ಕಾರಣವಿತ್ತು. ಆ ಎಳೆಯರ ಅಕ್ಕನೊಬ್ಬಳು ಮಹಾರಾಣೀಸ್ ಕಾಲೇಜಿನಲ್ಲಿ ಓದು ತಿದ್ದಳು, ಬಿ.ಎ ತರಗತಿಯಲ್ಲಿ. ವಯಸ್ಸಿನಲ್ಲಿ ಪ್ರಾಯಶಃ ತನಗಿಂತ ಚಿಕ್ಕವಳು.ಆದರೆ ಹಳ್ಳಿಯವನಾದ ತನಗಿಂರತಲೂ ಬೇಗನೆ ಆಕೆ ಅಧ್ಯಯನ ಆರಂಭಿಸಿರಬೇಕು. ಸು೦ದರಿ, ಶೃಂಗಾರ ಪ್ರಿಯೆ. ಆಕೆ ದ್ರಸ್ಯ ಬಿದ್ದಾಗಲೆಲ್ಲ ಮುರಲೀಧರನಿಗೆ, ತಾನು ಬಡವನೆಂಬುದು ನೆನಪಾಗುತಿತ್ತು. ತನ್ನ ಉಡುಗೆತೊಡುಗೆಯ ವಿಷಯದಲ್ಲಿ ಲಜ್ಜೆ ಎನಿಸುತ್ತಿತ್ತು. ತನ್ನನ್ನು ಆಕೆ ಪ್ರೀತಿಸಬಹುದೆಂದು ಹುಚ್ಚು ಯೋಚ ನೆಯು ಆತನನ್ನು ಕಾಡಿತು.ನವು ಮನೆಗೆ
ಆದರೆ ಆ ಹುಡುಗಿ, ವಿದ್ಯಾರ್ಜನೆಗೂ ಅನುಕೂಲವಿಲ್ಲದ ఆ ವಿದ್ಯಾರ್ಥಿಯ ವಿಷಯದಲ್ಲಿ ಉದಾಸೀನಳಾಗಿಯೆ ಇದ್ದಳು. ಎಳೆಯರು ಪಾಠದ ನಡುವೆ ಅಕ್ಕನ ಪ್ರಸ್ತಾಪವೆತ್ತಿದರೆ, ಅಥವಾ ಹೊರಗೆ ಹೂದೋಟದಿಂದ ಅಕೆಯ ಸ್ವರ ಕೇಳಿಸಿದರೆ, ಮುರಲೀಧರನ ಕಿವಿ నిಮಿರುತಿತ್ತು. ಆತ ಅಂದುಕೊಳೂತ್ತಿದ್ದಮಹ: ಶ್ರೀಮಂತ ಕನ್ಯೆ
ಬಡವನನ್ನು ಪ್ರೀತಿಸಬಾರದು ಎಂದು ಎಲ್ಲಿ ಹೇಳಿದೆ? ಪ್ರೀತಿಗೆ ನಿರ್ಬಂಧಗಳೂ ಉಂಟೆ? ಆತ ಹಾಗೆ ಯೋಚಿಸಿದರೂ ಅವಳ ಮನಸ್ಸಿನಲ್ಲಿ ಮಾತ್ರ ಸವಿಯಾದುದು ಏನೂ ಇರಲಿಲ್ಲ ಆತನಿಗೋಸ್ವರ.
ಟೆಂಪ್ಲೇಟು:Gapದ್ದ್ದ್ದ್ದ್ದ್ದ್ದ್ದ್ದ್ಧ್ಜ್ಝ್ಬ್ಕ್ಕ್ಮುರಲೀಧರನಿಗೆ ಒಮ್ಮೊಮ್ಮೆ ಆಶ್ಚರ್ಯವೆನಿಸುವುದೂ ಇತ್ತು: ಇಷ್ಟೊಂದು ಜನ ವಿದ್ಯಾವಂತರಿರುವ ಆ ಮನೆಯಲ್ಲಿ ಅವರೇ ಯಾಕೆ ಚಿಕ್ಕವರಿಗೆ ಪಾಠ ಹೇಳ ಬಾರದು? ಆಕೆಯೇ ಯಾಕೆ ಆ ಜವಾಬ್ದಾರಿ ಹೊರಬಾರದು? ಆ ಸಮಸ್ಯೆಗೆ ಸ್ವತಃ ಆತನೇ ವಿವರಣೆಯನ್ನೂ ಒದಗಿಸುತ್ತಿದ್ದ: ದೊಡ್ಡವರ ಮನೆಯಲ್ಲಿ ಬೇರೆಯವರಿಂದಲೇ ಪಾಠ ಹೇಳಿಸುವುದು ಪದ್ಧತಿ.
......ಅಣ್ಣನೂ ತಂಗಿಯೂ ಬಂದರು. 'ತಡವಾಯಿತೆ ಸಾರ್?' 'ಬಹಳ ಹೊತ್ತಾಯಿತೆ ಬಂದು?” ಎನ್ನುವ ಒಂದು ಮಾತೂ ಇಲ್ಲ ಹುಡುಗ ಉಣ್ಣೆಯ ಕೋಟು ಧರಿಸಿದ್ದ. ಸೊಂಪಾಗಿ ಬೆಳೆದಿದ್ದ ಮುದ್ದು ಮುಖ, ಹಣೆಯ ಮೇಲೆ ಲಾಸ್ಯವಾಡುತಿದ್ದ ಗುಂಗುರು ಕೂದಲು. ಆ ತುಂಬು ದವಡೆಗಳನ್ನು ಬೆರಳಿನಿಂದ ಮುಟ್ಟ ತಿವಿಯ ಬೇಕೆನ್ನಿಸುತ್ತಿತ್ತು ನೋಡಿದವರಿಗೆ. ಹುಡುಗಿ, ತೊಟ್ಟಿದ್ದ ಲಂಗದ ಮೇಲೆ ಇಡಿಯು ಕೈಗಳ, ಕಾಲರಿದ್ದ, ಸಟರ್ ಧರಿಸಿದ್ದಳು. ಅಕ್ಕನಂತೆಯೇ ಸುಂದರಿ
ಶಾಯಮ್ ಕೇಳಿದ:
"ಮಳೆ నింತೋಯ್ತು,ಅಲ್ಲವೆ ಸಾರ್?"
ಕಿಟಕಿಯಾಚೆಗೆ ಓಡುತ್ತಿತ್ತು ಆತನ ದೃಷ್ಟಿ. ಮಳೆ ಆಗ ಸುರಿಯುತ್ತಿರಲಿಲ್ಲ
ವೆಂದು ಎಷ್ಟೊಂದು ವಿಷಾದವೆನಿಸಿತ್ತು ಅವನಿಗೆ!
“ಹೊಂ."
ನಳಿನಿ ಮಿಸುಕುವ ಬೊಂಬೆಯಂತೆ ಉಪಾಧ್ಯಯರನ್ನೂ ನೋಡುತ್ತ ಕುಳಿತಳು, ಮುರಲೀಧರನ ಜುಬ್ಬ ಒಂದೆರದು ಕಡೆ ಒದ್ದೆಯಾಗಿದ್ದುದನ್ನು