ಈ ಪುಟವನ್ನು ಪರಿಶೀಲಿಸಲಾಗಿದೆ
ದೀಕ್ಷೆ 387
ನಾರಣಪ್ಪ ಏಳುತ್ತಿದ್ದಂತೆ ಗುಸುಗುಸು ಮಾತನಾಡಿಕೊಂಡರು ಹುಡುಗರು,
ಅವನಲ್ಲಿ ಅಂತಹ ಸಾಮರ್ಥ್ಯವಿರಬಹುದೆಂದು ಊಹಿಸಿಯೇ ಇರಲಿಲ್ಲ ಯಾರೂ.
“ಇಲ್ಲ ಸಾರ್” ಎಂದ ನಾರಣಪ್ಪ, “ಆದರೆ ಸಂಪಾದಕ ಮಂಡಲಿಗೆ ಬೇರೊಬ್ಬರ
ಹೆಸರು ಸೂಚಿಸ್ತೀನಿ.”
"ಯಾರು?”
“ಮುರಲೀಧರ್, ಅವರು ಕತೆ ಬರೀತಾರೆ. ಹಿಂದೆ ಕೈಬರೆಹದ ಪತ್ರಿಕೆ ನಡೆಸಿ
ದಾರೆ. ಹೀಗಾಗಿ ಸಂಪಾದಕನ ಕೆಲಸದ ಅನುಭವವೂ ಇದೆ.”
ಅಷ್ಟಾದರೂ ಸಲಹೆ ಬಂತಲ್ಲ ಎಂದು ಶ್ರೀಕಂಠಯ್ಯ ಮುರಲೀಧರನನ್ನು
ಹುಡುಕಿದರು.
ಹುಡುಗರ ಗುಜುಗುಜು ಧ್ವನಿ ಗಟ್ಟಿಯಾಯಿತು. “ಮುರಲೀಧರ್, ಮುರಲೀ
ಧರ್!” ಎಂದು ಸ್ವರಗಳು ಕೇಳಿಸಿದುವು.
ಅನಿವಾರ್ಯವಾಗಿ ಮುರಲೀಧರ ಎದ್ದು ನಿಂತ. ನಾರಣಪ್ಪ ಹೀಗೂ ಮಾಡ
ಬಹುದೆ? ಎಂದು ಮೊದಲು ಸಿಟ್ಟು ಬಂತು ಆತನಿಗೆ, ಬಳಿಕ, ಸ್ನೇಹಿತ ಹೀಗೆ ಹೇಳದೆ
ಇರುತ್ತಿದ್ದರೇ ಚೆನ್ನಾಗಿತ್ತು__ಎಂಬ ಸಂಕೋಚ ಅವನನ್ನು ಆವರಿಸಿತು. ಏನಾದರೂ
ಒಂದಿಷ್ಟು ಬರೆಯಲು ಒಳ್ಳೆಯ ಅವಕಾಶ ಒದಗಿತೆಂಬ ಸಮಾಧಾನವೂ ಮೂಡಿತು.
ಅಧ್ಯಾಪಕರು ಕೇಳಿದರು:
“ಏನಯ್ಯಾ, ಸಂಪಾದಕ ಮಂಡಲೀಲಿ ಇದ್ದೀಯಾ?”
ಇದು ತಾನು ಹೊರಲಾರದ ಭಾರವಿದ್ದಿತೆಂದು ಮುರಲೀಧರ ಸ್ವಲ್ಪ ದಿಗಿಲು
ಗೊಂಡ.
“ನನ್ನ ಕೈಲಾಗುತ್ತೋ ಇಲ್ಲೋ ಸಾರ್.”
ಈತನನ್ನು ಸೇರಿಸಿಕೊಳ್ಳುವುದೇ ಸರಿ___ಎಂದು ಆಗಲೇ ನಿರ್ಧರಿಸಿದ
ಶ್ರೀಕಂಠಯ್ಯನೆಂದರು:
“ಸುಲಭದ ಕೆಲಸ ಮುರಲೀಧರ್. ನಾನಿದ್ದೀನಲ್ಲ ಜತೇಲಿ. ಕೂತ್ಕೊ."
'ಒಲ್ಲೆ' ಎನ್ನಲು ಅವಕಾಶವನ್ನೇ ಅವರು ಕೊಡಲಿಲ್ಲ. ನಾರಣಪ್ಪನ ಮುಖ
ಅರಳಿತು. ಮುರಲೀಧರ ಆತನನ್ನೇ ದಿಟ್ಟಿಸಿದ. ದುರದುರನೆ ನೋಡುತ್ತಿದ್ದಂತೆ
ಕಂಡರೂ ಆ ನೋಟದಲ್ಲಿ ತುಂಬಿದ್ದುದು ಒಲವು ಮಾತ್ರ.
“ಇನ್ನೂ ಒಬ್ಬರ ಹೆಸರು ಹೇಳೀಪ್ಪಾ, ಈ ತರಗತಿಯಿಂದ ಇಬ್ಬರು ಬೇಕು,”
ಎಂದರು ಶ್ರೀಕಂಠಯ್ಯ.
ತರಗತಿಯ ಒಂದು ವಿಭಾಗ ಗಟ್ಟಿಯಾಗಿ ಸಲಹೆ ನೀಡಿತು.
“ಮಹದೇವಯ್ಯ ಸಾರ್.”
ಮಹದೇವಯ್ಯ ಆಕ್ಷೇಪಿಸಲಿಲ್ಲ.
“ಸರಿ, ಇಬ್ಬರಾದರು, ಸಾಕು,” ಎಂದರು ಶ್ರೀಕಂಠಯ್ಯ, ನಿಟ್ಟುಸಿರು ಬಿಟ್ಟು,