸರಿಯಾಗಿ ಆಗಿದ್ದಿಲ್ಲ. ರಾಮರಾ