ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. ದ ಹರಿದು ಉಡಿಯಲ್ಲಿ ಹಾಕಿಕೊಂಡು ಬಂದಿದ್ದಳು, ಅವನ್ನು ಈಗ ಬೊಗಸೆಯಲ್ಲಿ ಹಾಕಿ ಕೊಂಡಳು. ಈ ಸಾಯಂಕಾಲದ ವೇಳೆಯಲ್ಲಿ ವನದೇವತೆಯಂತೆ ಕಾಣಿಸುತ್ತಿದ್ದ ಆ ಸುಂದರಿಯಾದ ಇಂದಿರೆಯ ಪ್ರತಿಮೆಯನ್ನು ಕುಶಲಚಿತ್ರಕಾರನು ಒಳ್ಳೆ ಕೌಶಲ್ಯ ದಿಂದ ತೆಗೆಯುತ್ತಿದ್ದನು. ಉದ್ವೇಗಭರದಿಂದ ಇಂದಿರೆಯು:-( ಬರುವಾಗ ಈ ಹೂವುಗಳನ್ನು ವಿನಾಯಕರಾಯರಿಗೆ ಕೊಡುವದರ ಸಲುವಾಗಿ ತಂದಿದ್ದೆನು; ಆದರೆ ಇಲ್ಲಿಗೆ ಬಂದ ಮೇಲೆ ಏನಾಯಿತೋ ಏನೋ, ಇವುಗಳನ್ನು ಅವರಿಗೆ ಕೊಡಲಿಕ್ಕೆ ಧೈರ್ಯವೇ ಆಗಲಿಲ್ಲ. ವಿನಾಯಕರಾಯ, ನಿಮ್ಮ ಸಲುವಾಗಿ ತಂದ ಈ ಹೂವುಗ ಳನ್ನು ನಿಮಗೇ ಅರ್ಪಿಸುತ್ತೇನೆ. ?” ಎಂದನ್ನುತ್ತ ವಿನಾಯಕನು ಹೋಗುವ ದಿಕ್ಕಿಗೆ ಆ ಹೂವುಗಳನ್ನು ಒಗೆದಳು, ಅನಂತರ ಸ್ವಲ್ಪ ಹೊತ್ತು ಸುಮ್ಮನಿದ್ದು ಅವಳು ದೀರ್ಘ ಶ್ವಾಸಬಿಟ್ಟು ತನ್ನಷ್ಟಕ್ಕೆ ತಾನೇ:- ಅವರು ನನಗೆ - ನೀನು ಯಾರಸಂಗಡ ಲಗ್ನ ವಾ ಗುವದನ್ನು ನಿಶ್ಚಯಿಸಿರುವಿ ' ಎಂಬದಾಗಿ ಮೂರು ನಾಲ್ಕು ಸಾರೆ ವಿಚಾರಿಸಿದರು. ಆದರೆ ಆ ನನ್ನ ಪ್ರೇಮಮೂರ್ತಿಯ ಹೆಸರನ್ನು ಹೇಳಿದರೆ ಅವರು ಮನಸ್ಸಿಗೆ ಅಸ ಮಾಧಾನ ಮಾಡಿಕೊಂಡಾರೆಂದು ಬಿಟ್ಟೆನು; ಯಾಕಂದರೆ ಆ ಹೆಸರು ವಿನಾಯಕರಾ ಯರ ಹೊರ್ತು ಬೇರೆಯಿದ್ದಿಲ್ಲ. ನನ್ನದೇ ತಪ್ಪಾಯಿತು, ಯಾವ ಕಾಲದಲ್ಲಿ ತಂದೆಯ ಕಾರಾಗೃಹದಿಂದ ಅವರ ಬಿಡುಗಡೆಯಾಯಿತೋ, ಅದೇ ಕಾಲದಲ್ಲಿ ಅವರ ಕಡೆ ಯಿಂದ ವಿವಾಹವಚನವನ್ನು ತೆಗೆದುಕೊಂಡಿದ್ದರೆ ಇಂದು ಅದೇ ಮಾತನ್ನು ಅವರಿಗೆ ನಿರ್ಭೀತಮನಸ್ಸಿನಿಂದ ಕೇಳಲಿಕ್ಕೆ ಬರುತ್ತಿದ್ದಿ ತು; ಆದರೆ ಒಬ್ಬರಿಗೆ ಪ್ರತ್ಯಾಶೆಯಿಂದ ಪರೋಪಕಾರ ಮಾಡುವದು ಅನುಚಿತವಾದದ್ದೆಂದು ಆ ವೇಳೆಯಲ್ಲಿ ನಾನು ಹಾಗೆ ಮಾಡಲಿಲ್ಲ. ಈಗ ಏನಾಗುವದೋ ಏನೋ, ಅವರಿಗೆ ವಿಚಾರಿಸುವ ಧೈರ್ಯವೇ ಆಗಲೊಲ್ಲದು, ಸ್ವಲ್ಪ ದಿವಸಗಳ ಪೂರ್ವದಲ್ಲಿ ಒಬ್ಬ ಗೃಹಸ್ಥನೊಡನೆ ತಂದೆಯ ಸಂಭಾ ಷಣವು ನಡೆದಾಗ ಚಿಂತಾಮಣಿರಾಯರ ಪುತ್ರಿ ದಿವ್ಯಸುಂದರಿಯೊಡನೆ ವಿನಾಯಕ ರಾಯರ ಲಗ್ನವಾಗುವದಾಗಿ ಪ್ರಸ್ತಾಪವು ಹೊರಟಿದ್ದಿ ತು, ನನಗಿಂತ ದಿವ್ಯಸುಂದ ರಿಯು ಸುಂದರಳೂ, ಸುಶೀಲಳೂ ಇರಬಹುದೇ ? ಒಂದು ವೇಳೆ ನಾನು ಅವಳಿಗಿಂತ ಸುಂದರಿಯಿದ್ದರೂ, ಆ ಸೌಂದರ್ಯಕ್ಕೆ ನನ್ನಿ ಸುವದೆಂತು ? ನಾನು ಸ್ವತಃ ಶರೀರ ಮನಸ್ಸು ಗಳಿಂದ ನಿರ್ಮಲಳಿದ್ದೇನೆ, ಮತ್ತು ಇದರಂತೆಯೇ ಯಾವಞ್ಞೇವ ನಿರ್ಮಲ ಳಾಗಿರುತ್ತೇನೆ, ಆದರೆ ನನ್ನಿ ನಿರ್ಮಲತ್ವವು ವಿನಾಯಕರಾಯರ ಮನಸ್ಸನ್ನು ನನ್ನ ಕಡೆಗೆ ಹೇಗೆ ತಿರುಗಿಸಬೇಕು ? ಮೊದಲೇ ಇವಳು ಶಾಮರಾಯನ ಪ್ರತಿ, ಅದರಲ್ಲಿ ನೀಲಕಂಠರಾಯನೊಡನೆ ಲಗ್ನವಾಗಿದ್ದಾಳೆ; ಎಂಬ ಕಾರಣಗಳಂತೂ ನನ್ನ ವಿಷಯ ದಲ್ಲಿ ತಿರಸ್ಕಾರ ಮಾಡಲಿಕ್ಕೆ ಸಂಪೂರ್ಣ ಸಮರ್ಥವಿರುತ್ತವೆ. ದೇವಾ, ಈ ಇಂದಿರೆಯ ಜನ್ನವೆಲ್ಲ ಹೀಗೆಯೇ ಶೂನ್ಯವಾಗಿ ಹೋಗಬೇಕೇ ? ವಿನಾಯಕರಾಯ, ನೀವು ಈ ಇಂದಿರೆಯನ್ನು ಸ್ವೀಕಾರ ಮಾಡಲಿಕ್ಕಿಲ್ಲವೆಂದು ನನಗೆ ನಂಬಿಗೆಯಿದ್ದು ದರಿಂದಲೇ