ಪುಟ:ದೀಕ್ಷೆ.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



    ಮುರಲೀಧರ ಊಟ ಮುಗಿಸಿ ಹೊರಬರುವುದರೊಳಗೆ ವಾತಾವರಣದಲ್ಲಿ

ಬದಲಾವಣೆಯಾಗಿಬಿಟ್ಟಿತ್ತು, ಚಂದ್ರನಿರಲಿಲ್ಲ. ಭೀಕರವಾಗಿದ್ದ ಕరియు ಮೋಡಗಳು ಆಕಾಶವನ್ನು ಆಕ್ರಮಿಸಿಕೊಂಡಿದ್ದುವು.

    ಹತ್ತು ದಿನಗಳಿಂದ ಒಂದು ಹನಿಯೂ ಬಿದ್ದಿರಲಿಲ್ಲ. ಇನ್ನೇನು, ಮಳೆಗಾಲ ಕಳೆದಂತೆಯೇ-ಎಂದಿದ್ದರು ಎಲ್ಲರೂ. ಅಷ್ಟರಲ್ಲೇ_
    ಟಪ್ ಟಪೆಂದು ಸದ್ದಾಯಿತು, ಹಗಲೆಲ್ಲ ಕಾದು ಕಾವೇರಿದ್ದ ಡಾಮರು ರಸ್ತೆಯ  ಮೇಲೆ. ಆತನ ಮುಖದಮೇಲೂ ತಣ್ಣನೆ ಬಿದ್ದಿತೊಂದು ಹನಿ. ಎಲ್ಲಿಯೋ ಒಂದೆಡೆ     ಛಟ್ ಛಟಿಲೆಂದು ಸದ್ದು ಮಾಡುತ್ತ ಸಿಡಿಲೆರಗಿತು. ಬಿರುಸಾದ ಮಳೆಯೇ ಸಂದೇಹ   ವಿರలిల్ల.
     ಆ ಬೀದಿಯ ಮೂಲೆಯಲ್ಲಿದ್ದ ಬೀಡದ ಅಂಗಡಿಯವನು ಅವಸರ ಅವಸರ      ವಾಗಿ ಕದವಿಕ್ಕುತ್ತಿದ್ದ _ಮಳೆ ಸುರಿಯುವುದಕ್ಕೆ ಮುಂಚೆ ಮನೆ ಸೇರಬೇಕೆಂದು. ಅಷ್ಟ      ರಲ್ಲೆ ಅಂಗಡಿಯ ಬೆಳಕಿನ ಕಡೆಗೆ ಧಾವಿಸಿ ಬರುತ್ತ ಯಾರೋ ಒಬ್ಬನೆನ್ನುತಿದ್ದ.
     “ಮೂರುಕಾಲಿನ ಬೀಡಿ ಕೊಟ್ಭಿ ಡಪ್ಪೋ!"
      ಕತ್ತలు ಕವಿದಿದ್ದ ಬೀదియల్లి ಬೆಳಕ್ಕು ಬೀರುತ್ತ, ಪ್ರಯಾಣಿಕರಿಲ್ಲದೆ ಖಾలి ಯಾಗಿದ್ದೊಂದು ಬಸ್ಸು ವೇಗವಾಗಿ ಓಡಿತು. ಮುರಲೀಧರನಿಗೆ ಗೊತ್ತಿತ್ತು-ಅದು      ಕೊನೆಯ ಬಸ್ಸು, ಧಾವಿಸುತ್ತಿದ್ದುದು ಶೆಡ್ಡಿನ ಕಡೆಗೆ.. ಆ ಚಾಲಕನಿಗನೂ ಆತುರವೇ...
      ಹತ್ತು ಗಂಟೆಯಾಯಿತು ಹಾಗಾದರೆ.
     ಶೇಷಣ್ಣ ನವರ ವಠಾರದ ಹೆಸಬ್ಬಾಗಿಲಿನಿಂದ ಹೆಣ್ಣುಧ್ವನಿಯೊಂದು ಕರೆಯು

ತಿತ್ತು.

  "ಶ್ರೀಧರಾ!ಶ್ರೀಧರಾ!"
   ಮಳೆ ಬಂತು, ಮಗ ಬರಲಿಲ್ಲವೆಂದು ಕಾತರವೇನೋ.
   ಮೂರಲಿಗಿದಿರಾಗಿ ಯಾರೋ ధాವಿಸಿ బరుత్తిದ್ದರು. ಇಬ್ಬರು.
   ఒಬ್ಬನೆನ್ನುತ್ತಿದ್ದ:
   “ಓಡು!ಬಂದ್ಬಿಡ್ತು!”
   ಇನ್ನೋಬ್ಬನೆನ್ನುತ್ತಿದ್ದ:
   "ಶುರುವಾಗೋದರೊಳಗೇ ಮನೆ ಸೇರ್‍ತಿವಲ್ಲ ಸದ್ಯಃ!"
   ಯಾರೋ ತಿಳಿಯದು. ಹತ್ತಿರದ ಮನೆಗಳವರೇ ಇರಬೇಕು. ಮುರಲಿ ಬದಿಗೆ      ಸರಿದು, ಓಡುತ್ತಿದ್ದವರಿಗೆ ಹಾದಿ ಮಾಡಿಕೊಟ್ಟ. ಕಾಣಿಸಲಿಲ್ಲವೆಂದು ಢಿಕ್ಕಿಹೊಡೆದು 
                                                         42