ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ-ಸಖಿ ಸಂದರ್ಶನ! •••••••••••• ••••••••••••••• ಮೇಲೆ ಅಶ್ರುರೂಪವಾದ ದುರ್ಬಿನಿನ ಕನ್ನಡಿಯನ್ನು ಇಟ್ಟು ಏನು ಅಂಥಹದನ್ನು ನಿರೀಕ್ಷಣಮಾಡುತ್ತಿದ್ದಿ? ” ಎಂದಳು. ದಿವ್ಯಸುಂದರಿಯ ಸ್ವಭಾವವು ಮೊದಲೇ ಸರಳವಾದದ್ದು, ಅಸತ್ಯ ಮಾತೇ। ಅವಳು ಅರಿಯಳು, ಮೇಲಾಗಿ ಆ ಪ್ರಶ್ನೆಯು ನರ್ಮದೆಯಂಥ ಪ್ರೀತಿಯ ಸಖಿಯದು. ಕಾರಣ ನರ್ಮದೆಗೆ ಉತ್ತರಗೊಡಲಿಕ್ಕೆ ಅವಳಿಗೆ ನಾಚಿಕೆಯೆನಿಸಿತು; ಆದರೂ ಅವಳು ನಿಜವಾದ ಉತ್ತರವನ್ನು ಕೊಟ್ಟಳು. ಅವಳು:-( ನರ್ಮದೆ, ಇಂದು ವಿನಾಯಕ ರಾಯರಿಗೆ ನಿರೋಪಗೊಡುವ ಕಾಲಕ್ಕೆ ಕಣ್ಣುಗಳು ಅಶ್ರುಗಳಿಂದ ತುಂಬಿಬಂದವು. ಈ ಕಣ್ಣೀರುಗಳು ಯಾಕೆ ಬರುತ್ತವೆಂಬುವದು ನನಗೆ ತಿಳಿಯಲೊಲ್ಲದು. ಒಮ್ಮೊಮ್ಮೆ ನಿನ್ನ ಸಂಬಂಧವಾಗಿಯೂ ಕೂಡ ಮನಸ್ಸಿನಲ್ಲಿ ಯಾವದೊಂದು ವಿಚಾರವು ಬಂದರೆ, ತಟ್ಟನೆ ಕಣ್ಣಲ್ಲಿ ಕಣ್ಣೀರು ಉದುರುತ್ತವೆ, ನರ್ಮದೆ, ನಡೆ, ನನ್ನ ದಿವಾಣಖಾನೆಯಲ್ಲಿ ಮಾತಾಡುತ್ತ ಕೂಡೋಣ. ” ಹೀಗನ್ನುತ್ತ ನರ್ಮದೆಯ ಕೈಯನ್ನು ಹಿಡಕೊಂಡು ದಿವಾಣಖಾನೆಗೆ ಬಂದಳು, ಅಲ್ಲಿ ಇಬ್ಬರೂ ಸಮೀಪದಲ್ಲಿರುವ ಖುರ್ಚೆಗಳ ಮೇಲೆ ಕುಳಿತುಕೊಂಡು ಮಾತಾಡಹತ್ತಿದರು. ದಿವ್ಯ:-( ನರ್ಮದೆ, ಕಣ್ಣುಗಳಿಂದ ಹೀಗೆ ಕಣ್ಣೀರುಗಳು ಯಾಕೆ ಬರುತ್ತವೆ? ಬರುವದು ಹಿತಕ್ಕೋ ಅಹಿತಕ್ಕೊ? ” ನರ್ಮದೆ:- ದಿವ್ಯಸುಂದರಿ, ಕಣ್ಣೀರುಗಳ ಯೋಗ್ಯತೆಯು ಬಹಳ ದೊಡ್ಡ ದಿರುತ್ತದೆ. ಪ್ರತ್ಯೇಕ ಅಶ್ರು ಬಿಂದುವಿನ ಸಲುವಾಗಿ ಅಂತಃಕರಣದೊಳಗಿನ ಬೇರೆ ಬೇರೆ ಮನೋವೃತ್ತಿಗೆ ಹೆಚ್ಚು ಕಡಿಮೆ ಬೆಲೆಯನ್ನು ಕೊಡಬೇಕಾಗುತ್ತದೆ. ಹೀಗೆ ಬೆಲೆ ಯನ್ನು ಕೊಟ್ಟ ಹೊರ್ತು ಕಣ್ಣುಗಳಿಂದ ಒಂದು ಅಶ್ರು ಬಿಂದುವಾದರೂ ಬೀಳುವದಿಲ್ಲ. ಹರ್ಷ, ಶೋಕ ಮೊದಲಾದ ವಿಕಾರಗಳ ಪ್ರವಾಹವು ಹೃದಯದಲ್ಲಿ ಹರಿಯಿತೆಂದರೆ, ಆಗ ಹೃದಯವು ಸಿಗ್ಗಮಯವಾಗುತ್ತದೆ. ಆ ಸಿಗ್ಧತೆಯೇ ಕಣ್ಣುಗಳಿಂದ ಅಶ್ರುರೂಪ ವಾಗಿ ಹೊರಬೀಳುತ್ತದೆ. ಯಾರ ಕಣ್ಣುಗಳಿಂದ ಇಂಥ ವಿಶೇಷ ಪ್ರಸಂಗದಲ್ಲಿಯೂ ಕೂಡ ಕಣ್ಣೀರು ಸುರಿಯುವದಿಲ್ಲವೋ ಅವರಿಗೆ ಜನರು ಪಾಷಾಣಹೃದಯರೆಂದು ಅನ್ನುತ್ತಾರೆ. ಒಮ್ಮೊಮ್ಮೆ ಈ ಪಾಷಾಣಹೃದಯರೂ ಕೂಡ ಅನುತಾಪದಿಂದ ದಗ್ಗ ರಾಗುತ್ತಾರೆ, ಮತ್ತು ಈ ದಗ್ಧತೆಯನ್ನು ಶಾಂತಮಾಡುವದರ ಸಲುವಾಗಿ ಅವರಿಗೆ ಅಶ್ರುಗಳನದ ಹೊರ್ತು ಎರಡನೇ ಉಪಾಯವೇ ಉಳಿಯುವದಿಲ್ಲ. ದಿವ್ಯಸುಂದರಿ, ಈಗ ತಿಳಿಯಿತೇ ? ವಿನಾಯಕರಾಯರಿಗೆ ನಿರೋಪಗೊಡುವ ಕಾಲಕ್ಕೆ ಕಣ್ಣಿರುಗಳು ಯಾಕೆ ಬಂದವೆಂಬುವದು. ” ದಿವ್ಯ:-( ತಿಳಿಯಿತು. ಅದಿರಲಿ, ಹಿಂದಿನ ಸಂವಾದದಲ್ಲಿ ನಿರಾಕಾರ ಸಾಕಾರ ಗಳ ಪ್ರಸ್ತಾಪವು ಹೊರಟಿದ್ದಿತಷ್ಟೆ? ಯಾರಿಗೆ ಪರಮಾತ್ಮನ ನಿರಾಕಾರತ್ವದ ಬಗ್ಗೆ