ಕಾಲೇಜು ಆರಂಭವಾಗುವ ಹೊತ್ತಿಗೆ ಮುರಲೀಧರ ಬೆಂಗಳೂರಿಗೆ ಬಂದ. ಆ ಪರಿಚಿತರ ಮನೆ ಅಲ್ಲಿರಲಿಲ್ಲ. ಅವರಿಗೆ ದಾವಣಗೆರೆಗೆ ವರ್ಗವಾಗಿತ್ತು.
ಆದರೂ ಎದೆಗುಂದದೆ ಆತ,ಐದು ರೂಪಾಯಿ ಬಾಡಿಗೆಗೆ ಒಂದು ಕೊಡಿ ಗೊತ್ತು ಮಾಡಿದ. ಒಂದೆರಡು ಕಡೆ ವಾರಾನ್ನ ದುಸ್ಸಾಧ್ಯವಾಗಿರಲಿಲ್ಲ. ಆದರೂ ಅದನ್ನು ಇಷ್ಟಪಡದೆ ಸ್ವಂತ ಅಡುಗೆಗೆ ಕೈ ಹಾಕಿದ. ಬೇಯಿಸುತ್ತಿದ್ದುದು ಅನ್ನ ಮಾತ್ರ.ಒಂದಾಣೆಯ ಸಾರು ಹೋಟೆಲಿನಿಂದ ಬರುತ್ತಿತ್ತು. ಅದೇ ಎರಡು ಹೊತ್ತಿಗೂ, ಹಣ ಮುಗಿಯುತ್ತ ಬಂತೆಂದು ಮುರಲೀಧರ, ಇತರ ಹುಡುಗರು ಪುಸ್ತಕ ಕೊಂಡುಕೊಳ್ಳುತ್ತಿದ್ದ ಹೊತ್ತಿನಲ್ಲಿ ತನ್ನಲ್ಲಿದ್ದ ಒಂದೆರಡನ್ನು ಮಾರಿದ.
ಬಳಿಕ ಎರಡು ಮೂರು ಕಡೆ ಬೆಳಗ್ಗೆಯೂ ಸಂಜೆಯೂ ಪಾಠ ಗೊತ್ತುಮಾಡಿ ಕೊಂಡ ಆತ. ఆ ಸಂಪಾದನೆಯಿಂದ ಸರಾಗವಾಗಿ ಉಸಿರಾಡುವುದು ಸಾಧ್ಯವಾಯಿತು.ಶಂಕರ ಐಯರ್ ನಡೆಸುತಿದ್ದ ಭೋಜನ ಶಾಲೆಯಲ್ಲಿ ದಿನಕ್ಕೊಂದು ಊಟ ಮಾಡಿದ.
ಅಸಹಾಯನಾಗಿ,'ಇನ್ನು ಸಾಕು, ಊರಿಗೆ ಹೊರಟು ಬಿಡೋಣ' ಎನ್ನುವ ಯೋಚನೆಗಳು ಎಷ್ಟೋ ಸಾರೆ ಬಂದಿದ್ದುವು ಆತನಿಗೆ. ಹಾಗಾಗುತ್ತಿದ್ದುದು ವೈಯಕ್ತಿಕ ಸಂಕಟಗಳು ತೀವ್ರವಾದಾಗ...
ವೈಯಕ್ತಿಕ ಸಂಕಟ...
ತಲೆಯ ಮೇಲೊಂದು ಸೂರಿತ್ತು. ಆದರೂ ಮಳೆಯಿಂದ ರಕ್ಷಣೆ ಇರಲಿಲ್ಲ.ತನ್ನಷ್ಟು ಅನುಕೂಲವೂ ಇರದ ಸಹಸ್ರ ಸಹಸ್ರ ಜನ. ಅವರೆಲ್ಲ ತೋಯಿಸಿಕೊಳ್ಳುತ್ತಿದ್ದರು,ತಲೆಯ ಮೇಲೆ ಬರಿಗೈ ಇರಿಸಿ. ತನ್ನನ್ನೂ ಮಳೆ ತೋಯಿಸುತ್ತಿತ್ತು. ಆದರೆ 'ಕೊಡೆ' ಇತ್ತು ತನಗೆ. ಈ ಪ್ರಪಂಚದ ದೃಷ್ಟಿಯಲ್ಲಿ ಕೊಡೆ ಇದ್ದೂ ತೋಯಿಸಿ ಕೊಳ್ಳುವವರೇ ವಾಸಿ,ಏನೂ ಇಲ್ಲದವರಿಗಿಂತ!
ಬದುಕು ಅಸಹನೀಯ ಎನಿಸುತ್ತಿದ್ದ ಘಳಿಗೆಗಳು. ಆದರೆ ಹಾಗಿದ್ದುದು ತನ ಗೊಬ್ಬನಿಗೇ ಏನು? ತನ್ನೊಬ್ಬನ ಆವರಣವನ್ನು ದಾಟಿ ಸುತ್ತಲೂ ಹತ್ತು ಕಡೆ ನೋಡಿ ದಾಗ ತನ್ನ ಪ್ರತಿಬಿಂಬಗಳೇ ಕಾಣಿಸುತ್ತಿರಲಿಲ್ಲವೆ ಆತನಿಗೆ? ತನ್ನ ಆರ್ತನಾದದ ಪ್ರತಿ ಧ್ವನಿಯೇ ಕೇಳಿಸುತ್ತಿರಲಿಲ್ಲವೆ?...
....ಜೋರೋ...ಚಿರಿ ಚಿರಿ ಚಿರಿ...ಚಿಟ್...ಚಿಟ್....
ಅರ್ಧ ತುಂಬಿದ್ದ ಬಕೀಟು ಮಾತ್ರವಲ್ಲ, ಹೊರಗಿನ ಭೂಮಿ ಕೂಡ.
ಮಳೆ ನಿಂತಿತೇನೂ ಹಾಗಾದರೆ?
ಹೌದು, ನಿಂತಿತ್ತು. ರಭಸ ಕಡಮೆಯಾಗಿ ಈಗ ಬೀಳುತ್ತಿದ್ದುದು ಬರಿಯ ಹನಿ...ತಟ ಪಟ...ಬರಿಯ ಹನಿ.
ಆದರೂ ಧೋ ಧೋ ಎಂದು ಸದ್ದು ಕೇಳುತ್ತಿತ್ತು.ಚರಂಡಿಯಲ್ಲಿ ಹರಿಯುತ್ತಿದ್ದ ನೀರು.
ಪುಟ:ದೀಕ್ಷೆ.pdf/೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ದೀಕ್ಷೆ
333