ಪುಟ:ದಿವ್ಯ ಪ್ರೇಮ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೋದಳು. ಶೋಕಾವನ್ನು ನಡುನೀರಿನಲ್ಲಿ ಕೈಬಿಟ್ಟು ಹೊರಟಳು, ಆಕೆ ಹೋಗುವಾಗ ಎಲ್ಲಿಗೆ ಹೂಗುವೆ ಎಂದು ನೃತೇಶ ಕೇಳಿದ ಆಕೆ, ಮಗು ಅಲ್ಲಿ ಪರಿಚಯದವನೊಬ್ಬನಿದ್ದಾನೆ, ಸದ್ಯ ಅಲ್ಲಿಗೆ ಹೂಗುವದಾಗಿಯೂ, ನಂತರ ಇನ್ನೊಂದು ಕೆಲಸ ಹುಡುಕುವದಾಗಿಯೂ ತಿಳಿಸಿದಳು. ನೃಪೇಶನಿಗೆ ಸಂಕಟಕ್ಕಿಟ್ಟು ಕೊಂಡಿತು, ಮೊಕಾ ಅವನನ್ನು ಬಿಡು ೬ರಲೇ ಇಲ್ಲ. ಊಟಮಾಡುವದಕ್ಕೂ ಸ್ನಾನಮಾಡುವದಕ್ಕೂ, ಮಲಗ ಲಿಕ್ಕೂ ಸಮಯ ಸಿಕ್ಕುವಂತಿರಲಿಲ್ಲ. ಈ ಮೂರು ಕೆಲಸಗಳನ್ನು ಬಿಟ್ಟರೂ ಬಿಡಬಹುದಾಗಿತ್ತು. ಆದರೆ ಕೆಲಸಕ್ಕೆ ಹೋಗುವದಕ್ಕೆ ಬಿಡುವದು ಸಾಧ್ಯ ವಿರಲಿಲ್ಲ. ಅಂದು ಆಹಾರವೇನೋ ಚೆನ್ನಾಗಿತ್ತು; ಹರನಾಥನಿಗೆ ಮನಸ್ಸಿನಲ್ಲಿಯೇ ಅಭಿನಂದನೆಗಳನ್ನರ್ಪಿಸುತ್ತ ಊಟಮಾಡಿ ಖೋಕಾನನ್ನು ಹರನಾಥನಿಗೆ ಒಪ್ಪಿಸಿ ಹನ್ನರರು ಘಂಟಿಗೆ ನೃಪೇಶ ಕಚೇರಿಗೆ ಹೋದ ನೃಪೇಶ ಬರುವ ವರೆಗೆ ಹರಸುಥ ಅಳುತ್ತಿರುವ ಬೋಕಾನನ್ನು ಹೊತ್ತು ಬೀದಿ ಬೀದಿ ತಿರುಗಿ ಬಂದು ಆತನನ್ನು ನೃಪೇಶನಿಗೆ ಒಪ್ಪಿಸಿ ಸಂಜೆಯ ಅಡಿಗೆಮಾಡಿ ಇಬ್ಬರಿಗೂ ಊಟಕ್ಕೆ ಹಾರ್ಕಿ, ನಾಗ! ಬೋಕಾ ಇಡೀಯ ದಿನ ಅತ್ತು ಅತ್ತು ಬೇಸತ್ತಿ ರಬೇಕು, ದಖುವೂ ಆಗಿದ್ದಿರಬೇಕು; ನೃಪೇಶ ಹಾಸಿಗೆಯ ಮೇಲೆ ಹಾಕಿ ಒಂದು ಕ್ಷಣ ತಟ್ಟುತ್ತಿರುವದರಲ್ಲಿಯೇ ಮಲಗಿ ನಿದ್ರೆ ಹೋದ. ಇಂದು ರಾತ್ರಿ ಚೆನ್ನಾಗಿ ತಾನೂ ನಿದ್ರೆ ಮಾಡಬಹುದೆಂದು ನೃಪೇಶನೂ ಮಗ್ಗುಲ ಲ್ಲಿಯೇ ಮಲಗಿದ, ಆದರೆ ನೃಪೇಶ ತರ್ಕಿಸಿದಂತ ಶೋಕಾ ಇಡೀಯ ಇರಳು ಮಲಗಲಿಲ್ಲ. ಸರಿರಾತ್ರಿಗೆ ಸಮಾನಾಗಿ ಎಚ್ಚರಿಕೆ ಕೊಡುವ ಗಡಿಯಾರದಂತೆ ಕಿರುಚಲಿಕ್ಕ ಮೊದಲುಮಾಡಿದ. ನೃಪೇಶ ಎಚ್ಚತ್ತು ಆತನನ್ನು ಹರನಾಥನ ಕೈಗಾದರೂ ಕೊಟ್ಟರಾಯಿತೆಂದು ಹರನಾಥನನ್ನು ಎಷ್ಟು ಸಲ ಕೂಗಿ ಎಬ್ಬಿಸಿದರೂ ಅವನು ಏಳಲಿಲ್ಲ ಅಷ್ಟೊಂದು ಗಾಢನಿದ್ರೆ ಅವನನ್ನು ಆವರಿಸಿತ್ತು. ನೃಪೇಶನೇ ಬೋಕಾನನ್ನು ಎತ್ತಿಕೊಂಡು ಅತ್ತಿಂದಿತ್ತ ತಿರುಗಾಡಿದ, ಆದರೂ ಆತನ ದುಃಖಶಮನವಾಗಲಿಲ್ಲ. ನಡುನಡುವ ಬಿಕ್ಕಿಸುತ್ತಿದ್ದ. ಸತಿ ತಾಯಿಯ ನೆನಪು ಆಗುತ್ತಿರಬೇಕು: ಪಾರ ತಾಯಿ ಮಗು! ಇವನು ಇನ್ನೂ ಕೆಲ