ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&3 ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. hh AAAAAAAAAAAA ••••••••MMAMMAMMA ೪ನೆಯ ಪ್ರಕರಣ, ಶಿಂಜಿ 42 ಜಿ ಸಖಿ ಸಂದರ್ಶನ! ಈ ಚಿ೦ತಾಮಣಿರಾಯನ ಪರಿವಾರದೊಡನೆ ವಿನಾಯಕನ ಪರಿಚಯವು ಬೆಳೆ ©Yಯುತ್ತ ಹೋದಂತೆ ವಸಂತನ ಮತ್ಸರವೂ ಬೆಳೆಯುತ್ತ ನಡೆಯಿತು. ವಿನಾಯ ಕನ ಮೇಲೆ ಮತ್ಪರಮಾಡಲಿಕ್ಕೆ ವಿನಾಯಕನು ವಸಂತರಾಯನಿಗೆ ಏನೂ ಕೆಡಕು ಮಾಡಿದ್ದಿಲ್ಲ; ಆದರೂ ಚಿಂತಾಮಣಿರಾಯನ ಬಂಗಲೆಯಲ್ಲಿ ವಿನಾಯಕನ ಪ್ರವೇಶ ವಾದಂದಿನಿಂದ ವಸಂತನಿಗೆ ವಿನಾಯಕನು ಶಲ್ಯದಂತೆ ತೋರಹತ್ತಿದನು. ವಸಂತನೂ ಹಾಗೂ ಹೀಗೂ ಮಾಡಿ ಚಿಂತಾಮಣಿರಾಯನಿಂದ ಪ್ರತಿತಿಂಗಳಿಗೆ ಎಪ್ಪತ್ತೈದು ರೂಪಾಯಿ ಪಗಾರವನ್ನು ದೊರಕಿಸುತ್ತಿದ್ದನು. ಆ ದೃಷ್ಟಿಯಿಂದ ಅವನು ಚಿಂತಾಮಣಿ ರಾಯನಲ್ಲಿ ದೊಡ್ಡ ಹುದ್ದೆದಾರನಾಗಿದ್ದನೆಂಬಂತಿಲ್ಲ; ಆದರೂ ವಸಂತನು ತಾನು ಸುಧಾರಣೆಯ ಕಟ್ಟಭಿಮಾನಿಯಾಗಿದ್ದುದರಿಂದ ಚಿಂತಾಮಣಿರಾಯನಂಥ ಸುಧಾ ರಣಾಪ್ರಿಯ ಗೃಹಸ್ಥನಿಗೆ ಒಳ್ಳೆ ಪ್ರಿಯಕರನೆಂದು ತಪ್ಪು ತಿಳುವಳಿಕೆ ಮಾಡಿಕೊಂಡಿ ದ್ದನು. ತನ್ನ ಯುರೋಪಿಯನ್ ಪೋಷಾಕಕ್ಕೆ ಅಲ್ಲಿ ಬಹಳ ಮಾನವದೆಯೆಂದು ಅವ ನಿಗೆ ಭ್ರಮೆಯಾದಂದಿನಿಂದ ಅವನು ಯುರೋಪಿಯನ್ ಪೋಷಾಕು, ಯುರೋಪಿ ಯನ್ ನಡೆನುಡಿ ಇವುಗಳಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡಲಿಕ್ಕಿಲ್ಲವೆಂದು ದೃಢ ನಿಶ್ಚಯ ಮಾಡಿದ್ದನು, ಆದರೆ ಇದರಿಂದ ವಸಂತಮೂರ್ತಿಯು ಜನರ ಉಪಹಾಸಕ್ಕೆ ಮಾತ್ರ ಪಾತ್ರವಾಗಿದ್ದಿತು, ಅವನ ಕಲ್ಲಿದ್ದಲಿಯಂತೆ ಮಿರಿಮಿರಿ ಮಿಂಚುವ ಕಪ್ಪು ಬಣ್ಣವೂ, ಬಾಯಿ ತೆಗೆದ ಕೂಡಲೆ ಕಾರ್ಮೋಡದ ಮಿಂಚಿನಂತೆ ಕಾಣುವ ಹಲ್ಲು ಗಳೂ, ಹುರಿಮಾಡಿದ ಮೀಶಿಯ, ಅಚ್ಛ ನೀರಿನಹಣ್ಣಿನ ಬಣ್ಣವನ್ನು ತಿರಸ್ಕರಿಸುವ ತುಟಿಗಳೂ, ಕ್ರಾಪಿನಿಂದ ಯುಕ್ತವಾದ ತಲೆಯ, ಮಸೀದೆಯ ಮೇಲಿರುವ ಗುಮಟ ದಂತ ತಲೆಯ ಮೇಲಿದ್ದ ಟೊಪ್ಪಿಗೆಯ ಎಂದೂ ನಗದೇ ಇದ್ದ ಜನರನ್ನು ನಗಿಸುತ್ತಿ ದ್ದವು; ಇವು ಬೇಕಾದಂಥ ದುಃಖಿತ ಮನುಷ್ಯನಿದ್ದರೂ, ಚಿಂತಾಯುಕ್ತ ಮನುಷ್ಯ ನಿದ್ದರೂ ಅವನನ್ನು ಸ್ವಲ್ಪಾದರೂ ನಗಿಸದೆ ಬಿಡುತ್ತಿದ್ದಿಲ್ಲ. ಆದರೂ ವಸಂತನು ತಾನು ಬಹು ಸುಂದರನೆಂದು ತಿಳಕೊಂಡಿದ್ದನು. ಇಷ್ಟೇ ಅಲ್ಲ, ತನ್ನ ಈ ಪೋಷಾಕು, ತನ್ನ ಈ ಇಂಗ್ರೇಜೀ ಮಾತಾಡುವ ಪದ್ದತಿ, ತನ್ನ ಈ ಸೌಂದರ್ಯ ಇವುಗಳಿಂದ ದಿವ್ಯಸುಂದರಿಯ ಮನಸ್ಸಿನಲ್ಲಿ ವಿಶೇಷ ಪರಿಣಾಮವುಂಟಾಗಿ ಅವಳು ತನ್ನನ್ನು ಏನೋ ಬೇರೊಂದು ಪ್ರೇಮಮಯದೃಷ್ಟಿಯಿಂದ ನೋಡುತ್ತಿದ್ದಾಳೆಂದು ಅವನಿಗೆ ಸಂಶಯವು