ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ. MMAAAAAAAAAAAAAAAANNIA ಹಿಂf\ AAAAAAAAAM ಹೊಂದಿರುವದು ಮೇಲೆ ದೃಷ್ಟಿಗೆ ಬೀಳುತ್ತದೆ, ಇದಕ್ಕೆ ಈ ಜನರಲ್ಲಿ ಆತ್ಮವಿಶ್ವಾಸವಿಲ್ಲದಿರುವದೇ ಮೂಲಮಂತ್ರವಾಗಿದೆ. ಸ್ವಾರ್ಥ, ಕ್ರೋಧ, ಮತ್ಸರ, ಕಲಹ ಮೊದಲಾದವುಗಳಿಂದ ವಿವ ಶರಾದ ಜನರು ಯಾವ ಕಾರ್ಯದಲ್ಲಿಯೂ ಯಶೋವಂತರಾಗ ಲಿಕ್ಕೆ ಸಮರ್ಥರೆನಿಸುವದಿಲ್ಲ. ಜ೦ ಥ ಜನರು ಬೇಕಾದಷ್ಟು ಸಂಸ್ಥೆ ಗಳನ್ನು ಸ್ಥಾಪಿಸಿದರೂ ಅವು ಸ್ವಲ್ಪ ದಿನದಲ್ಲಿಯೇ ಮುರಿದು ಮೂಲೆ ಗುಂಪಾಗಿ ಬೀಳುವದು ಅರಿದಲ್ಲ. ಯಶಃ ಪ್ರಾಪ್ತಿಗಿಂತಲೂ ಸ್ವಾರ್ಥವೇ ಹೆಚ್ಚಾಗಿ ತೋರುವ ಉದ್ಯೋಗವು ಯಶಸ್ವಿಯಾದ ದ್ದರ ಉದಾಹರಣೆಯು ಒಂದೂ ಸಿಗುವದಿಲ್ಲ, ನನ್ನು ಹಿಂದು ಸ್ತಾನದೊಳಗಿನ ಎಷ್ಟೋ ಅಹಂ ಅಹಂ ಎಂಬ ಸಂಸ್ಥೆಗಳು ಕೇವಲ ಸ್ವಾರ್ಥಪರಾಯಣರಾದ ಅವಿಶ್ವಾಸಿ ಜನರ ಕೃತಿಯಿಂದ ಮುಳುಗಿಹೋದ ಅನೇಕ ಉದಾಹರಣೆಗಳನ್ನು ತೋರಿಸಬ ಹುದು. ಕಾರ್ಯದಲ್ಲಿ ಜಯಪ್ರದವಾಗಬೇಕೆನ್ನುವವರು ಸ್ವಾರ್ಥ, ಅವಿಶ್ವಾಸ, ದ್ವೇಷ, ಮತ್ಸರ ಮೊದಲಾದ ದುರ್ಗುಣಗಳನ್ನು ದೂರೀಕರಿಸಿ ಉದ್ಯೋಗವನ್ನು ಆರಂಭಿಸಲಿಕ್ಕೆ ಬೇಕು, ಮಾನಾಸ ಮಾಡದವಿಷಯಕ್ಕೆ ಲಕ್ಷಗೊಡದೆ ಮಾನಸಿಕ ಶಾರೀರಿಕ ಸರ್ವ ಶಕ್ತಿಗಳನ್ನು ಆ ಉದ್ಯೋಗದಲ್ಲಿಯೇ ಖರ್ಚು ಮಾಡಲಿಕ್ಕೆ ಬೇಕು. ಮನಸ್ಸನ್ನು ಫಲಾಶೆಯಲ್ಲಿ ತೊಡಗಿಸದೆ, ಅದನ್ನು ಆ ಕಾರ್ಯ ದಲ್ಲಿಯೇ ಸ್ಥಿರಗೊಳಿಸಬೇಕು, ಪಾಶ್ಚಾತ್ಯ ದೇಶದಲ್ಲಿ ಯಶಸ್ವಿಗಳಾ ದಂಥ ಕಲ್ಪಕ ಮತ್ತು ಕಾರಖಾನೆದಾರರ ಚರಿತ್ರೆಯಲ್ಲಿ ಕಲಿಯ ತಕ್ಕ ವಿಷಯವೆಂದರೆ ಇದೇ ವಿಷಯವಾಗಿದೆ. ತ್ಯಾಗವು ಮನು ಪ್ಯನ ಸರ್ವಸ್ವವಾಗಿದೆ; ಆದರೆ ನಮ್ಮಲ್ಲಿ ಎಷ್ಟೋ ಜನರು ನಿಶ್ವಾರ್ಥ ವೃತ್ತಿಯನ್ನು ತ್ಯಾಗಮಾಡಿ ಸ್ವಾರ್ಥಶಿಖರದ ಮೇಲೆ ಹೋಗಿ ಕುಳಿ ತಿರುತ್ತಾರೆ, ಮತ್ತು ಅಲ್ಪ ಲಾಭಕ್ಕಾಗಿಯೇ ಅವರು ತಮ್ಮ ಪ್ರಖರವಾದ ಮನೋಬಲವನ್ನು ಮಲಿನ ಮಾಡಿಕೊಳ್ಳುತ್ತಾರೆ. ವಿನಾಯಕನು ಇಂಥ ಕ್ಷುದ್ರ ಸ್ವಾರ್ಥದಿಂದ ನೂರಾರು ಹರದಾರಿ ದೂರದಲ್ಲಿದ್ದನು. ಅವನು ಆತ್ಮವಿಶ್ವಾಸದಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡಿದ್ದಿಲ್ಲ. ನನ್ನ ಹತ್ತರ ದುಡಿಲ್ಲ, ನನ್ನ ಹತ್ತರ ಮನುಷ್ಯಬಲವಿಲ್ಲ, ನಾನು ಹೇಗೆ ಮಾಡಬೇಕು, ಏನು