ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, MMMM ಆಶ್ಚರ್ಯಸಾಗರದಲ್ಲಿ ಮುಳುಗಿಸುತ್ತಿದ್ದಳು. ದಿವ್ಯಸುಂದರಿಯ ಅಂತಃಕರಣವು ಬಹು ದಯಾದ್ರ್ರವಾಗಿದ್ದಿತು. ಬಡಬಗ್ಗರಿಗೆ ಅವಳು ಕಲ್ಪತರುವಾಗಿದ್ದಳು. ತಾನು ಯಾವ ದೊಂದು ಹೆಚ್ಚಿನ ಕಿಮ್ಮತ್ತಿನ ಬಟ್ಟೆಯನ್ನು ಉಟ್ಟು ಕೊಳ್ಳುವಾಗ ನನ್ನ ಎಷ್ಟೋ ಭಗಿನಿ ಯರಿಗೆ ಮೈ ಮುಳ್ಳವಷ್ಟು ವಸ್ತ್ರಗಳು ಕೂಡ ಇರಲಿಕ್ಕಿಲ್ಲವೆಂದು ಆಲೋಚಿಸಿ ಮರು ಗುತ್ತಿದ್ದಳು. ಪಕ್ವಾನ್ನವನ್ನು ಊಟಮಾಡುವಾಗ « ಅಯ್ಯೋ! ಎಷ್ಟೋ ಜನರಿಗೆ ಹೊಟ್ಟೆ ತುಂಬುವಷ್ಟು ರೊಟ್ಟ ಚತ್ಥಿಯು ಕೂಡ ಸಿಗುತ್ತದೆಯೋ ಇಲ್ಲೋ ” ಎಂದು ವಿಚಾರಿಸಿ ಕಣ್ಣೀರು ಸುರಿಸುತ್ತಿದ್ದಳು. ಅವಳು ಶ್ರೀಮಂತರ ಮಗಳಾಗಿದ್ದರೂ ಸಾದಾ ರೀತಿಯಿಂದ ನಡೆಯುತ್ತಿದ್ದಳು. ಅವಳಿಗೆ ಶ್ರೀಮಂತಿಕೆಯ ಅಭಿಮಾನವು ತಿಲಾಂಶವಾ ದರೂ ಇದ್ದಿಲ್ಲ. ಅವಳು ಅತ್ಯಂತ ಸುಂದರಿಯಾಗಿದ್ದಳು. ಅವಳ ವರ್ಣಾವಯವಗಳ ಸಲುವಾಗಿ ಬ್ರಹ್ಮನು ಬಹು ಪರಿಶ್ರಮ ತೆಗೆದುಕೊಂಡಿದ್ದನು. ವಿನಾಯಕನು ಇಂದಿರೆ ಯನ್ನು ನೋಡಿದಾಗ ಅವಳಂಥ ಸುಂದರ ಸ್ತ್ರೀಯು ವಾಸ್ತವ್ಯವೇ ಜಗತ್ತಿನಲ್ಲಿ ಇಲ್ಲ ವೆಂದು ಭಾವಿಸಿದ್ದನು, ಆದರೆ ಅದೇ ದಿವ್ಯಸುಂದರಿಯನ್ನು ನೋಡಿದ ಕೂಡಲೆ ಅವನ ಭ್ರಮೆಯು ದೂರಾಯಿತು. ದಿವ್ಯಸುಂದರಿಯು ಇಂದಿರೆಗಿಂತ ಎಷ್ಟೋ ಪಟ್ಟು ಸುಂದರ ಳಿದ್ದಳು. ಯಾವ ಲಜ್ಜೆಯು ಇಂದಿರೆಯ ನಡೆನುಡಿಗಳಲ್ಲಿ ಇದ್ದಿಲ್ಲವೋ ಅದು ದಿವ್ಯ ಸುಂದರಿಯಲ್ಲಿ ಮೂರ್ತಿಮಂತವಾಗಿದ್ದದ್ದರಿಂದ ದಿವ್ಯಸುಂದರಿಯ ಸೌಂದರ್ಯರೂಪ ವಾದ ವಜ್ರವನ್ನು ಬಂಗಾರದ ಕುಂದಣದಲ್ಲಿ ಕೂಡ್ರಿಸಿದಂತಾಗಿದ್ದಿತು. ಇರಲಿ. ರಾಮರಾಯನು ಹೊರಗೆ ಹೋಗಿ ಚೀಟಿಯನ್ನು ಬರೆದು ತಿರುಗಿ ಬರುವದ ರೊಳಗಾಗಿ ಮಧುರಾ-ದಿವ್ಯಸುಂದರಿಯರು ವಿನಾಯಕನಿಗೆ ಎಷ್ಟೋ ಪ್ರಶ್ನೆ ಮಾಡಿದ್ದರು. ವಿನಾಯಕನು ಅವರಿಗೆ ಉತ್ತರಗೊಡುತ್ತ:- ನಿನ್ನೆ ರಾತ್ರಿ ನೀವು ಎಲ್ಲಿಗೆ ಹೋಗಿ ದ್ದಿರಿ?” ಎಂದು ಕೇಳಿದನು. ಆಗ ಮಧುರೆಯು ನಕ್ಕು:-( ನಿನ್ನೆ ಒಂದು ನಾಟಕ ಕಂಪನಿಯವರು ನಮಗೆ ಆಮಂತ್ರಣಮಾಡಿದ್ದರಿಂದ ನಾಟಕ ನೋಡುವದರ ಸಲುವಾಗಿ ನಾವು ಹೋಗಿದ್ದೆವು. ತಮಗೆ ನಾಟಕ ನೋಡುವದರಲ್ಲಿ ಅಭಿರುಚಿಯದೆಯೋ ಇಲ್ಲೋ ? " ವಿನಾ:-( ಇಲ್ಲ. ನಾನು ನನ್ನಿ ವಯಸ್ಸಿನಲ್ಲಿ ಎಲ್ಲ ಅಂದರೆ ೨-೩ ನಾಟಕ ನೋಡಿದ್ದೇನೆ, ೨ ಇದೇ ವೇಳೆಯಲ್ಲಿ ರಾಮರಾಯನು ಒಳಗೆ ಬರುತ್ತಿದ್ದನು. ಅವನು ವಿನಾಯಕನ ಈ ವಾಕ್ಯವನ್ನು ಸ್ಪಷ್ಟವಾಗಿ ಕೇಳಿದನು. ಅವನು ತನ್ನ ಸ್ಥಾನದ ಮೇಲೆ ಕೂಡ್ರುತ್ತ ಕೂಡ್ರುತ್ತ:- ಹಾಗಾದರೆ ನಾಟಕದ ಮೇಲೆ ನಿಮಗೆ ಅಭಿರುಚಿಯಿದ್ದಂತೆ ಕಾಣಿಸು ವದಿಲ್ಲವೆಂದು ಅನ್ನಲಿಕ್ಕೆ ಬೇಕು. ವಿನಾ:-( ಹೌದು, ನನಗೆ ಅದರಲ್ಲಿ ಅಷ್ಟು ಅಭಿರುಚಿಯಿಲ್ಲ; ಆದರೆ ನಿನ್ನಿನ