ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ YYYYYYYYY ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, wwwsvvvvvvv vvvvv ಮಾಡಿ, ಆ ವೇಳೆಯಿಂದ ರಾತ್ರಿ ಹನ್ನೊಂದು ಹೊಡೆಯುವ ತನಕ ಪೂಜಾಪುನಸ್ಕಾರ, ಪಠಣಪಾಠಣ ಮೊದಲಾದ ಕೆಲಸಗಳನ್ನು ಎಡಬಿಡದೆ ಮಾಡುತ್ತಿದ್ದಳು, ನರ್ಮದೆಯ ಅಲ್ಪ ಸ್ವಲ್ಪ ವಿಶ್ರಾಂತಿಯ ವೇಳೆಯೆಂದರೆ ದಿವ್ಯಸುಂದರಿಯ ಕೂಡ ಮಾತಾಡುವದೇ ಅಗಿದ್ದಿತು. ಆ ವೇಳೆಯನ್ನಾದರೂ ಅವಳು ವ್ಯರ್ಥ ಹೋಗಗೊಡುತ್ತಿದ್ದಿಲ್ಲ. ದಿವ್ಯ ಸುಂದರಿಯ ಮೇಲೆ ಪವಿತ್ರ ಪ್ರೇಮವು ಬಹಳವಾಗಿದ್ದಿತು. ದಿವ್ಯಸುಂದರಿಯ ಸರಳ ಮನಸ್ಸು ಅವಳ ಮನಸ್ಸಿಗೆ ಬಹಳವಾಗಿ ಬಂದಿದ್ದಿತು. ದಿವ್ಯಸುಂದರಿಗೆ ತಾನು ಶ್ರೀಮಂತರ ಮಗಳೆಂಬ ಬಗ್ಗೆ ಸ್ವಲ್ಪಾದರೂ ಅಭಿಮಾನವಿಲ್ಲದ್ದನ್ನು ನೋಡಿ ಅವಳ ವಿಷಯವಾಗಿ ನರ್ಮದೆಯ ಮನಸ್ಸಿನಲ್ಲಿ ಆದರವ ಹುಟ್ಟಿದ್ದಿತು, ನರ್ಮದೆ ಯಂತ ದಿವ್ಯಸುಂದರಿಯ ಹೃದಯದಲ್ಲಿಯೂ ನರ್ಮದಾಮಯ ಆದರಭಾವವು ತುಂಬಿ ಹೋಗಿದ್ದಿತು. ವಿಶೇಷತಃ ನರ್ಮದೆಯು ಇಂಥ ಪ್ರಾಯದಲ್ಲಿ ವಿಧವೆಯಾಗಿದ್ದರೂ ಅವಳು ಯಾವಾಗಲೂ ಸಮಾಧಾನದಿಂದ ಇರುವದನ್ನು ನೋಡಿ ದಿವ್ಯ ಸುಂದರಿಗೆ ಪರಮಾಶ್ಚರ್ಯವಾಗುತ್ತಿದ್ದಿತು. ನರ್ಮದೆಯ ಪಾರಮಾರ್ಥಿಕ ವಿಚಾರವನ್ನು ಒಂದೇ ಸವನೆ ಕೇಳುತ್ತ ಕೂಡ್ರಬೇಕೆಂದು ದಿವ್ಯಸುಂದರಿಗೆ ತೋರುತ್ತಿದ್ದಿತು, ನರ್ಮದೆಯು ಬಂದಳೆಂದರೆ ದಿವ್ಯಸುಂದರಿಗೆ ಪರಮಾನಂದವಾಗುತ್ತಿದ್ದಿತು. ಒಂದು ವೇಳೆ ಅವಳು ಒಂದು ದಿವಸ ಬರಲಿಲ್ಲವೆಂದರೆ ದಿವ್ಯಸುಂದರಿಗೆ ಹಳಹಳಿಯಾಗುತ್ತಿದ್ದಿತು. ಕಳೆದ ನಾಲೈದು ದಿನ ಏನೋ ಕಾರಣದ ನಿಮಿತ್ತವಾಗಿ ನರ್ಮದೆಯು ತನ್ನ ಬಳಿಗೆ ಬಾರದ್ದರಿಂದ ದಿವ್ಯಸುಂದರಿಗೆ ಅಸಮಾಧಾನವಾಗಿದ್ದಿತು. ಆದರೂ ಅದು ವಿನಾಯಕನ ಆಗಮನಲಾಭದಿಂದ ಕೆಲವಂಶ ಕಡಿಮೆಯಾಗಿದ್ದಿತು, ನರ್ಮದೆಯ ವಿಚಾರದಂತ ವಿನಾಯಕನ ವಿಚಾರವೂ ಉದಾತ್ತವಾದದ್ದೆಂದು ದಿವ್ಯಸುಂದರಿಗೆ ತಿಳಿದುಬಂದದ್ದರಿಂದ ಆ ವಿಚಾರವನ್ನು ನರ್ಮದೆಗೆ ಯಾವಾಗ ಹೇಳೇನೆಂದು ದಿವ್ಯ ಸುಂದರಿಯು ಹಾತರಿಯುತ್ತಿದ್ದಳು, ಈ ಮುಂಚೆಯೇ ನರ್ಮದೆಗೂ ವಿನಾಯಕನ ವಿಷಯವಾದ ಸಕಲ ಸಂಗತಿಯು ತಿಳಿದದ್ದರಿಂದ ಅವಳಿಗೂ ಅವನ ಸಂಬಂಧವಾಗಿ ಪೂಜ್ಯಭಾವವು ಉತ್ಪನ್ನವಾಗಿದ್ದಿತು. ವಿನಾಯಕನ ಮನೋಹರಮೂರ್ತಿಯು ದಿವ್ಯ ಸುಂದರಿಯ ಹೃದಯಮಂದಿರದಲ್ಲಿ ಪ್ರಸ್ತಾಪಿತವಾಗಿರುವದನ್ನು ನೋಡಿ ನರ್ಮದೆಗೆ ಸಮಾಧಾನವಾಯಿತು, ಆದರೆ ದಿವ್ಯಸುಂದರಿಯು ಶ್ರೀಮಂತರ ಮಗಳು, ವಿನಾಯಕನು ಬಡವರ ಮಗನು, ಎಂಬ ಕಾರಣದಿಂದ ಇವರ ಸಂಬಂಧವಾಗುತ್ತದೆಯೋ ಇಲ್ಲೋ ಎಂದು ಸಂಶಯ ಬರಲು ಅವಳಿಗೆ ಸ್ವಲ್ಪ ನಿರಾಶೆಯೂ ಆಯಿತು. ದಿವ್ಯಸುಂದರಿಗೆ ( ಅಶ್ರುವಾಹಿನೀ ' ಎಂದು ನರ್ಮದೆಯು ಅಂದಕೂಡಲೆ ಅವಳು ನಾಚಿದಳು, ನರ್ಮದೆಗೆ ಉತ್ತರವೇನು ಕೊಡಬೇಕೆಂಬುವದು ತಿಳಿಯದ್ದರಿಂದ ಆವಳು ಸುಮ್ಮನೆ ಕುಳಿತಳು. ಆಗ ನರ್ಮದೆಯು:-( ದಿವ್ಯಸುಂದರಿ, ಕಣ್ಣುಗಳ